Quantcast
Channel: Life Style | Kannada Dunia | Kannada News | Karnataka News | India News
Viewing all 14227 articles
Browse latest View live

ಸೀರೆ ಧರಿಸಿದಾಗ ಆಕರ್ಷಕವಾಗಿ ಕಾಣಬೇಕೆಂದರೆ ಈ ವಿಚಾರ ತಿಳಿದಿರಲಿ

$
0
0

ಹಲವು ರೀತಿಯ ಫ್ಯಾಶನ್ ಡ್ರೆಸ್ ಧರಿಸಿರುವ ಮಹಿಳೆಯರಿಗಿಂತ ಸೀರೆ ಉಟ್ಟ ಮಹಿಳೆಯರೇ ತುಂಬಾ ಅಂದವಾಗಿ ಆಕರ್ಷಕವಾಗಿ ಕಾಣುವುದು. ಹೆಣ್ಣಿಗೆ ಸೀರೆಯೇ ಅಂದ ಎನ್ನುವಂತೆ ಹೆಣ್ಣು, ಸೀರೆ ಧರಿಸಿದರೆ ಅವಳ ಚೆಂದ ನೋಡೋದೆ ಕಣ್ಣಿಗೆ ಹಬ್ಬ. ಹೆಚ್ಚಾಗಿ ಮಹಿಳೆಯರು ವಿಶೇಷ ಸಮಾರಂಭಗಳಲ್ಲಿ ಸೀರೆಯನ್ನು ಧರಿಸುತ್ತಾರೆ. ಆದರೆ ಮಹಿಳೆಯರು ಸೀರೆಯಲ್ಲಿ ನೋಡಲು ಅಂದವಾಗಿ ಕಾಣಲು ಸೀರೆಯ ಬಣ್ಣ ಒಂದೇ ಮುಖ್ಯವಾಗುವುದಿಲ್ಲ. ಜೊತೆಗೆ ಸೀರೆ ಉಡುವ ರೀತಿ, ಚಪ್ಪಲಿ, ಲಂಗ, ಬ್ಲೌಸ್, ಆಭರಣ ಎಲ್ಲವೂ ಮುಖ್ಯವಾಗುತ್ತದೆ.

ಮಹಿಳೆಯರು ಬೇರೆ ಬೇರೆ ಸ್ಟೈಲ್ ನಲ್ಲಿ ಸೀರೆಗಳನ್ನು ಉಡಬಹುದು. ಆದರೆ ಯಾವ ಶೈಲಿಯಲ್ಲಿ ಉಟ್ಟರೆ ನೀವು ಆಕರ್ಷಕವಾಗಿ ಕಾಣುತ್ತಿರೋ ಅದೇ ಶೈಲಿಯಲ್ಲಿ ಸೀರೆ ಉಟ್ಟರೆ ಉತ್ತಮ. ಸೀರೆಯನ್ನು ಸೊಂಟಕ್ಕಿಂತ ತುಂಬಾ ಮೇಲೆ ಅಥವಾ ತುಂಬಾ ಕೆಳಗೆ ಉಡೋದು ಬೇಡ. ತೆಳ್ಳಗೆ-ಬೆಳ್ಳಗೆ ಇರುವವರು ಹೊಕ್ಕಳ ಕೆಳಗೆ ಸೀರೆ ಉಟ್ಟರೆ ತುಂಬಾ ಆಕರ್ಷಕವಾಗಿ ಕಾಣುತ್ತೀರಿ. ಆದರೆ ದಪ್ಪವಾಗಿರುವವರು ಮಾತ್ರ ಹೊಕ್ಕಳ ಕೆಳಗೆ ಸೀರೆ ಉಡಬೇಡಿ. ಯಾಕೆಂದರೆ ಇದರಿಂದ ನಿಮ್ಮ ಹೊಟ್ಟೆ ದೊಡ್ಡದಾಗಿ ಕಾಣುತ್ತದೆ.

ಹಾಗೇ ಸೀರೆಯ ಜೊತೆಗೆ ಒಳಗೆ ತೊಡುವ ಲಂಗದ ಬಣ್ಣ ಕೂಡ ಇಲ್ಲಿ ಮುಖ್ಯವಾಗುತ್ತದೆ. ನೀವು ಯಾವ ಬಣ್ಣದ ಸೀರೆ ಧರಿಸುತ್ತೀರೋ ಅದೇ ಬಣ್ಣದ ಒಳ ಲಂಗವನ್ನು ಧರಿಸಬೇಕು. ಒಂದು ವೇಳೆ ಬೇರೆ ಬಣ್ಣದ ಲಂಗವನ್ನು ಧರಿಸಿದರೆ ಮುಜುಗರಕ್ಕೆ ಒಳಗಾಗುವ ಪರಿಸ್ಥಿತಿ ಎದುರಾಗಬಹುದು. ಹಾಗೇ ಬ್ಲೌಸ್ ಒಳಗೆ ಧರಿಸುವ ಬ್ರಾ ಹೊರಗೆ ಕಾಣದ ಹಾಗೇ ನೋಡಿಕೊಳ್ಳಬೇಕು.

ಕೆಲ ಮಹಿಳೆಯರು ಸೀರೆ ಧರಿಸಿದಾಗ ದೊಡ್ಡ ಗಾತ್ರದ ಹ್ಯಾಂಡ್ ಬ್ಯಾಗ್ ನ್ನು ಹಿಡಿದು ಬರ್ತಾರೆ. ಇದರಿಂದ ಅವರು ನೋಡಲು ಸ್ಕೂಲ್ ಟೀಚರ್ ನಂತೆ ಕಾಣುತ್ತಾರೆ. ಹಾಗಾಗಿ ಪಾರ್ಟಿ, ಸಮಾರಂಭಗಳಿಗೆ ಹೋಗುವಾಗ ಸೀರೆ ಧರಿಸಿದರೆ ಚಿಕ್ಕದಾದ ಹ್ಯಾಂಡ್ ಬ್ಯಾಗ್ ಅಥವಾ ಸಣ್ಣ ಪರ್ಸ್ ನ್ನು ತೆಗೆದುಕೊಂಡು ಹೋದರೆ ನೋಡಲು ಆಕರ್ಷಕವಾಗಿರುತ್ತೆ.

ಹಾಗೇ ಸೀರೆ ಸರಿ ಹೊಂದುವ ಚಪ್ಪಲಿಯನ್ನು ಧರಿಸಿ. ಚಪ್ಪಲಿ ಕಲರ್ ಸೀರೆ ಕಲರ್ ಗೆ ಮ್ಯಾಚ್ ಆದರೆ ಇನ್ನೂ ಆಕರ್ಷವಾಗಿರುತ್ತದೆ. ಆದರೆ ಚಪ್ಪಲಿ ಕಾಣಬೇಕು ಅಂತ ಸೀರೆಯನ್ನು ಪಾದಕ್ಕಿಂತ ಮೇಲೆ ಬರುವ ಹಾಗೆ ಉಡಬೇಡಿ. ಸೀರೆ ಯಾವಾಗಲೂ ಪಾದಕ್ಕಿಂತ ಕೆಳಗೆ ಇರಲಿ.


ಬೆಳಗಿನ ಆಯಾಸಕ್ಕೆ ಮನೆ ಮದ್ದು

$
0
0
25_10_2016-weakness

ಬೆಳಿಗ್ಗೆ ಎದ್ದ ತಕ್ಷಣ ಆಯಾಸ, ಆಲಸ್ಯ ಎನ್ನುವವರು ಅನೇಕ ಮಂದಿ. ಇದಕ್ಕೆ ಅನೇಕ ಕಾರಣಗಳಿವೆ. ದೀರ್ಘ ಕಾಲದ ಅಸ್ವಸ್ಥತೆ, ನಿದ್ರಾಹೀನತೆ, ಕಳಪೆ ಆಹಾರ, ಥೈರಾಯ್ಡ್, ಅನಿಯಮಿತ ದಿನಚರಿಗಳು, ದೇಹದಲ್ಲಿ ಅತಿಯಾದ ಆಮ್ಲ ಇರುವುದು ಮುಖ್ಯ ಕಾರಣ.

ಬಿಡುವಿಲ್ಲದ ಕೆಲಸದಿಂದಾಗಿ ಎಲ್ಲರಿಗೂ ಸುಸ್ತಾಗೋದು ಕಾಮನ್. ಆದ್ರೆ ರಾತ್ರಿ ಸುಖಕರ ನಿದ್ದೆ ಬಂದಿದ್ದರೂ ಕೆಲವೊಬ್ಬರಿಗೆ ಬೆಳಿಗ್ಗೆ ಆಯಾಸ ಕಾಣಿಸಿಕೊಳ್ಳುತ್ತದೆ. ಅಂತವರು ತಮ್ಮ ದಿನಚರಿಯಲ್ಲಿ ಹಾಗೂ ಆಹಾರದಲ್ಲಿ ಕೆಲವೊಂದು ಬದಲಾವಣೆ ಮಾಡಿಕೊಂಡಲ್ಲಿ ಈ ಸಮಸ್ಯೆಯಿಂದ ಮುಕ್ತಿ ಪಡೆಯಬಹುದು.

ದೇಹದಲ್ಲಿ ನೀರಿನ ಪ್ರಮಾಣ ಕಡಿಮೆಯಾಗಿದ್ದರೆ ಆಯಾಸ ಕಾಣಿಸಿಕೊಳ್ಳುತ್ತದೆ. ಹಾಗಾಗಿ ಸಾಕಷ್ಟು ನೀರು ಸೇವಿಸುವುದನ್ನು ಅಭ್ಯಾಸ ಮಾಡಿಕೊಳ್ಳಿ. ಬಿಸಿ ನೀರನ್ನು ಬಾಟಲಿಗೆ ಹಾಕಿ ಕೈಕಾಲುಗಳಿಗೆ ಶಾಖ ಕೊಟ್ಟಕೊಳ್ಳಬಹುದು.

ಸುಸ್ತಾದಾಗ ಚಾಕೋಲೇಟ್ ತಿನ್ನಿ. ಚಾಕೋಲೇಟ್ ತಕ್ಷಣ ಆಯಾಸವನ್ನು ಕಡಿಮೆ ಮಾಡುತ್ತದೆ. ಕೋಕೋದಲ್ಲಿ ಆಯಾಸ ಕಡಿಮೆ ಮಾಡುವ ಶಕ್ತಿ ಇದೆ.

ಪ್ರತಿದಿನ ಒಂದೇ ಸಮಯಕ್ಕೆ ಮಲಗುವುದು ಹಾಗೂ ಏಳುವುದನ್ನು ಅಭ್ಯಾಸ ಮಾಡಿಕೊಳ್ಳಿ. ಬೇಗ ಮಲಗಿ ಬೇಗ ಏಳುವುದನ್ನು ರೂಢಿಸಿಕೊಳ್ಳಿ.

ಎದ್ದ ತಕ್ಷಣ ತಣ್ಣೀರಿನಲ್ಲಿ ಸ್ನಾನ ಮಾಡಿ. ಇದು ನಿಮ್ಮನ್ನು ರಿಫ್ರೆಶ್ ಮಾಡುತ್ತದೆ. ಜೊತೆಗೆ ರಕ್ತಸಂಚಾರ ಸುಲಭವಾಗುವಂತೆ ಮಾಡುತ್ತದೆ.

ಮುಂಜಾನೆ ಬೇಗ ಎದ್ದು ಮನೆಯಲ್ಲಿ ವ್ಯಾಯಾಮ ಮಾಡಿ. ಇದರಿಂದ ಆಯಾಸ ಕಡಿಮೆಯಾಗಿ ಹಿತವೆನಿಸುತ್ತದೆ.

ಬೆಳಿಗ್ಗೆ ಬಿಸಿ ಬಿಸಿ ಟೀ ಕುಡಿಯಿರಿ. ತುಳಸಿ ಅಥವಾ ಪುದೀನಾ ಟೀ ಸೇವನೆ ಮಾಡುವುದು ಒಳ್ಳೆಯದು.

ಬೆಳಿಗ್ಗೆ ಉಪಹಾರದ ಜೊತೆ ಹಸಿ ತರಕಾರಿ ಹಾಗೂ ತಾಜಾ ಹಣ್ಣಿನ ರಸವನ್ನು ಕುಡಿಯಿರಿ. ಇದು ಆರೋಗ್ಯಕ್ಕೆ ಒಳ್ಳೆಯದು. ಹಾಗೆ ದೇಹದಲ್ಲಿರುವ ಆಯಾಸವನ್ನು ಕಡಿಮೆ ಮಾಡುತ್ತದೆ.

ತುಂಬಾ ಆಯಾಸ, ನೋವು ಎನ್ನಿಸಿದಲ್ಲಿ ದೇಹಕ್ಕೆ ಮಸಾಜ್ ಮಾಡಿಸಿಕೊಳ್ಳಿ ಅಥವಾ ಮನೆಯಲ್ಲಿ ನೀವೇ ಮಾಡಿಕೊಳ್ಳಿ. ಇದರಿಂದ ರಕ್ತ ಸಂಚಾರ ಸುಲಭವಾಗಿ ಹಿತವೆನಿಸುತ್ತದೆ.

ಹಿಮೋಗ್ಲೋಬಿನ್ ಹಾಗೂ ರಕ್ತಹೀನತೆ ಸಮಸ್ಯೆಗೆ ಮುಕ್ತಿ ನೀಡಲು ಕಬ್ಬಿಣಾಂಶವಿರುವ ಆಹಾರವನ್ನು ಸೇವಿಸಿ.

ಧೂಮಪಾನ ತ್ಯಜಿಸಲು ಬಯಸಿದರೆ ತಪ್ಪದೆ ಈ ಆಹಾರಗಳನ್ನು ಸೇವಿಸಿ

$
0
0

ಕೆಲವರು ಧೂಮಪಾನ ಬಿಡಬೇಕೆಂದು ಎಷ್ಟೇ ಪ್ರಯತ್ನಿಸಿದರೂ ಅದು ಸಾಧ್ಯವಾಗುವುದಿಲ್ಲ. ಅಂತವರು ಈ ಆಹಾರಗಳನ್ನು ಸೇವನೆ ಮಾಡುವ ಅಭ್ಯಾಸ ಮಾಡಿಕೊಂಡ್ರೆ ಧೂಮಪಾನದಿಂದ ದೂರವಿರಬಹುದು.

ಹಣ್ಣುಗಳು : ಸಾಮಾನ್ಯವಾಗಿ ಕೆಲವೊಂದು ಹಣ್ಣುಗಳು ನಿಮ್ಮ ಧೂಮಪಾನ ಬಿಡಲು ಸಹಾಯ ಮಾಡುತ್ತವೆ. ನೀವು ಧೂಮಪಾನ ಮಾಡಬೇಕು ಅನಿಸಿದರೆ ಅಂತಹ ಸಮಯದಲ್ಲಿ ಸ್ಟ್ರಾಬೆರಿ ಮತ್ತು ಬ್ಲೂಬೆರ್ರಿಗಳಂತಹ ಕೆಲವು ಹಣ್ಣುಗಳನ್ನು ನಿಮ್ಮ ಬಾಯಿಯಲ್ಲಿ ಹಾಕಿಕೊಳ್ಳಿ.

ಡಾರ್ಕ್ ಚಾಕೊಲೇಟ್ : ನಿಮಗೆ ಧೂಮಪಾನ ಮಾಡಬೇಕು ಅಂತ ಆಸೆಯಾದಾಗ ಅಂತಹ ಸಮಯದಲ್ಲಿ ಡಾರ್ಕ್ ಚಾಕೊಲೇಟ್ ತೆಗೆದುಕೊಂಡು ಬಾಯಿಯಲ್ಲಿ ಕಡಿಯಿರಿ ಇದು ಆರೋಗ್ಯಕ್ಕೂ ಒಳ್ಳೇದು.

ಪಾಪ್ ಕಾರ್ನ್ : ಇದು ವಿಚಿತ್ರ ಆಯ್ಕೆಯಂತೆ ತೋರುತ್ತದೆ, ಆದರೆ ಪಾಪ್ ಕಾರ್ನ್ ಸಹಾಯ ಮಾಡುತ್ತದೆ. ಇದು ಕುರುಕಲಾದರೂ ನಿಮ್ಮ ಧೂಮಪಾನ ಮಾಡುವ ಬಯಕೆಯನ್ನು ಆ ಕ್ಷಣಕ್ಕೆ ದೂರ ಮಾಡುತ್ತದೆ. ಆದರೆ ಪಾಪ್ ಕಾರ್ನ್ ತಿನ್ನುವುದನ್ನು ಅಭ್ಯಾಸ ಮಾಡಿಕೊಳ್ಳಬಾರದು.

ಚೂಯಿಂಗ್ ಗಂ : ಇದು ನಿಮ್ಮ ಧೂಮಪಾನ ಚಟಕ್ಕೆ ಬ್ರೇಕ್ ಹಾಕುತ್ತದೆ. ಚೂಯಿಂಗ್ ಒಸಡುಗಳು ನಿಮ್ಮನ್ನು ಧೂಮಪಾನ ಮಾಡದಂತೆ ತಡೆಯುತ್ತದೆ.

ಹಬ್ಬದ ಸಮಯದಲ್ಲಿ ಮಿನುಗುವ ಮುಖ ಕಾಂತಿಗಾಗಿ.…

$
0
0

Woman applying moisturizer cream on face. Close-up fresh woman face.ಹಬ್ಬದ ಸೀಸನ್ ಶುರುವಾಗಿದೆ. ಈ ಸಮಯದಲ್ಲಿ ಸುಂದರವಾಗಿ, ಪರ್ಫೆಕ್ಟ್ ಆಗಿ ಕಾಣಿಸಬೇಕು ಅನ್ನೋ ಆಸೆ ಎಲ್ಲರಿಗೂ ಇರುತ್ತೆ. ಅಷ್ಟೇ ಅಲ್ಲ ವಾತಾವರಣ ಕೂಡ ಬದಲಾಗುವುದರಿಂದ ನಿಮ್ಮ ಚರ್ಮಕ್ಕೆ ಹೆಚ್ಚಿನ ಕಾಳಜಿ ಬೇಕೇ ಬೇಕು.

ಚಳಿಗಾಲ ಆರಂಭವಾಗ್ತಿದ್ದಂತೆ ನಮ್ಮ ಚರ್ಮ ಒಣಗಿ ಹೋಗುತ್ತದೆ. ಹಾಗಾಗಿ ನಿಮ್ಮ ಚರ್ಮಕ್ಕೆ ಬೇಕಾದ ಹೆಚ್ಚು ನೀರಿನಂಶವಿರುವ ಆರೋಗ್ಯಕರ ಆಹಾರವನ್ನು ನೀವು ಸೇವಿಸಬೇಕು. ಇಡೀ ದಿನ ಮುಖ ಕಾಂತಿಯುಕ್ತವಾಗಿರಲು ಏನ್ಮಾಡ್ಬೇಕು ಅನ್ನೋದನ್ನು ನಾವ್ ಹೇಳ್ತೀವಿ.

ಅಕ್ಟೋಬರ್ ನ ಬಿಸಿಲಿಗೆ ಸವಾಲೊಡ್ಡುವ ಮೊದಲ ಅಸ್ತ್ರ ನೀರು. ಹಾಗಾಗಿ ಸಾಕಷ್ಟು ನೀರು ಕುಡಿಯಿರಿ. ನಿಮ್ಮ ದೇಹ ಹೈಡ್ರೇಟ್ ಆಗಿದ್ದಷ್ಟು ನಿಮ್ಮ ಮುಖ ಮತ್ತು ಮೈ ಕಾಂತಿಯುಕ್ತವಾಗಿರುತ್ತದೆ.

ನೀವು ದಕ್ಷಿಣ ಭಾರತದ ಬೀಚ್ ಗಳಿಗೆ ಹೋದ್ರೆ ಎಳನೀರು ಹೆಚ್ಚು ಸೇವಿಸಿ. ಇದು ಕಡಿಮೆ ಕ್ಯಾಲೋರಿ ಹೊಂದಿದ್ದು, ಆ್ಯಂಟಿ ಒಕ್ಸಿಡೆಂಟ್ ಕೂಡ ಹೌದು. ಎಳನೀರಿನಲ್ಲಿರುವ ವಿಟಮಿನ್ ಸಿ ಮತ್ತು ಇತರ ಮಿನರಲ್ಸ್ ನಿಮ್ಮ ಚರ್ಮವನ್ನು ಉತ್ಕೃಷ್ಟಗೊಳಿಸುತ್ತವೆ.

ಅತಿಯಾದ ಎಣ್ಣೆ ಅಂಶವಿರುವ ಆಹಾರ ಸೇವಿಸಿದ್ರೆ ಮೊಡವೆ ಸಮಸ್ಯೆ ಶುರುವಾಗಬಹುದು. ವಿಟಮಿನ್ ಸಿ ಹೇರಳವಾಗಿರುವ ಕಿತ್ತಳೆ, ನಿಂಬೆ ಮತ್ತು ಕಿವಿ ಹಣ್ಣುಗಳನ್ನು ಹೆಚ್ಚಾಗಿ ಸೇವಿಸಿ. ನಿಮ್ಮ ಚರ್ಮದಲ್ಲಿ ತೇವಾಂಶವನ್ನು ಅವು ನಿಯಂತ್ರಿಸುತ್ತವೆ. ವಿಟಮಿನ್ ಸಿ ಚರ್ಮ ಸುಕ್ಕುಗಟ್ಟದಂತೆ ತಡೆಯುತ್ತದೆ.

ದಿನಪೂರ್ತಿ ಬಿಸಿಲಲ್ಲಿ ಕಳೆದ್ರೆ ಬಳಿಕ ನೈಸರ್ಗಿಕ ಆ್ಯಂಟಿ ಟ್ಯಾನ್ ಪೀಲ್ ಆಫ್ ಬಳಸಿ, ಸನ್ ಬರ್ನ್ ನಿಂದ ಪಾರಾಗಿ. ಕಿತ್ತಳೆಯ ಪೀಲ್ ಆಫ್ ಮಾಸ್ಕ್ ಗಳ ಬಳಕೆ ಒಳ್ಳೆಯದು. ಕಿತ್ತಳೆಯಲ್ಲಿ ವಿಟಮಿನ್ ಸಿ ಹೇರಳವಾಗಿರುವುದರಿಂದ ಅದು ನೈಸರ್ಗಿಕ ಕ್ಲೆನ್ಸರ್ ನಂತೆ ಕೆಲಸ ಮಾಡುತ್ತದೆ. ಜೇನುತುಪ್ಪದಲ್ಲಿ ಕೂಡ ಆ್ಯಂಟಿ ಬ್ಯಾಕ್ಟೀರಿಯಲ್ ಅಂಶಗಳಿವೆ.

ಡಯಟ್ ಸೋಡಾ ನಿಮ್ಮ ಆರೋಗ್ಯಕ್ಕೆ ಮಾರಕ..!

$
0
0

diet-sodaಹೆಲ್ತಿಯಾಗಿರಬೇಕು ಅಂತಾ ನೀವೇನಾದ್ರೂ ಡಯಟ್ ಸೋಡಾ ಕುಡಿಯುವ ಅಭ್ಯಾಸ ಮಾಡ್ಕೊಂಡಿದ್ರೆ ತಕ್ಷಣವೇ ಅದನ್ನು ನಿಲ್ಲಿಸಿ. ಯಾಕಂದ್ರೆ ರೆಗ್ಯುಲರ್ ಸೋಡಾ ಮತ್ತು ಡಯಟ್ ಸೋಡಾ ಇವೆರಡರ ಪರಿಣಾಮಗಳಲ್ಲಿ ಹೆಚ್ಚಿನ ವ್ಯತ್ಯಾಸವೇನೂ ಇಲ್ಲ. ಇದು ನಿಮ್ಮ ಆರೋಗ್ಯಕ್ಕೆ ಪೂರಕವಾಗುವ ಬದಲು ಮಾರಕವಾಗಬಹುದು.

ಪರ್ಡ್ಯೂ ವಿಶ್ವವಿದ್ಯಾನಿಲಯ ಈ ಬಗ್ಗೆ ಸಂಶೋಧನೆಯೊಂದನ್ನು ನಡೆಸಿದೆ. ಕಳೆದ ಐದು ವರ್ಷಗಳಿಂದ ಸೋಡಾ ಡಯಟ್ ಸೇವನೆ ಮತ್ತದರ ಪರಿಣಾಮಗಳನ್ನು ಅವಲೋಕಿಸಿ ಈ ತೀರ್ಮಾನಕ್ಕೆ ಬಂದಿದೆ. ಕ್ಯಾಲೋರಿಯಿಲ್ಲದ ಸಿಹಿ ತಿನ್ನಬೇಕೆಂಬ ಜನರ ಹಪಹಪಿಕೆಯನ್ನು ಡಯಟ್ ಸೋಡಾದಲ್ಲಿರುವ ಕೃತಕ ಸ್ವೀಟನರ್ಸ್ ತಣಿಸುತ್ತೆ. ಆದ್ರೆ ನಕಲಿ ಸಕ್ಕರೆ ನಿಜವಾದ ಆಹಾರವನ್ನು ನೀಡುವಂತೆ ನಟಿಸುತ್ತೆ, ಅಸಲಿ ಸಿಹಿಯ ನಿರೀಕ್ಷೆಯಲ್ಲಿರುವ ನಿಮ್ಮ ದೇಹ ಅದಕ್ಕೆ ಹೇಗೆ ಸ್ಪಂದಿಸಬೇಕೆಂದು ತಿಳಿಯದೆ ಗೊಂದಲಕ್ಕೊಳಗಾಗುತ್ತದೆ. ಕೊನೆಗೊಮ್ಮೆ ನೀವು ನಿಜವಾದ ಸಿಹಿ ತಿಂದಾಗ ಅದನ್ನು ಪ್ರಕ್ರಿಯೆಗೊಳಿಸಬೇಕೋ ಬೇಡೋ ಎಂಬ ಗೊಂದಲ ನಿಮ್ಮ ದೇಹಕ್ಕೆ ಉಂಟಾಗುತ್ತದೆ.

ಡಯಟ್ ಸೋಡಾ ಡ್ರಿಂಕರ್ ಗಳು ನಿಜವಾದ ಸಿಹಿ ತಿಂದಾಗ ದೇಹ ಬ್ಲಡ್ ಶುಗರ್ ಮತ್ತು ಬ್ಲಡ್ ಪ್ರೆಶರ್ ನಿಯಂತ್ರಿಸುವ ಹಾರ್ಮೋನ್ ಗಳನ್ನು ಉತ್ಪತ್ತಿ ಮಾಡುವುದಿಲ್ಲ, ಸಿಹಿ ರುಚಿ ಇನ್ಸುಲಿನ್ ಬಿಡುಗಡೆಗೆ ಕಾರಣವಾಗುತ್ತದೆ, ಇದ್ರಿಂದ ಬ್ಲಡ್ ಶುಗರ್ ಇಳಿಕೆಯಾಗುತ್ತದೆ. ಕಾರ್ಬೋಹೈಡ್ರೇಟ್ ಸೇವಿಸದೇ ಇದ್ದಲ್ಲಿ ಬ್ಲಡ್ ಶುಗರ್ ಪ್ರಮಾಣ ಕಡಿಮೆಯಾಗಿ ಹಸಿವು ಮತ್ತು ಸಿಹಿ ತಿನ್ನುವ ಬಯಕೆ ಹೆಚ್ಚಬಹುದು. ಕೃತಕ ಸಿಹಿ ನಿಮ್ಮ ಮೆದುಳಿದ ರಿವಾರ್ಡ್ ಸೆಂಟರ್ ಅನ್ನೇ ನಿಲ್ಲಿಸಬಹುದು, ಪರಿಣಾಮ ಕ್ಯಾಲೋರಿಯುಕ್ತ ಸಿಹಿ ಪದಾರ್ಥಗಳಿಗಾಗಿ ನೀವು ಹಾತೊರೆಯುವಂತಾಗುತ್ತದೆ. ಹಾಗಾಗಿ ಡಯಟ್ ಸೋಡಾವನ್ನು ಪ್ರತಿದಿನ ಸೇವಿಸುವ ಹವ್ಯಾಸ ಬೇಡ, ಅಪರೂಪಕ್ಕೊಮ್ಮೆ ತೆಗೆದುಕೊಳ್ಳಿ.

ಮೊಬೈಲನ್ನು ಟಾಯ್ಲೆಟ್ ನಲ್ಲೂ ಬಳಸ್ತೀರಾ…? ಹಾಗಿದ್ರೆ ಓದಿ ಈ ಸುದ್ದಿ

$
0
0
man-in-toilet

ಇದು ಮೊಬೈಲ್ ಜಮಾನಾ. ಯುವ ಜನತೆಯಂತೂ ಮೊಬೈಲ್ ಇಲ್ಲದೆ ಬದುಕಲು ಸಾಧ್ಯವೇ ಇಲ್ಲ ಅನ್ನೋ ಸ್ಥಿತಿ ತಲುಪಿದ್ದಾರೆ. ಆಟ, ಊಟ, ಪಾಠ ಎಲ್ಲಾ ಸಮಯದಲ್ಲೂ ಮೊಬೈಲ್ ಬೇಕು. ಇದೆಲ್ಲಾ ಹಾಗಿರ್ಲಿ ಸ್ನಾನ ಅಥವಾ ಶೌಚಕ್ಕೆ ಹೋಗುವಾಗ್ಲೂ ಮೊಬೈಲ್ ಕೊಂಡೊಯ್ಯುತ್ತಾರೆ.

ಆದ್ರೆ ಎಚ್ಚರವಿರಲಿ, ಮೊಬೈಲ್ ಅನ್ನು ಬಾತ್ ರೂಮ್ ಗೆ ತೆಗೆದುಕೊಂಡು ಹೋದ್ರೆ ನೀವು ರೋಗಗಳಿಗೆ ಆಹ್ವಾನ ಕೊಟ್ಟಂತೆ. ಹಿಂದೆಲ್ಲಾ ಶೌಚಕ್ಕೆ ಹೋಗುವಾಗ ಜೊತೆಗೆ ದಿನಪತ್ರಿಕೆ ಕೊಂಡೊಯ್ಯುವ ಅಭ್ಯಾಸವಿತ್ತು. ಈಗ ಆ ಜಾಗಕ್ಕೆ ಮೊಬೈಲ್ ಬಂದಿದೆ. ಬಾತ್ ರೂಮಿಗೆ ಮೊಬೈಲ್ ಕೊಂಡೊಯ್ಯೋದ್ರಿಂದ ಅದು ನೀರಿನಲ್ಲಿ ಬೀಳುವ ಸಾಧ್ಯತೆ ಇರುತ್ತದೆ.

ಸ್ನಾನದ ಕೋಣೆಗಳಲ್ಲಿ ಕೀಟಾಣು ಮತ್ತು ಬ್ಯಾಕ್ಟೀರಿಯಾಗಳು ಅಪಾರ ಪ್ರಮಾಣದಲ್ಲಿರುತ್ತವೆ. ಅವು ಮೊಬೈಲ್ ಮೇಲೆ ಕುಳಿತುಕೊಳ್ಳುತ್ತವೆ. ನೀವು ಮೊಬೈಲ್ ಅನ್ನು ಬಾಯಿಯ ಸಮೀಪದಲ್ಲಿಟ್ಟುಕೊಂಡು ಮಾತನಾಡಿದಾಗ ನಿಮ್ಮ ದೇಹ ಸೇರಬಹುದು.

ಬಾತ್ ರೂಮಿನಲ್ಲಿ ನೀವು ಮುಟ್ಟಿದ ವಸ್ತುವಿನ ಮೇಲೆಲ್ಲಾ ಕೀಟಾಣುಗಳಿರುತ್ತವೆ. ನಂತರ ನೀವು ಕೈಗಳನ್ನೇನೋ ತೊಳೆದುಕೊಳ್ಳಬಹುದು. ಆದ್ರೆ ಮೊಬೈಲ್ ತೊಳೆಯಲು ಸಾಧ್ಯವಿಲ್ಲ. ಹಾಗಾಗಿ ನಿಮಗೆ ಇನ್ಫೆಕ್ಷನ್ ಕೂಡ ಉಂಟಾಗುವ ಸಾಧ್ಯತೆ ಹೆಚ್ಚು. ಹಾಗಾಗಿ ಸ್ನಾನದ ಕೋಣೆಗೆ ಮೊಬೈಲ್ ಕೊಂಡೊಯ್ಯುವ ಅಭ್ಯಾಸ ಬಿಟ್ಟು ಬಿಡಿ.

ಆಹಾರದ ನಂತ್ರ ನೀವೂ ಟೀ ಕುಡಿತೀರಾ? ಹಾಗಿದ್ರೆ ಇದನ್ನು ಓದ್ಲೇಬೇಕು

$
0
0

ಟೀ ಹೆಸ್ರು ಕೇಳ್ತಿದ್ದಂತೆ ಕೆಲವರ ಮುಖದಲ್ಲಿದ್ದ ಆಯಾಸ ಮಾಯವಾಗುತ್ತದೆ. ಒತ್ತಡ, ಆಯಾಸವಾದಾಗ ನೆನಪಾಗೋದು ಟೀ. ಬಹುತೇಕರು ದಿನಕ್ಕೆ ನಾಲ್ಕೈದು ಬಾರಿ ಟೀ ಸೇವನೆ ಮಾಡ್ತಾರೆ. ಬೆಳಿಗ್ಗೆ ಹಾಸಿಗೆಯಿಂದ ಏಳುತ್ತಲೇ ಟೀ ಕುಡಿದು ಫ್ರೆಶ್ ಆಗುವವರಿದ್ದಾರೆ. ಆಹಾರದ ನಂತ್ರವಂತೂ ಅನೇಕರಿಗೆ ಟೀ ಬೇಕೇಬೇಕು. ಅಂತವರಲ್ಲಿ ನೀವೂ ಒಬ್ಬರಾಗಿದ್ದರೆ ಈ ಸುದ್ದಿಯನ್ನು ಅವಶ್ಯಕವಾಗಿ ಓದಿ.

ಆಹಾರ ಸೇವನೆ ಮಾಡಿದ ತಕ್ಷಣ ಟೀ ಕುಡಿಯೋದು ಅನೇಕರ ಅಭ್ಯಾಸ. ಚಳಿಗಾಲದಲ್ಲಂತೂ ಟೀ ಬೇಕೇಬೇಕು ಎನ್ನುವವರಿದ್ದಾರೆ. ಆದ್ರೆ ಆಹಾರ ಸೇವನೆ ಮಾಡಿದ ತಕ್ಷಣ ಟೀ ಕುಡಿಯೋದು ಆರೋಗ್ಯಕ್ಕೆ ಒಳ್ಳೆಯದಲ್ಲ. ಟೀ ಎಲೆಗಳಲ್ಲಿ ಎಸಿಡಿಟಿ ಗುಣವಿರುತ್ತದೆ. ಆಹಾರ ನಂತ್ರ ಟೀ ಸೇವನೆ ಮಾಡುವುದ್ರಿಂದ ಪ್ರೋಟೀನ್  ಅಂಶ ನಾಶವಾಗಿ ಜೀರ್ಣಕ್ರಿಯೆಗೆ ತೊಂದರೆಯಾಗುತ್ತದೆ.

ಇದ್ರ ಜೊತೆಗೆ ಟೀನಲ್ಲಿರುವ ಕೆಫೀನ್ ಅಂಶ ರಕ್ತದೊತ್ತಡವನ್ನು ಹೆಚ್ಚು ಮಾಡುತ್ತದೆ. ಜೊತೆಗೆ ಕಾರ್ಟಿಸೋಲ್ ಅನ್ನು ಹೆಚ್ಚು ಮಾಡುತ್ತದೆ. ಇದು ದೇಹದ ಅನೇಕ ಸಮಸ್ಯೆಗೆ ಕಾರಣವಾಗುತ್ತದೆ. ಹೃದಯ ಸಂಬಂಧಿ ಸಮಸ್ಯೆ, ಮಧುಮೇಹ, ತೂಕ ಹೆಚ್ಚಾಗುವ ಸಮಸ್ಯೆ ಕಾಡುತ್ತದೆ.

ಟೀಯಲ್ಲಿರುವ ಪಾಲಿಫಿನಾಲ್ ಮತ್ತು ಟ್ಯಾನಿನ್ ದೇಹ ಆಹಾರದಲ್ಲಿರುವ ಕೊಬ್ಬನ್ನು ಹೀರಿಗೊಳ್ಳಲು ಬಿಡುವುದಿಲ್ಲ. ವಿಶೇಷವಾಗಿ ಕಬ್ಬಿಣದ ಅಂಶ ಕಡಿಮೆ ಇರುವ ಮಹಿಳೆಯರು ಆಹಾರದ ತಕ್ಷಣ ಟೀ ಕುಡಿಯಬಾರದು. ಟೀ ಕುಡಿಯದೆ ಇರಲು ಸಾಧ್ಯವೇ ಇಲ್ಲ ಎನ್ನುವವರು ಆಹಾರ ಸೇವನೆ ಮಾಡಿದ ಒಂದು ಗಂಟೆ ನಂತ್ರ ಟೀ ಕುಡಿಯಿರಿ.

ಬಟಾಣಿ, ಆಲೂಗಡ್ಡೆ ಸ್ಯಾಂಡ್ವಿಚ್

$
0
0

ಮನೆಯಲ್ಲಿಯೇ ಸುಲಭವಾಗಿ ಮಾಡಬಹುದಾದ ತಿಂಡಿ ಬಟಾಣಿ, ಆಲೂಗಡ್ಡೆ ಸ್ಯಾಂಡ್ವಿಚ್.

ಬಟಾಣಿ, ಆಲೂಗಡ್ಡೆ ಸ್ಯಾಂಡ್ವಿಚ್ ಗೆ ಬೇಕಾಗುವ ಪದಾರ್ಥ :

ಬಟಾಣಿ : 1 ಕಪ್ (ಬೇಯಿಸಿದ್ದು)

ಆಲೂಗಡ್ಡೆ : 3 ( ಬೇಯಿಸಿದ್ದು)

ಹಸಿರು ಮೆಣಸಿನಕಾಯಿ : 3  (ಸಣ್ಣದಾಗಿ ಕೊಚ್ಚಿದ್ದು)

ಬೇವಿನ ಸೊಪ್ಪು : 3-4 ಎಲೆ

ಕೊತ್ತಂಬರಿ ಪುಡಿ : 1/4 ಟೀ ಚಮಚ

ಕೆಂಪು ಮೆಣಸಿನ ಪುಡಿ : 1/4 ಟೀ ಚಮಚ

ಆಲಿವ್ ಎಣ್ಣೆ : 2 ಟೀ ಚಮಚ

ಬ್ರೆಡ್ : 6 ತುಂಡುಗಳು

ಬೆಣ್ಣೆ ಅಗತ್ಯಕ್ಕೆ ತಕ್ಕಷ್ಟು

ರುಚಿಗೆ ಉಪ್ಪು

ಬಟಾಣಿ, ಆಲೂಗಡ್ಡೆ ಸ್ಯಾಡ್ವಿಂಚ್ ಮಾಡುವ ವಿಧಾನ:

ಒಂದು ಪ್ಯಾನ್ ಗೆ ಆಲಿವ್ ಎಣ್ಣೆ, ಹಸಿರು ಮೆಣಸಿನಕಾಯಿಯನ್ನು ಹಾಕಿ ಫ್ರೈ ಮಾಡಿ. ಇದಕ್ಕೆ ಕಿಚುಕಿದ ಆಲೂಗಡ್ಡೆಯನ್ನು ಹಾಕಿ ಮಿಕ್ಸ್ ಮಾಡಿ. ನಂತ್ರ ಬೇವಿನ ಎಲೆ, ಬೇಯಿಸಿದ ಬಟಾಣಿ, ಕೆಂಪು ಮೆಣಸಿನ ಪುಡಿ, ಕೊತ್ತಂಬರಿ ಪುಡಿ ಹಾಗೂ ಉಪ್ಪನ್ನು ಹಾಕಿ. ಎಲ್ಲವನ್ನೂ ಸರಿಯಾಗಿ ಮಿಕ್ಸ್ ಮಾಡಿ. ನಂತ್ರ ಗ್ಯಾಸ್ ಬಂದ್ ಮಾಡಿ ಮಿಶ್ರಣವನ್ನು ಬದಿಗಿಡಿ.

ಬ್ರೆಡ್ ನ ಎರಡು ತುಂಡುಗಳನ್ನು ತೆಗೆದುಕೊಂಡು ಎಲ್ಲ ಬ್ರೆಡ್ ಗೂ ಬೆಣ್ಣೆ ಹಚ್ಚಿ. ನಂತ್ರ ಮಿಶ್ರಣವನ್ನು ಉಂಡೆ ಮಾಡಿ ಒಂದು ಬ್ರೆಡ್ ತುಂಡಿನ ಮೇಲಿಟ್ಟು ಇನ್ನೊಂದು ಬ್ರೆಡ್ ತುಂಡನ್ನು ಮುಚ್ಚಿ. ಪ್ಯಾನ್ ಬಿಸಿ ಮಾಡಿ, ಅದ್ರ ಮೇಲೆ ಬ್ರೆಡ್ ಇಡಿ. ಎರಡೂ ಕಡೆ ಬ್ರೆಡ್ ಬೆಂದ ನಂತ್ರ ತೆಗೆಯಿರಿ.


ಏಳು ದಿನದಲ್ಲಿ ತೂಕ ಇಳಿಬೇಕೆಂದ್ರೆ ಫಾಲೋ ಮಾಡಿ ಈ ಟಿಪ್ಸ್

$
0
0

ಬೇಗ ತೂಕ ಇಳಿಸಿಕೊಳ್ಳಲು ಯಾವುದು ಸುಲಭ ಉಪಾಯ ಎಂಬುದು ಎಲ್ಲರ ಪ್ರಶ್ನೆ. ಆದಷ್ಟು ಬೇಗ ತೂಕ ಇಳಿಸಿಕೊಳ್ಳಲು ಎಲ್ಲರೂ ಬಯಸ್ತಾರೆ. ಅದಕ್ಕೆ ಕಸರತ್ತು, ಡಯಟ್ ಮಾಡ್ತಾರೆ ನಿಜ. ಆದ್ರೆ ಯಾವುದನ್ನೂ ನಿಯಮಿತವಾಗಿ, ಸರಿಯಾಗಿ ಮಾಡುವುದಿಲ್ಲ. ಹಾಗಾಗಿ ತೂಕ ಇಳಿಯೋದಿಲ್ಲ.

ತೂಕ ಇಳಿಸಲು ಕೆಲ ಟಿಪ್ಸ್ ಗಳನ್ನು ಸರಿಯಾಗಿ ಅನುಸರಿಸಬೇಕಾಗುತ್ತದೆ. ಸಮತೋಲನ ಆಹಾರದಲ್ಲಿ ಪ್ರೋಟೀನ್ ಮುಖ್ಯ ಪಾತ್ರವಹಿಸುತ್ತದೆ. ಪ್ರೋಟೀನ್ ತೂಕ ಹೆಚ್ಚಿಸಲು ಹಾಗೂ ತೂಕ ಇಳಿಸಲು ಎರಡಕ್ಕೂ ನೆರವಾಗುತ್ತದೆ. ಪ್ರೋಟೀನ್ ಯುಕ್ತ ಆಹಾರ ಸೇವನೆ ಮಾಡುವುದ್ರಿಂದ ನಿಮಗೆ ಬೇಗ ಹಸಿವಾಗುವುದಿಲ್ಲ. ಪ್ರೋಟೀನ್  ಸೇವನೆಯಿಂದ ದೇಹದಲ್ಲಿರುವ ಅನವಶ್ಯಕ ಕೊಬ್ಬನ್ನು ಹೊರ ಹಾಕಬಹುದು. ತೂಕ ಇಳಿಸಲು ಬಯಸುವವರು ಸರಿ ಪ್ರಮಾಣದಲ್ಲಿ ಪ್ರೋಟೀನ್ ಆಹಾರವನ್ನು ಸೇವನೆ ಮಾಡಿ. ನಾಲ್ಕು ದಿನ ಮಾಡಿ ಬಿಡಬೇಡಿ. ನಿಯಮಿತವಾಗಿ ಮಾಡುತ್ತ ಬಂದ್ರೆ ಪರಿಣಾಮ ಕಾಣಬಹುದು.

ನಿಮ್ಮ ದೇಹದಲ್ಲಿ ಮೆಟಾಬಾಲಿಸಂ ಪ್ರಮಾಣ ಸರಿಯಾಗಿದ್ದರೆ ನಿಮ್ಮ ತೂಕ ಹೆಚ್ಚಾಗುವುದಿಲ್ಲ. ಗ್ರೀನ್ ಟೀ ಸೇವನೆ, ರಾತ್ರಿ ಸರಿಯಾದ ನಿದ್ರೆ, ಹೆಚ್ಚಿನ ನೀರು ಸೇವನೆ ಮಾಡುತ್ತ ಬಂದ್ರೆ ಕೊಬ್ಬು ಕಡಿಮೆಯಾಗುತ್ತ ಬರುತ್ತದೆ. ಇದ್ರಿಂದ ಸ್ವಾಭಾವಿಕವಾಗಿ ದೇಹದ ತೂಕ ಇಳಿಯುತ್ತ ಬರುತ್ತದೆ. ಹಾಗಾಗಿ ಮೆಟಾಬಾಲಿಸಂ ಪ್ರಮಾಣವನ್ನು ಸರಿಯಾಗಿಡುವ ಆಹಾರವನ್ನು ಹೆಚ್ಚಿನ ಪ್ರಮಾಣದಲ್ಲಿ ಸೇವಿಸುತ್ತ ಬನ್ನಿ.

ಆಹಾರದಲ್ಲಿ ಸಕ್ಕರೆ, ಪಿಷ್ಟ ಹಾಗೂ ಕಾರ್ಬೋಹೈಡ್ರೇಟ್ ಪ್ರಮಾಣವನ್ನು ಕಡಿಮೆ ಪ್ರಮಾಣದಲ್ಲಿ ಸೇವನೆ ಮಾಡಿ. ಸ್ಥೂಲಕಾಯದವರು ಸಕ್ಕರೆ, ಸಿಹಿ ಪದಾರ್ಥ, ಪಿಷ್ಟ ಹಾಗೂ ಕಾರ್ಬೋಹೈಡ್ರೇಟ್ ಇರುವ ಆಹಾರವನ್ನು ಕಡಿಮೆ ಪ್ರಮಾಣದಲ್ಲಿ ಸೇವನೆ ಮಾಡಬೇಕು. ಇದರಿಂದ ಹಸಿವನ್ನು ಕಡಿಮೆ ಮಾಡುವ ಜೊತೆಗೆ ಕ್ಯಾಲೋರಿ ಪ್ರಮಾಣ ಕೂಡ ಕಡಿಮೆಯಾಗುತ್ತದೆ.

ಆಹಾರ ಹಾಗೂ ಜೀವನ ಶೈಲಿಯಲ್ಲಿ ಬದಲಾವಣೆ ಮಾಡಿಕೊಳ್ಳುವುದ್ರಿಂದ ತೂಕ ಇಳಿಸಿಕೊಳ್ಳುವುದು ಸಾಧ್ಯ. ಆದ್ರೆ ವ್ಯಾಯಾಮ ಮಾಡುವವರು ನಿಯಂತ್ರಣ ತಪ್ಪಿ ಆಹಾರ ಸೇವನೆ ಮಾಡಿದ್ರೆ ತೂಕ ಇಳಿಯುವ ಬದಲು ಹೆಚ್ಚಾಗುತ್ತದೆ.

ರಾತ್ರಿ ಮೊಸರು ಸೇವನೆ ಎಷ್ಟು ಒಳ್ಳೆಯದು…?

$
0
0
download

ಮೊಸರು ಆರೋಗ್ಯಕ್ಕೆ ಒಳ್ಳೆಯದು. ಈ ವಿಷಯ ಎಲ್ಲರಿಗೂ ಗೊತ್ತು. ಆದ್ರೆ ಯಾವ ಸಮಯದಲ್ಲಿ ಮೊಸರು ಸೇವನೆ ಮಾಡಬೇಕೆನ್ನುವ ಗೊಂದಲ ಅನೇಕರಲ್ಲಿದೆ. ಯಾವ ಋತುವಿನಲ್ಲಿ ಹಾಗೂ ಯಾವ ಸಮಯದಲ್ಲಿ ಮೊಸರನ್ನು ಸೇವನೆ ಮಾಡಬಾರದು ಎಂಬುದನ್ನು ಸರಿಯಾಗಿ ತಿಳಿದಿದ್ದರೆ ನಮ್ಮ ಆರೋಗ್ಯವನ್ನು ನಾವು ಕಾಪಾಡಿಕೊಳ್ಳಬಹುದು.

ರಾತ್ರಿ ಮೊಸರಿನ ಸೇವನೆ ಒಳ್ಳೆಯದಲ್ಲ. ಆಯುರ್ವೇದ ಕೂಡ ಇದನ್ನು ಹೇಳುತ್ತದೆ. ರಾತ್ರಿ ಊಟ ಮಾಡಿದ ನಂತ್ರ ನಾವು ಶ್ರಮದ ಕೆಲಸ ಮಾಡುವುದಿಲ್ಲ. ಬಹು ಬೇಗ ನಿದ್ದೆಗೆ ಜಾರುತ್ತೇವೆ. ಹಾಗಿರುವಾಗ ಸೇವಿಸಿದ ಆಹಾರ ಸರಿಯಾಗಿ ಜೀರ್ಣವಾಗುವುದಿಲ್ಲ. ಇದರಿಂದ ಅನೇಕ ಸಮಸ್ಯೆಗಳು ಎದುರಾಗುತ್ತವೆ. ಕಫ, ಪಿತ್ತ, ಜೀರ್ಣಕ್ರಿಯೆಗೆ ಸಂಬಂಧಿಸಿದ ಸಮಸ್ಯೆಗಳು ಕಾಣಿಸಿಕೊಳ್ಳುತ್ತವೆ.

ಬೆಳಿಗ್ಗೆ ಖಾಲಿ ಹೊಟ್ಟೆಯಲ್ಲಿ ಮೊಸರು ಸೇವನೆ ಮಾಡುವುದು ಬಹಳ ಒಳ್ಳೆಯದು. ಆಲಸ್ಯ, ಎಸಿಡಿಟಿ, ಕೈ-ಕಾಲಿನ ನೋವು, ಕಣ್ಣಿನ ಸಮಸ್ಯೆಗಳಿಗೆ ಇದರಿಂದ ಮುಕ್ತಿ ಸಿಗುತ್ತದೆ. ಒಂದು ಸಮಯದಲ್ಲಿ 250 ಗ್ರಾಂ ಮೊಸರು ಸೇವನೆ ಮಾಡಬೇಕು. ಆಲಸ್ಯ, ಏರದ ತೂಕ, ಸರಿಯಾಗಿ ಜೀರ್ಣ ಕ್ರಿಯೆಯಾಗದಿರುವುದು, ಹಸಿವಾಗದ ಸಮಸ್ಯೆ ಎದುರಿಸುವವರು ಊಟದ ನಂತ್ರ ಮೊಸರಿಗೆ ಸಕ್ಕರೆ ಬೆರೆಸಿ ಸೇವನೆ ಮಾಡುವುದು ಒಳ್ಳೆಯದು.

ಹಾಲಿನ ಜೊತೆ ಮೊಸರು ಸೇವನೆ ಮಾಡಬೇಡಿ. ರಾತ್ರಿ ಯಾವುದೇ ಕಾರಣಕ್ಕೂ ಸಕ್ಕರೆ ಜೊತೆ ಮೊಸರನ್ನು ತಿನ್ನಬೇಡಿ. ಆಯುರ್ವೇದದ ಪ್ರಕಾರ ರಾತ್ರಿ ಮೊಸರಿನಿಂದ ದೂರ ಇರುವುದು ಒಳ್ಳೆಯದು. ಅನಿವಾರ್ಯವಾದಲ್ಲಿ ಮೊಸರಿಗೆ ಚಿಟಕಿ ಕಾಳು ಮೆಣಸಿನ ಪುಡಿ ಸೇರಿಸಿ ಸೇವನೆ ಮಾಡಿ.

ಬೆಸ್ಟ್ ಫ್ರೆಂಡ್ ಮದುವೆಯಲ್ಲಿ ಮಿಂಚ್ಬೇಕು ಅಂದ್ರೆ….

$
0
0
wed

ಆತ್ಮೀಯ ಸ್ನೇಹಿತರ ಮದುವೆ ಅಂದ್ರೆ ಎಲ್ರಿಗೂ ಖುಷಿ, ಮದ್ವೆ ಮನೆಯಲ್ಲಿ ಸಡಗರದಿಂದ ಓಡಾಡುವುದೇ ಸಖತ್ ಥ್ರಿಲ್ಲಿಂಗ್ ಆಗಿರುತ್ತೆ. ಸ್ನೇಹಿತರ ಮದುವೆಯಲ್ಲಿ ನಾವೂ ಚೆನ್ನಾಗಿ ಕಾಣ್ಬೇಕು ಅನ್ನೋ ಆಸೆ ಸಾಮಾನ್ಯ. ಸಮಾರಂಭದಲ್ಲಿ ಎಲ್ಲರ ದೃಷ್ಟಿ ನಿಮ್ಮತ್ತ ನೆಟ್ಟಿರಬೇಕು, ಅಷ್ಟು ಸುಂದರವಾಗಿ ಕಾಣಬೇಕೆಂದ್ರೆ ಈ ಸರಳ ಸಲಹೆಗಳನ್ನು ತಪ್ಪದೇ ಪಾಲಿಸಿ.

ಜಾಕೆಟ್ ಸ್ಟೈಲ್ : ಜಾಕೆಟ್ ಈಗಿನ ಲೇಟೆಸ್ಟ್ ಟ್ರೆಂಡ್. ಅದನ್ನು ಬೇರೆ ಬೇರೆ ರೀತಿಯಾಗಿ ಬಳಸಿಕೊಳ್ಳಬಹುದು. ಜಾಕೆಟ್ ಗೆ ಹೊಂದಿಕೆಯಾಗುವಂತಹ ಲೆಹಂಗಾ ಚೋಲಿ ಅಥವಾ ಪಲಾಝೋವನ್ನು ನೀವು ಧರಿಸಬಹುದು. ವೆಲ್ವೆಟ್ ಅಥವಾ ಜರ್ದೋಸಿ, ಎಂಬ್ರಾಯಡರಿ ಇರುವ ಅಂದದ ಜಾಕೆಟ್ ಆರಿಸಿಕೊಳ್ಳಿ. ಉದ್ದಕ್ಕಿರಲಿ, ಗಿಡ್ಡಕ್ಕಿರಲಿ, ಓಪನ್ ಅಥವಾ ಕ್ಲೋಸ್, ಹೇಗಿದ್ರೂ ಚೆನ್ನಾಗಿ ಕಾಣುತ್ತದೆ.

ವಿಸ್ತ್ರತ ಚೋಲಿ : ನೆಟ್ ಅಥವಾ ಲೇಸ್ ಕೂರಿಸಿ ಚೋಲಿಯನ್ನು ನೀವು ಎಕ್ಸ್ ಟೆಂಡ್ ಮಾಡಿಸಬಹುದು. ಲೆಹಂಗಾದ ಮೇಲೆಯೇ ಇದ್ರೂ ಚೆನ್ನ. ಜಾಕೆಟ್ ಗಳ ಮೇಲೆ ಅಂದದ ಕ್ರಿಸ್ಟಲ್ ಅಥವಾ ಕನ್ನಡಿಗಳನ್ನು ಹಾಕಿ ಡಿಸೈನ್ ಮಾಡಿದ್ರೆ ಅದ್ಭುತವಾಗಿರುತ್ತದೆ.

ಟ್ರಯಲ್ : ಮದುವೆ ದಿನವೇ ನಿಮ್ಮ ಹೊಸ ಲೆಹಂಗಾ ಚೋಲಿಯನ್ನು ಟ್ರೈ ಮಾಡಲು ಹೋಗಬೇಡಿ. ಮದುವೆಗೂ ಮುನ್ನವೇ ಒಮ್ಮೆ ಅದನ್ನು ಟ್ರೈ ಮಾಡಿ. ಫಿಟ್ಟಿಂಗ್ ಸರಿಯಾಗಿದ್ಯಾ, ನಿಮಗೆ ಚೆನ್ನಾಗಿ ಒಪ್ಪುತ್ತಿದ್ಯಾ ಅನ್ನೋದನ್ನು ಚೆಕ್ ಮಾಡಿಕೊಳ್ಳಿ. ಟ್ರಯಲ್ ನಿಮ್ಮ ಲೆಹಂಗಾಕ್ಕೆ ರಿಚ್ ನೆಸ್ ಮತ್ತು ಗ್ಲಾಮರ್ ಕೊಡುತ್ತದೆ.

ಕಂಟೆಂಪರರಿ ಸ್ಟೈಲ್ : ಧೋತಿ ಪ್ಯಾಂಟ್,  ಕೇಪ್ಸ್, ಪಲಾಝೋ, ಕ್ರಾಪ್ ಟಾಪ್ ಗಳನ್ನು ಟ್ರೈ ಮಾಡಿ.

ಸಹಜತೆ, ಲಯ : ನಿಮ್ಮ ಡ್ರೆಸ್ ಮತ್ತು ಅದರ ವಿನ್ಯಾಸ ಎಷ್ಟು ಮುಖ್ಯವೋ ಅದರ ಬಣ್ಣ ಕೂಡ ಅಷ್ಟೇ ಮುಖ್ಯ. ಆದಷ್ಟು ನೈಸರ್ಗಿಕ ಬಣ್ಣಗಳನ್ನು ಆಯ್ದುಕೊಳ್ಳಿ. ಹಸಿರು, ಪುದೀನಾ ಹಸಿರು ಹೀಗೆ ಬ್ರೈಟ್ ಕಲರ್ ಗಳಿಗೆ ಆದ್ಯತೆ ಕೊಡಿ. ಲೇಟೆಸ್ಟ್ ಹೇರ್ ಕಲರ್, ನೇಲ್ ಪೇಂಟ್, ಲಿಪ್ ಸ್ಟಿಕ್ ಟ್ರೆಂಡ್ ಗಮನದಲ್ಲಿರಲಿ.

ಫ್ಲೋರ್ ಸ್ವೀಪಿಂಗ್ ಫ್ಯಾಂಟಸಿ : ಭಾರತೀಯ ಆವೃತ್ತಿಯ ಸ್ವೀಪಿಂಗ್ ಗೌನ್ ಗಳು ಕೂಡ ಮದುವೆಗೆ ಹೇಳಿ ಮಾಡಿಸಿದಂತಿರುತ್ತವೆ. ಫ್ಲೋರ್ ಲೆಂತ್ ನ ಅನಾರ್ಕಲಿ ಬೆಸ್ಟ್.

ಸರಳತೆ : ಅತಿಯಾದ ಡ್ರೆಸ್ಸಿಂಗ್ ಬೇಡ. ಆಡಂಬರವಿಲ್ಲದೆ ಸದಭಿರುಚಿಯ ಸೊಬಗಿದ್ದರೆ ಸಾಕು. ಆಫ್ ಶೋಲ್ಡರ್ ಫ್ಲೋರಲ್ ಮ್ಯಾಕ್ಸಿ ಡ್ರೆಸ್, ಸಾಂಪ್ರದಾಯಿಕ ಜಾರ್ಜೆಟ್ ಸೀರೆಯಲ್ಲಿ ನೀವು ಸಖತ್ತಾಗಿ ಮಿಂಚಬಹುದು.

Guys…! ಕುರ್ತಾ ಜೊತೆ ಪೈಜಾಮ್ ಅಲ್ಲ ಇದನ್ನು ಧರಿಸಿ ಸೌಂದರ್ಯ ಹೆಚ್ಚಿಸಿಕೊಳ್ಳಿ

$
0
0

ಹಬ್ಬ ಹತ್ತಿರ ಬರ್ತಿದೆ. ಎಲ್ಲೆಡೆ ತಯಾರಿ ಜೋರಾಗಿ ನಡೆಯುತ್ತಿದೆ. ಮಹಿಳೆಯರೊಂದೇ ಅಲ್ಲ ಪುರುಷರು ಕೂಡ ಚೆಂದದ ಬಟ್ಟೆ ತೊಟ್ಟು ಎಲ್ಲರ ಮುಂದೆ ಮಿಂಚಲು ಸಿದ್ಧತೆ ನಡೆಸುತ್ತಿದ್ದಾರೆ. ಹಬ್ಬದ ಹಿನ್ನೆಲೆಯಲ್ಲಿ ಆನ್ಲೈನ್ ಹಾಗೂ ಆಪ್ಲೈನ್ ಮಳಿಗೆಗಳಲ್ಲಿ ಸಾಕಷ್ಟು ಬಟ್ಟೆಗಳು ಗ್ರಾಹಕರನ್ನು ಸೆಳೆಯುತ್ತಿವೆ. ಸುಂದರ ಕುರ್ತಾ ಖರೀದಿಸಿಯಾಗಿದೆ, ಅದಕ್ಕೆ ಪೈಜಾಮ್ ಬದಲು ಏನು ಹಾಕೋದು ಎನ್ನುವ ಚಿಂತೆ ನಿಮ್ಮಲ್ಲಿದ್ದರೆ ಈ ಬಾರಿ ಪೈಜಾಮ್ ಬದಲು ಇದನ್ನು ಧರಿಸಿ ಲುಕ್ ಬದಲಿಸಿಕೊಳ್ಳಿ.

ಸಿಲ್ಕ್ ಧೋತಿ: ಕುರ್ತಾ ಜೊತೆ ಸಿಲ್ಕ್ ಧೋತಿ ಬೆಸ್ಟ್ ಕಾಂಬಿನೇಷನ್. ರೆಡಿಮೆಡ್ ಸಿಲ್ಕ್ ಧೋತಿಯನ್ನು ಯಾವುದೇ ಕುರ್ತಾ ಜೊತೆ ಧರಿಸಬಹುದು. ಕೇವಲ 597 ರೂಪಾಯಿ ಬೆಲೆಯ ಈ ಸಿಲ್ಕ್ ಧೋತಿ ನಿಮಗೆ ಎಲ್ಲೆಡೆ ಸಿಗುತ್ತದೆ.

ಪಟಿಯಾಲಾ ಸಲ್ವಾರ್: ಪಟಿಯಾಲಾ ಸಲ್ವಾರ್ ಮೇಲೆ ಕುರ್ತಾ ಧರಿಸಬಹುದು. ಧೋತಿಗೆ ಹೋಲಿಸಿದ್ರೆ ಸಲ್ವಾರ್ ಧರಿಸಲು ಹಾಗೂ ಸಂಭಾಳಿಸಲು ತುಂಬಾ ಸುಲಭ. ಪಟಿಯಾಲಾ ಸಲ್ವಾರನ್ನು ನೀವು ಪಟಿಯಾಲಾ ಕುರ್ತಾ ಜೊತೆ ಧರಿಸಿದ್ರೆ ಮತ್ತಷ್ಟು ಚೆಂದ. ಕೇವಲ 799 ರೂಪಾಯಿಗೆ ನೀವು ಪಟಿಯಾಲಾ ಕುರ್ತಾ ಖರೀದಿ ಮಾಡಬಹುದು.

ಜೋಧ್ಪುರಿ ಪ್ಯಾಂಟ್: ನಿಮ್ಮ ಬಳಿ ಪ್ರಿಂಟೆಡ್ ಬ್ಲೇಜರ್ ಇದ್ರೆ ಚಿಂತಿಸುವ ಅಗತ್ಯವಿಲ್ಲ. ಬ್ಲೇಜರ್ ಗೆ ಜೋಧ್ಪುರಿ ಪ್ಯಾಂಟ್ ಬೆಸ್ಟ್. ಶಾರ್ಟ್ ಕುರ್ತಾ ಜೊತೆ ಕೂಡ ನೀವು ಇದನ್ನು ಧರಿಸಬಹುದು. ಮಾರುಕಟ್ಟೆಯಲ್ಲಿ ಜೋಧ್ಪುರಿ ಪ್ಯಾಂಟ್ ಬೆಲೆ 699 ರೂಪಾಯಿ.

ವೇಗವಾಗಿ ಹರಡ್ತಿದೆ ಜಿಕಾ ವೈರಸ್: ರೋಗದ ಲಕ್ಷಣ, ಚಿಕಿತ್ಸೆ ಹೇಗೆ?

$
0
0

ದೇಶದಲ್ಲಿ ಜಿಕಾ ವೈರಸ್ ಭಯ ಶುರುವಾಗಿದೆ. ಜೈಪುರದಲ್ಲಿ 22 ಮಂದಿಗೆ ಜಿಕಾ ವೈರಸ್ ಕಾಣಿಸಿಕೊಂಡಿದೆ. ರಾಜಸ್ತಾನ, ಬಿಹಾರದಲ್ಲಿ ಹೈ ಅಲರ್ಟ್ ಘೋಷಣೆ ಮಾಡಲಾಗಿದೆ. ಜಿಕಾ ವೈರಸ್ ಬಿಹಾರದಲ್ಲಿಯೂ ಭಯ ಹುಟ್ಟುಹಾಕಿದೆ. ಜೈಪುರಕ್ಕೆ ಪರೀಕ್ಷೆ ಬರೆಯಲು ಬಂದಿದ್ದ ಬಿಹಾರ ವಿದ್ಯಾರ್ಥಿಯೊಬ್ಬನಿಗೆ ಜಿಕಾ ವೈರಸ್ ಕಾಣಿಸಿಕೊಂಡಿದೆ. ಹಾಗಾಗಿ ಆತನ ಕುಟುಂಬದ ಆರೋಗ್ಯದ ಮೇಲೂ ನಿಗಾ ಇಡಲಾಗಿದೆ.

ರಾಜಸ್ತಾನ, ಬಿಹಾರವೊಂದೇ ಅಲ್ಲ ವಿಶ್ವದ 89 ದೇಶಗಳಲ್ಲಿ ಜಿಕಾ ವೈರಸ್ ಹರಡಿದೆ. 2017 ಫೆಬ್ರವರಿಯಲ್ಲಿ ಅಹಮದಾಬಾದ್ ವ್ಯಕ್ತಿಯೊಬ್ಬನಿಗೆ ಮೊದಲು ಜಿಕಾ ವೈರಸ್ ಕಾಣಿಸಿಕೊಂಡಿತ್ತು. ಜಿಕಾ ವೈರಸ್ ಭಯಾನಕ ರೋಗವಾಗಿದೆ. ಜಿಕಾ ವೈರಸ್ ಹರಡುವ ಮೊದಲೇ ಅದ್ರ ಲಕ್ಷಣ ತಿಳಿದಿರುವುದು ಒಳ್ಳೆಯದು.

ಜಿಕಾ ವೈರಸ್ ಡೆಂಗ್ಯು, ಮಲೇರಿಯಾದಂತೆ ಸೊಳ್ಳೆಯಿಂದ ಹರಡುತ್ತದೆ. ಹಗಲಿನ ಸಮಯದಲ್ಲಿ ಈ ಸೊಳ್ಳೆ ಸಕ್ರಿಯವಾಗಿರುತ್ತದೆ. ಈ ಸೊಳ್ಳೆ ಕಚ್ಚಿದ್ರೆ ಅಥವಾ ಜಿಕ್ ಸೋಂಕು ಕಾಣಿಸಿಕೊಂಡವರನ್ನು ಕಚ್ಚಿದ ಸೊಳ್ಳೆ ಮತ್ತೊಬ್ಬರಿಗೆ ಕಚ್ಚಿದ್ರೆ ಸೋಂಕು ಹರಡುತ್ತದೆ. ಅಸುರಕ್ಷಿತ ಶಾರೀರಿಕ ಸಂಬಂಧ ಹಾಗೂ ರಕ್ತದಿಂದ ಜಿಕ್ ಹರಡುತ್ತದೆ.

ಜಿಕ್ ಸೋಂಕು ತಗುಲಿದ್ರೆ ಡೆಂಗ್ಯು ಲಕ್ಷಣಗಳೇ ಕಾಣಿಸಿಕೊಳ್ಳುತ್ತವೆ. ಸುಸ್ತು, ಜ್ವರ, ಕೆಂಪಾಗುವ ಕಣ್ಣು, ಕೀಲು ನೋವು, ತಲೆ ನೋವು ಹಾಗೂ ದೇಹದ ಮೇಲೆ ಕೆಂಪು ರಾಶಸ್ ಕಾಣಿಸಿಕೊಳ್ಳುತ್ತದೆ. ಇದು ಗಂಭೀರ ರೋಗ. ಗರ್ಭಿಣಿಗೆ ಸೋಂಕು ಕಾಣಿಸಿಕೊಂಡಲ್ಲಿ ಮಗುವಿನ ಮೇಲೂ ಇದು ಪರಿಣಾಮ ಬೀರುತ್ತದೆ. ಹೊಟ್ಟೆಯಲ್ಲಿರುವ ಮಗುವಿಗೆ ಜ್ವರ ಕಾಣಿಸಿಕೊಂಡು ಬುದ್ಧಿಮಾಂಧ್ಯತೆಯಂತ ಸಮಸ್ಯೆ ಕಾಡುವ ಸಾಧ್ಯತೆಯಿರುತ್ತದೆ.

ಜಿಕ್ ವೈರಸ್ ನಿಯಂತ್ರಣಕ್ಕೆ ಯಾವುದೇ ಔಷಧಿಯಿಲ್ಲ. ಯಾವುದೇ ಮಾತ್ರೆಯಿಲ್ಲ. ನೋವು ಕಡಿಮೆ ಮಾಡಲು ಪಾರಾಸಿಟಮಲ್ ನೀಡಲಾಗುತ್ತದೆ.

ಜಿಕ್ ವೈರಸ್ ನಿಂದ ರಕ್ಷಣೆ ಪಡೆಯಲು ಡೆಂಗ್ಯನಂತೆಯೇ ಜಾಗೃತೆ ವಹಿಸಬೇಕಾಗುತ್ತದೆ. ಮನೆ ಸುತ್ತ ನೀರು ನಿಲ್ಲದಂತೆ ನೋಡಿಕೊಳ್ಳಿ. ಸ್ವಚ್ಛತೆ ಇರಲಿ. ಸೊಳ್ಳೆಯಿರುವ ಪ್ರದೇಶಕ್ಕೆ ತೆರಳುವಾಗ ಎಚ್ಚರವಿರಲಿ. ಸೊಳ್ಳೆ ರಕ್ಷಕ ಕ್ರೀಂ ಬಳಸಿ.

 

ಈ ಬಾರಿಯ ಹಬ್ಬಕ್ಕೆ ಹೀಗಿರಲಿ ನಿಮ್ಮ ಅಲಂಕಾರ

$
0
0

ಹಬ್ಬ ಬಂತೆಂದರೆ ಹೆಣ್ಣು ಮಕ್ಕಳ ಸಡಗರ ಹೇಳತೀರದು. ನವರಾತ್ರಿ, ದೀಪಾವಳಿ ಹೀಗೆ ಸಾಲು ಸಾಲಾಗಿ ಹಬ್ಬಗಳು ಬರುತ್ತಿವೆ. ನೆಂಟರಿಷ್ಟರು, ಬಂಧು ಬಳಗ ಸೇರುವ ಹಬ್ಬದಲ್ಲಿ ಮನೆಯ ಹೆಣ್ಣು ಮಕ್ಕಳಿಗೆ ಎಲ್ಲರ ಎದುರು ತಾವು ಚೆನ್ನಾಗಿ ಕಾಣಿಸಿಕೊಳ್ಳಬೇಕು ಎನ್ನುವ ಆಸೆ ಇರುತ್ತದೆ. ಹಾಗಾಗಿ ಹಬ್ಬಕ್ಕೆ ಸಿಂಪಲ್ ಆಗಿ ಮೇಕಪ್ ಮಾಡಿಕೊಂಡು ಸುಂದರವಾಗಿ ಕಾಣಿಸಿಕೊಳ್ಳುವುದು ಹೇಗೆ ಎಂಬುದರ ಮಾಹಿತಿ ಇಲ್ಲಿದೆ ನೋಡಿ.

ಮುಖದ ಆರೈಕೆ ಹೀಗಿರಲಿ:

ಯಾವುದಾದರೂ ಒಳ್ಳೆಯ ಫೇಸ್ ವಾಶ್ ಇಲ್ಲವೇ ನೀವು ಮನೆಯಲ್ಲಿಯೇ ಉಪಯೋಗಿಸುವ ಕಡಲೆ ಹಿಟ್ಟು, ಹೆಸರಿಟ್ಟನ್ನು ಬಳಸಿ ಮುಖ ತೊಳೆಯಿರಿ. ನಿಮ್ಮ ಚರ್ಮಕ್ಕೆ ಯಾವುದು ಅಲರ್ಜಿ ಆಲ್ಲವೋ ಅದನ್ನು ಬಳಸಿದರೆ ಒಳ್ಳೆಯದು.

ನಂತರ ಒಂದು ಒಳ್ಳೆಯ ಗುಣಮಟ್ಟದ ಮಾಯಿಶ್ಚರೈಸರ್ ಹೆಚ್ಚಿ. ಬಳಿಕ ಒಂದೆರೆಡು ಹನಿ ಫೌಂಡೇಷನ್ ತೆಗೆದುಕೊಂಡು ಅದನ್ನು ನಿಮ್ಮ ಮುಖದ ಎಲ್ಲ ಕಡೆ ತೆಳುವಾಗಿ ಹಚ್ಚಿಕೊಳ್ಳಿ. ಹಾಗೇ ನಿಮ್ಮ ಕುತ್ತಿಗೆಗೂ ಹಚ್ಚಿ. ನಂತರ ಮುಖಕ್ಕೆ ತೆಳುವಾಗಿ ಪೌಡರ್ ಸವರಿ.

ತುಟಿಯ ಆರೈಕೆ:

ತುಟಿಯ ಭಾಗ ಕಪ್ಪಾಗಿದ್ದರೆ, ಸಕ್ಕರೆ ಹಾಗೂ ಜೇನು ತುಪ್ಪವನ್ನು ಬಳಸಿ ನಿಧಾನಕ್ಕೆ ತುಟಿಯನ್ನು ಸ್ಕ್ರಬ್ ಮಾಡಿ. ಇಲ್ಲದಿದ್ದರೆ ತೆಂಗಿನ ಎಣ್ಣೆಯಲ್ಲಿ ನಿಧಾನಕ್ಕೆ ಮಸಾಜ್ ಮಾಡಿಕೊಂಡರು ಪರ್ವಾಗಿಲ್ಲ. ನಂತರ ತುಟಿ ತೊಳೆದುಕೊಂಡು ಅದಕ್ಕೆ ನಿಮ್ಮಿಷ್ಟದ ಲಿಪ್ ಬಾಮ್ ಹಚ್ಚಿ. ಆಮೇಲೆ ನಿಮ್ಮ ತುಟಿಗೆ ಯಾವ ಬಣ್ಣ ಸರಿ ಹೊಂದುತ್ತದೆಯೋ ಆ ಬಣ್ಣದ ಲಿಪ್ ಸ್ಟಿಕ್ ಅನ್ನು ತೆಳುವಾಗಿ ಲೇಪಿಸಿ.

ಕಣ್ಣಿನ ಆರೈಕೆ:

ಕಣ್ಣಿನಲ್ಲಿ ಹೊಳಪಿದ್ದರೆ ಮುಖದ ಸೌಂದರ್ಯ ಇಮ್ಮಡಿಸುತ್ತದೆ. ಚೆನ್ನಾಗಿ ನಿದ್ರೆ ಮಾಡಿ. ಇದರಿಂದ ನಿಮ್ಮ ಕಣ್ಣಿನ ಸುತ್ತ ಕಪ್ಪಾಗುವುದು ತಪ್ಪುತ್ತದೆ. ರೋಸ್ ವಾಟರ್ ನಲ್ಲಿ ಅದ್ದಿದ ಹತ್ತಿಯನ್ನು ನಿಮ್ಮ ಕಣ್ಣುಗಳ ಮೇಲೆ 10 ನಿಮಿಷವಿಟ್ಟು ಮಲಗಿ. ನಂತರ ಶುದ್ಧವಾದ ನೀರಿನಿಂದ ಕಣ್ಣುಗಳನ್ನು ತೊಳೆದು ಕಾಜಲ್ ಹಚ್ಚಿ. ರೆಪ್ಪೆಗೆ ಐ ಲೈನರ್ ಅನ್ನು ಜಾಗರೂಕತೆಯಿಂದ ಹಚ್ಚಿ. ಹಾಗೇ ಹೆಣ್ಣಿನ ಅಂದ ಹೆಚ್ಚಿಸುವ ಇನ್ನೊಂದು ವಸ್ತುವೆಂದರೆ ಅದು ಬಿಂದಿ. ನಿಮ್ಮ ಉಡುಪಿಗೆ ಸರಿ ಹೊಂದುವ ಬಿಂದಿ ಹಾಕಿಕೊಂಡರೆ ಕಳೆಕಳೆಯಾಗಿ ಕಾಣುತ್ತೀರಿ.

ಹಾಲನ್ನು ಪದೇ ಪದೇ ಬಿಸಿ ಮಾಡುವ ಮುನ್ನ ಈ ಸುದ್ದಿ ಓದಿ

$
0
0
boiling_1478423393

ಹಾಲು ಕುಡಿಯೋದು ಆರೋಗ್ಯಕ್ಕೆ ಒಳ್ಳೆಯದು. ಈ ವಿಷ್ಯ ಎಲ್ಲರಿಗೂ ಗೊತ್ತು. ಆದ್ರೆ ಪದೇ ಪದೇ ಹಾಲು ಕುದಿಸೋದು ಆರೋಗ್ಯಕ್ಕೆ ಹಾನಿಕರ. ಈ ವಿಷ್ಯ ಎಲ್ಲರಿಗೂ ತಿಳಿದಿರಲಿಕ್ಕಿಲ್ಲ. ಹಾಲು ಹಾಳಾಗುತ್ತೆ ಅಂತಾ ಪದೇ ಪದೇ ಹಾಲನ್ನು ಬಿಸಿ ಮಾಡಿ ಕುಡಿದ್ರೆ ಅದು ನಮ್ಮ ದೇಹದ ಮೇಲೆ ಅಡ್ಡ ಪರಿಣಾಮ ಬೀರುತ್ತದೆ.

ಹಾಲನ್ನು ಒಮ್ಮೆ ಕುದಿಸೋದು ಒಳ್ಳೆಯದು. ಆದ್ರೆ ಪದೇ ಪದೇ ಹಾಲನ್ನು ಬಿಸಿ ಮಾಡಿದ್ರೆ ಇದ್ರಿಂದ ಲಾಭಕ್ಕಿಂತ ನಷ್ಟವೇ ಜಾಸ್ತಿ ಎನ್ನುತ್ತದೆ ಅಧ್ಯಯನ. ಹಾಲನ್ನು ಅನೇಕ ಬಾರಿ ಬಿಸಿ ಮಾಡುವುದರಿಂದ ಹಾಲಿನಲ್ಲಿರುವ ಪೋಷಕಾಂಶ ಕಡಿಮೆಯಾಗುತ್ತದೆ. ಪೋಷಕಾಂಶ ಕಡಿಮೆಯಾಗುತ್ತದೆ ಎನ್ನುವ ವಿಚಾರ ಶೇಕಡಾ 17 ರಷ್ಟು ಮಹಿಳೆಯರಿಗೆ ಮಾತ್ರ ಗೊತ್ತು ಎಂಬ ವಿಷಯವನ್ನೂ ಅಧ್ಯಯನ ತಂಡ ಸ್ಪಷ್ಟಪಡಿಸಿದೆ.

ಹಾಲನ್ನು ಒಮ್ಮೆ ಬಿಸಿ ಮಾಡಿದ ನಂತ್ರ ಫ್ರಿಜ್ ನಲ್ಲಿಡಿ. ಕೇವಲ 2-3 ನಿಮಿಷ ಮಾತ್ರ ಹಾಲನ್ನು ಬಿಸಿ ಮಾಡಿ. ಹಾಲು ಬಿಸಿ ಮಾಡುವಾಗ ಚಮಚದಿಂದ ಕಲಕುತ್ತಿರಿ. ಹಾಲು ಬಿಸಿಯಾದ ತಕ್ಷಣ ಗ್ಯಾಸ್ ನಿಂದ ತೆಗೆದು ಪ್ರಿಜ್ ನಲ್ಲಿಡಿ. ಹೀಗೆ ಮಾಡಿದ್ರೆ ಪದೇ ಪದೇ ಹಾಲನ್ನು ಬಿಸಿ ಮಾಡುವ ತಾಪತ್ರಯ ಇರೋದಿಲ್ಲ. ಜೊತೆಗೆ ಹಾಲು ಬೇಗ ಹಾಳಾಗುತ್ತೆ ಎನ್ನುವ ಭಯ ಇರೋದಿಲ್ಲ. ಹಾಲಿನಲ್ಲಿರುವ ಪೋಷಕಾಂಶ ನಿಮಗೆ ಸಂಪೂರ್ಣವಾಗಿ ಸಿಗುತ್ತೆ.

 


ಚಳಿಗಾಲದಲ್ಲಿ ಸಂಕುಚಿತವಾಗುತ್ತೆ ಪುರುಷರ ಶಿಶ್ನ

$
0
0

ಋತು ಬದಲಾದಂತೆ ವಾತಾವರಣದ ಜೊತೆ ನಮ್ಮ ದೇಹದಲ್ಲಿಯೂ ಸಾಕಷ್ಟು ಬದಲಾವಣೆಗಳಾಗುತ್ತವೆ. ಚಳಿಗಾಲದಲ್ಲಿ ತುಂಬಾ ಚಳಿಯಿರುವ ಸಂದರ್ಭದಲ್ಲಿ ಮಹಿಳೆಯರ ಖಾಸಗಿ ಅಂಗದಲ್ಲಿ ಬದಲಾವಣೆ ಕಾಣಬಹುದು. ಖಾಸಗಿ ಅಂಗ ಮೃದುತ್ವ ಕಳೆದುಕೊಂಡು ಶುಷ್ಕವಾಗುತ್ತದೆ. ಈಗ ಪುರುಷರ ಖಾಸಗಿ ಅಂಗದಲ್ಲಿ ಆಗುವ ಬದಲಾವಣೆ ಬಗ್ಗೆ ಕೆಟ್ಟ ಸುದ್ದಿಯೊಂದು ಹೊರಬಿದ್ದಿದೆ.

ಲೈಂಗಿಕ ತಜ್ಞರ ಪ್ರಕಾರ, ಚಳಿಗಾಲದಲ್ಲಿ ಪುರುಷರ ಖಾಸಗಿ ಅಂಗ ಅಂದ್ರೆ ಶಿಶ್ನ ಸಂಕುಚಿತಗೊಳ್ಳುತ್ತದೆ. ಇದು ಸೆಕ್ಸ್ ಮೇಲೆ ಪ್ರಭಾವ ಬೀರುತ್ತದೆ. ಕ್ಲೈಮ್ಯಾಕ್ಸ್ ತಲುಪಲು ಕಷ್ಟವಾಗುತ್ತದೆ ಎಂದು ತಜ್ಞರು ಹೇಳಿದ್ದಾರೆ. ಚಳಿಗಾಲದಲ್ಲಿ ಚಳಿ ಹೆಚ್ಚಾಗ್ತಿದ್ದಂತೆ ಶಿಶ್ನದವರೆಗೆ ರಕ್ತ ಸಂಚಾರ ಸರಿಯಾಗಿ ಆಗುವುದಿಲ್ಲ. ರಕ್ತನಾಳಗಳಲ್ಲಿ ರಕ್ತ ಸಂಚಾರ ನಿಧಾನವಾಗುವುದ್ರಿಂದ ಈ ಸಮಸ್ಯೆ ಎದುರಾಗುತ್ತದೆಯಂತೆ.

ಚಳಿ ತುಂಬಾ ಹೆಚ್ಚಿದ್ದರೆ ಪುರುಷರ ಶಿಶ್ನ ಶೇಕಡಾ 50ರಷ್ಟು ಚಿಕ್ಕದಾಗುತ್ತದೆಯಂತೆ. ದಪ್ಪದಲ್ಲಿ ಶೇಕಡಾ 20-30 ರಷ್ಟು ಚಿಕ್ಕದಾಗುತ್ತದೆಯಂತೆ. ಶಿಶ್ನದ ಗಾತ್ರವೊಂದೇ ಅಲ್ಲ ಸಂವೇದನಾಶೀಲತೆ ಕೂಡ ಕಡಿಮೆಯಾಗುತ್ತದೆ. ಶಿಶ್ನವನ್ನು ಸಂಗಾತಿ ಸ್ಪರ್ಶಿಸಿದ್ರೂ ಬಹುತೇಕ ಬಾರಿ ಉತ್ತೇಜನಕ್ಕೊಳಗಾಗುವುದಿಲ್ಲ. ಇದೇ ಕಾರಣಕ್ಕೆ ಕ್ಲೈಮ್ಯಾಕ್ಸ್ ತಲುಪಲು ಚಳಿಗಾಲದಲ್ಲಿ ಪುರುಷರಿಗೆ ಕಷ್ಟವಾಗುತ್ತದೆ ಎಂದು ತಜ್ಞರು ಹೇಳಿದ್ದಾರೆ.

ನವರಾತ್ರಿ ಸ್ಪೆಷಲ್: ಗೋಡಂಬಿ ಬರ್ಫಿ

$
0
0

ಗೋಡಂಬಿ ಬರ್ಫಿ ತಿನ್ನಲು ಮಕ್ಕಳು ಮಾತ್ರವಲ್ಲ ಹಿರಿಯರು ಕೂಡ ತುಂಬಾನೆ ಇಷ್ಟ ಪಡುತ್ತಾರೆ. ಆದ್ದರಿಂದ ನವರಾತ್ರಿಗೆ ಹೊರಗಡೆಯಿಂದ ಸಿಹಿ ತಂದು ತಿನ್ನುವುದಕ್ಕಿಂತ ಮನೆಯಲ್ಲಿ  ಏನಾದರೂ ಸಿಹಿ ತಯಾರಿಸಿ. ಸವಿಯಿರಿ.  ಗೋಡಂಬಿ, ಸಕ್ಕರೆ, ತುಪ್ಪ ಹಾಕಿ ಮಾಡುವ ಬರ್ಫಿ ತುಂಬಾ ರುಚಿಕರವಾಗಿದ್ದು, ಮಾಡುವ ವಿಧಾನ ನೋಡಿ ಇಲ್ಲಿದೆ.

ಗೋಡಂಬಿ ಬರ್ಫಿಗೆ ಬೇಕಾಗುವ ಸಾಮಗ್ರಿಗಳು:

ಗೋಡಂಬಿ – ಒಂದು ಕಪ್, ಸಕ್ಕರೆ – ಒಂದು ಕಪ್, ಅರ್ಧ ಕಪ್ ಹಾಲು, ಕಂಡೆನ್ಸ್ಡ್ ಮಿಲ್ಕ್ ಸ್ವಲ್ಪ, ಒಂದು ಟಿನ್ ತುಪ್ಪ, ಎರಡು ದೊಡ್ಡ ಚಮಚ ಏಲಕ್ಕಿ ಪುಡಿ

ತಯಾರಿಸುವ ವಿಧಾನ:

ಗೋಡಂಬಿಯನ್ನು ಪುಡಿ ಮಾಡಿಕೊಳ್ಳಿ. ಒಂದು ಪಾತ್ರೆಯಲ್ಲಿ ಸಕ್ಕರೆ ಮತ್ತು ಹಾಲು, ಕಂಡೆನ್ಸ್ಡ್ ಮಿಲ್ಕ್ ಹಾಕಿ ಬಿಸಿ ಮಾಡಿ, ಅದಕ್ಕೆ ಗೋಡಂಬಿ ಪುಡಿಯನ್ನು ಹಾಕಿ ಮಿಕ್ಸ್ ಮಾಡಿ, ಸ್ವಲ್ಪ ಹೊತ್ತಿನ ನಂತರ ತುಪ್ಪ ಮತ್ತು ಏಲಕ್ಕಿ ಪುಡಿಯನ್ನು ಸೇರಿಸಿ. ಅದು ತಳ ಹಿಡಿಯದಂತೆ ಚೆನ್ನಾಗಿ ಕೈಯಾಡಿಸುತ್ತಿರಿ. ಸ್ವಲ್ಪ ಹೊತ್ತಿಗೆ ಅದು ತಳ ಬಿಡುತ್ತಾ ಬರುತ್ತದೆ. ಬರ್ಫಿಯ ಹದ ಬಂದಿದೆ ಎನಿಸಿದ ತಕ್ಷಣ ತುಪ್ಪ ಸವರಿದ ತಟ್ಟೆಗೆ ಹಾಕಿ, ಸಮ ಮಾಡಿ. ಸ್ವಲ್ಪ ತಣ್ಣಗಾದ ಮೇಲೆ ನಿಮಗೆ ಬೇಕಾದ ಆಕಾರದಲ್ಲಿ ಕತ್ತರಿಸಿ. ಗೋಡಂಬಿ ಬರ್ಫಿ ತಿನ್ನಲು ರೆಡಿ.

ನಿದ್ರೆ ಕಡಿಮೆ ಮಾಡಿದ್ರೆ ಎದುರಾಗುತ್ತೇ ಈ ಸಮಸ್ಯೆ

$
0
0
sleep

ನಾವು ಆರೋಗ್ಯವಾಗಿರಬೇಕಂದ್ರೆ ದಿನಕ್ಕೆ 7-8 ತಾಸು ನಿದ್ರೆ ಅತ್ಯಂತ ಅವಶ್ಯ. ಆದ್ರೆ ಎಷ್ಟೋ ಬಾರಿ ನಾವು ಕಣ್ತುಂಬಾ ನಿದ್ದೆ ಮಾಡಲು ಸಮಯ ಸಿಗುವುದಿಲ್ಲ. ಒತ್ತಡದ ಜೀವನಶೈಲಿಯೇ ಅದಕ್ಕೆ ಕಾರಣವಿರಬಹುದು.

ರಾತ್ರಿಯ ಅಮೂಲ್ಯ ನಿದ್ರೆಯನ್ನು ನೀವು ಮಾಡದೇ ಇದ್ರೆ ಮರುದಿನ ಆಯಾಸ, ಆಲಸ್ಯ ಕಾಣಿಸಿಕೊಳ್ಳುವುದು ಸಹಜ. ದೀರ್ಘ ಕಾಲದವರೆಗೆ ಇದೇ ರೀತಿ ಮುಂದುವರಿದರೆ ನಿದ್ರೆಯ ಕೊರತೆಯಿಂದ ಗಂಭೀರ ಆರೋಗ್ಯ ಸಮಸ್ಯೆಗಳು ಕಾಣಿಸಿಕೊಳ್ಳುತ್ತವೆ. ನಿಮ್ಮ ಮನಸ್ಸು ಮತ್ತು ದೇಹ ಘಾಸಿಗೊಳ್ಳುತ್ತದೆ.

ಹೃದಯ ರಕ್ತನಾಳದ ಆರೋಗ್ಯ : ನಿದ್ದೆಯ ಸಮಸ್ಯೆ ಇರುವವರಿಗೆ ಹೃದಯದ ತೊಂದರೆ ಕಾಣಿಸಿಕೊಳ್ಳುವ ಸಾಧ್ಯತೆ ಹೆಚ್ಚು. ಅಧಿಕ ರಕ್ತದೊತ್ತಡ ಮತ್ತು ಹೃದಯಾಘಾತಕ್ಕೂ ಇದು ಕಾರಣವಾಗಬಹುದು. ಯಾಕಂದ್ರೆ ನಿಮ್ಮ ರಕ್ತನಾಳಗಳು ಮತ್ತು ಹೃದಯದ ದುರಸ್ತಿಯಲ್ಲಿ ನಿದ್ರೆ ಬಹುಮುಖ್ಯ ಪಾತ್ರ ವಹಿಸುತ್ತದೆ.

ಡಯಾಬಿಟಿಸ್ : ಯಾರು 5 ಗಂಟೆಗಿಂತಲೂ ಕಡಿಮೆ ನಿದ್ದೆ ಮಾಡ್ತಾರೋ ಅವರಿಗೆ ಸಕ್ಕರೆ ಖಾಯಿಲೆ ಬರುವ ಸಾಧ್ಯತೆಗಳು ಹೆಚ್ಚು. ಸಂಶೋಧನೆಯಲ್ಲೂ ಇದು ದೃಢಪಟ್ಟಿದೆ.

ಉಸಿರಾಟ ಸಮಸ್ಯೆ : ನಿದ್ದೆಯ ಅಭಾವ ನಿಮ್ಮ ರೋಗ ನಿರೋಧಕ ವ್ಯವಸ್ಥೆಯನ್ನು ದುರ್ಬಲಗೊಳಿಸುತ್ತದೆ. ನೆಗಡಿ, ಫ್ಲೂನಂತಹ ಉಸಿರಾಟ ಸಮಸ್ಯೆಗಳಿಗೆ ನೀವು ತುತ್ತಾಗಬಹುದು. ದೀರ್ಘಕಾಲೀನ ಶ್ವಾಸಕೋಶ ಸಮಸ್ಯೆಯಿಂದ ಬಳಲುತ್ತಿರುವವರಿಗೆ ನಿದ್ದೆಯ ಕೊರತೆಯಿಂದ ಸಮಸ್ಯೆ ಇನ್ನಷ್ಟು ಹೆಚ್ಚಾಗಲಿದೆ.

ಮಾನಸಿಕ ಆರೋಗ್ಯ : ದೀರ್ಘಕಾಲದ ನಿದ್ರಾಭಂಗ ಖಿನ್ನತೆ ಮತ್ತು ಆತಂಕದಂತಹ ಭಾವನಾತ್ಮಕ ಖಾಯಿಲೆಗಳಿಗೆ ಕಾರಣವಾಗಬಹುದು. ಮಾನಸಿಕ ಅಸ್ವಸ್ಥತೆ ಇರುವವರಲ್ಲಿ ನಿದ್ರಾಹೀನತೆ ಕಂಡುಬಂದಿದೆ.

ತೂಕ ಹೆಚ್ಚಳ : ನಿದ್ರೆಯ ಕೊರತೆಯಿಂದ ಹೆಚ್ಚು ಕ್ಯಾಲೋರಿ ನಿಮ್ಮ ದೇಹ ಸೇರುತ್ತದೆ, ಇದರಿಂದ ತೂಕ ಹೆಚ್ಚಾಗುತ್ತದೆ. ಯುರೋಪಿಯನ್ ಜರ್ನಲ್ ಆಫ್ ಕ್ಲಿನಿಕಲ್ ನ್ಯೂಟ್ರಿಶನ್ ಅಧ್ಯಯನದ ಪ್ರಕಾರ ಯಾರು ಸರಿಯಾಗಿ ನಿದ್ದೆ ಮಾಡುವುದಿಲ್ಲವೋ ಅವರು ಮರುದಿನ ಹೆಚ್ಚುವರಿಯಾಗಿ 385 ಕ್ಯಾಲೋರಿ ಪಡೆಯುತ್ತಾರೆ.

 

ನೀವು ಮಾಂಸಾಹಾರ ಪ್ರಿಯರೇ…? ಇಲ್ಲಿದೆ ಒಂದು ಶಾಕಿಂಗ್ ಸುದ್ದಿ

$
0
0

ನೀವು ಮಾಂಸಾಹಾರ ಪ್ರಿಯರೇ…? ಹಾಗಾದ್ರೆ ಇಲ್ಲಿದೆ ನಿಮಗೊಂದು ಶಾಕಿಂಗ್ ಸುದ್ದಿ. ಹೆಚ್ಚು ಉಷ್ಣಾಂಶದಲ್ಲಿ ಬೇಯಿಸಿರುವ ಮೀನು ಅಥವಾ ಕೋಳಿಮಾಂಸವನ್ನು ತಿನ್ನುವುದರಿಂದ ನಿಮ್ಮ ಆರೋಗ್ಯದ ಮೇಲೆ ಕೆಟ್ಟ ಪರಿಣಾಮ ಬೀರುತ್ತದೆ ಎಂದು ಸಂಶೋಧನೆಯೊಂದು ಹೇಳಿದೆ.

ವಾರಕ್ಕೊಮ್ಮೆ ರಜೆ ಇದೆ ಎಂದೋ ಅಥವಾ ಪಾರ್ಟಿಯ ನೆಪ ಹೇಳಿ ಆಗಾಗ ಮಾಂಸಾಹಾರ ಸೇವಿಸಿ ನಿಮ್ಮ ಬಾಯಿ ಚಪಲ ತೀರಿಸಿಕೊಳ್ಳುತ್ತಿದ್ದರೆ, ನಿಮ್ಮ ಆರೋಗ್ಯದ ಮೇಲೆ ಇದು ಪರಿಣಾಮ ಬೀರಲಿದೆಯಂತೆ. ಹೆಚ್ಚಿನ ಉಷ್ಣಾಂಶದಲ್ಲಿ ಬೇಯಿಸಿದ ಈ ಮಾಂಸ ಪದಾರ್ಥಗಳಿಂದ ಶೇ.17 ರಷ್ಟು ರಕ್ತದೊತ್ತಡ ಪ್ರಮಾಣ ಹೆಚ್ಚಾಗಲಿದೆ ಎಂದು ನ್ಯೂಯಾರ್ಕ್ ನ ಹಾರ್ವರ್ಡ್ ವಿಶ್ವವಿದ್ಯಾಲಯದಲ್ಲಿ ನಡೆಸಿರುವ ಅಧ್ಯಯನದಿಂದ ತಿಳಿದುಬಂದಿದೆ.

ಕೋಳಿ ಅಥವಾ ಮೀನು ಚೆನ್ನಾಗಿ ಬೆಂದರೆ ಮಾತ್ರ ರುಚಿ ಎಂದು ಅಧಿಕ ಉಷ್ಣಾಂಶದಲ್ಲಿ ಇದನ್ನು ಚೆನ್ನಾಗಿ ಬೇಯಿಸುತ್ತೇವೆ. ಆದರೆ ಹೀಗೆ ಬೇಯಿಸುವುದರಿಂದ ಇದರಲ್ಲಿ ರಾಸಾಯನಿಕಗಳು ಉತ್ಪತ್ತಿಯಾಗುತ್ತದೆಯಂತೆ. ಇದು ಆರೋಗ್ಯಕ್ಕೆ ಹಾನಿಕಾರಕವಂತೆ. ಈ ಆಹಾರ ಪದಾರ್ಥಗಳನ್ನು ಸೇವಿಸುವುದರಿಂದ ಅಧಿಕ ರಕ್ತದೊತ್ತಡ, ಎದೆನೋವು, ಉರಿಯೂತ, ಹೃದಯಘಾತದಂತಹ ಆರೋಗ್ಯದ ಸಮಸ್ಯೆಗಳು ಎದುರಾಗುತ್ತದೆಯಂತೆ.

ನವರಾತ್ರಿಯ ಶಾರದಾ ಮಾತೆ ನೈವೇದ್ಯಕ್ಕೆ ಮಾಡಿ ರುಚಿಯಾದ ಎರೆಯಪ್ಪ

$
0
0

ನವರಾತ್ರಿಯೆಂದು ದೇವಿಗೆ ಬಗೆ ಬಗೆಯ ಭಕ್ಷ್ಯಗಳನ್ನು ಮಾಡಿ ನೈವೇದ್ಯ ಮಾಡುತ್ತಾರೆ. ಇದರಲ್ಲಿ ತುಂಬಾ ವಿಶೇಷವಾದದ್ದು ಎರೆಯಪ್ಪ. ಇದನ್ನು ಶಾರದಾ ಪೂಜೆಯ ದಿನ ಮಾಡಿ ದೇವಿಗೆ ನೈವೇದ್ಯ ಮಾಡಲಾಗುತ್ತದೆ. ಮಾಡುವುದು ಹೇಗೆ ಎಂದು ಚಿಂತಿಸಬೇಡಿ. ಇಲ್ಲಿದೆ ನೋಡಿ ರುಚಿಯಾದ ಎರೆಯಪ್ಪ

ಎರೆಯಪ್ಪ ಮಾಡಲು ಬೇಕಾಗುವ ಸಾಮಾಗ್ರಿ:

ಮೊದಲಿಗೆ ಅರ್ಧ ಕಪ್ ಅಕ್ಕಿ ತೆಗೆದುಕೊಳ್ಳಿ. ಕಾಲು ಕಪ್ ತೆಂಗಿನಕಾಯಿ ತುರಿ, 3 ದೊಡ್ಡ ಚಮಚ ದಪ್ಪ ಅವಲಕ್ಕಿ, ಹಾಗೇ ಕಾಲು ಕಪ್ ಬೆಲ್ಲ, 3 ದೊಡ್ಡ ಚಮಚ ನೀರು, ಏಲಕ್ಕಿ 3, ಕರಿಯಲು ಎಣ್ಣೆ.

ಮಾಡುವ ವಿಧಾನ:

ಮೊದಲಿಗೆ ಅಕ್ಕಿ ಹಾಗೂ ಅವಲಕ್ಕಿಯನ್ನು ಶುದ್ಧವಾದ ನೀರಿನಿಂದ ತೊಳೆಯಿರಿ. ನಂತರ ಇವೆರಡನ್ನೂ ಮೂರು ಗಂಟೆ ಹೊತ್ತು ಚೆನ್ನಾಗಿ ನೆನೆಸಿರಿ. ನಂತರ ಇದರ ನೀರೆಲ್ಲಾ ಬಸಿದು ಒಂದು ಮಿಕ್ಸಿ ಜಾರಿಗೆ ಹಾಕಿ. ಇದಕ್ಕೆ ಬೆಲ್ಲ, ಕಾಯಿ ತುರಿ, ಏಲಕ್ಕಿ ಹಾಕಿ ಸ್ವಲ್ಪ ನೀರು ಸೇರಿಸಿ ನಯವಾಗಿ ರುಬ್ಬಿಕೊಳ್ಳಿ. ತುಂಬಾ ತೆಳುವಾಗಿ ರುಬ್ಬಬೇಡಿ. ಎಣ್ಣೆ ಬಾಣಲೆಗೆ ಬಿಡುವ ಹದದಲ್ಲಿ ಇದ್ದರೆ ಸಾಕು. ನಂತರ ಒಲೆಯ ಮೇಲೆ ಬಾಣಲೆ ಇಟ್ಟು ಅದಕ್ಕೆ ಎಣ್ಣೆ ಹಾಕಿ ಕಾಯಲು ಬಿಡಿ. ಜೋರು ಉರಿ ಬೇಡ. ಮಧ್ಯಮ ಉರಿಯಲ್ಲಿ ಇರಲಿ. ಎಣ್ಣೆ ಕಾದ ನಂತರ ಒಂದು ಚಮಚದಲ್ಲಿ ಈ ಹಿಟ್ಟನ್ನು ತೆಗೆದುಕೊಂಡು ಎಣ್ಣೆ ಬಾಣಲೆಗೆ ಬಿಡಿ. ಎರಡು ಕಡೆ ಕೆಂಪಾಗುವವರೆಗೆ ಕಾಯಿಸಿರಿ. ದೇವಿಗೆ ನೈವೇದ್ಯ ಇಟ್ಟು ಮನೆಮಂದಿಯಲ್ಲಿ ಕುಳಿತು ರುಚಿಯಾದ ಸಿಹಿಯಾದ ಎರೆಯಪ್ಪ ಸವಿಯಿರಿ.

Viewing all 14227 articles
Browse latest View live




Latest Images