Quantcast
Channel: Life Style | Kannada Dunia | Kannada News | Karnataka News | India News
Viewing all 14227 articles
Browse latest View live

ಸ್ಟ್ರೆಚ್ ಮಾರ್ಕ್ಸ್ ಗೆ ದುಬಾರಿ ಕ್ರೀಮ್ ಅಲ್ಲ ಅಡುಗೆ ಸೋಡಾ ಬೆಸ್ಟ್

$
0
0

ಸ್ಟ್ರೆಚ್ ಮಾರ್ಕ್ಸ್ ಬಂದಷ್ಟು ಸುಲಭವಾಗಿ ಹೋಗುವುದಿಲ್ಲ. ಚರ್ಮ ತನ್ನ ಸಾಮರ್ಥ್ಯಕ್ಕಿಂತ ಹೆಚ್ಚು ಹಿಗ್ಗಿದಾಗ ಸ್ಟ್ರೆಚ್ ಮಾರ್ಕ್ಸ್ ಕಾಣಿಸಿಕೊಳ್ಳುತ್ತದೆ. ಹೆಚ್ಚಾಗಿ ಸೊಂಟ, ಹೊಟ್ಟೆ, ಕೆಳ ಬೆನ್ನು ಹಾಗೂ ಸ್ತನದ ಮೇಲೆ ಕಾಣಿಸಿಕೊಳ್ಳುತ್ತದೆ. ಇದು ಅನೇಕ ಬಾರಿ ಮುಜುಗರಕ್ಕೆ ಕಾರಣವಾಗುತ್ತದೆ.

ಸ್ಟ್ರೆಚ್ ಮಾರ್ಕ್ಸ್ ಗೆ ಮುಕ್ತಿ ಹೇಳಲು ಮಹಿಳೆಯರು ಅನೇಕ ದುಬಾರಿ ಕ್ರೀಂ ಮೊರೆ ಹೋಗ್ತಾರೆ. ಆದ್ರೆ ಜೇಬು ಖಾಲಿಯಾಗುತ್ತದೆಯೇ ವಿನಃ ಸ್ಟ್ರೆಚ್ ಮಾರ್ಕ್ಸ್ ಕಡಿಮೆಯಾಗುವುದಿಲ್ಲ. ಮನೆ ಮದ್ದು ಇದಕ್ಕೆ ಬೆಸ್ಟ್. ಎಲ್ಲರ ಅಡುಗೆ ಮನೆಯಲ್ಲಿರುವ ಅಡುಗೆ ಸೋಡಾ ಸ್ಟ್ರೆಚ್ ಮಾರ್ಕ್ಸ್ ಕಡಿಮೆ ಮಾಡುತ್ತದೆ.

ಅಡುಗೆ ಸೋಡಾದ ಪೇಸ್ಟ್ ಮಾಡಲು ಬೇಕಾಗುವ ವಸ್ತು :

½ ಚಮಚ ನಿಂಬೆ ಹಣ್ಣಿನ ರಸ, ಒಂದರಿಂದ ಎರಡು ಚಮಚ ಅಡಿಗೆ ಸೋಡಾ.

ಪೇಸ್ಟ್ ತಯಾರಿಸುವ ವಿಧಾನ : ನಿಂಬೆ ಹಣ್ಣಿನ ರಸಕ್ಕೆ ಅಡುಗೆ ಸೋಡಾವನ್ನು ಚೆನ್ನಾಗಿ ಮಿಕ್ಸ್ ಮಾಡಿ. ಅದನ್ನು ಸ್ಟ್ರೆಚ್ ಮಾರ್ಕ್ಸ್ ಇರುವ ಜಾಗಕ್ಕೆ ಹಚ್ಚಿ. ಪೇಸ್ಟ್ ಒಣಗಿದ ನಂತ್ರ ಸ್ವಚ್ಛ ನೀರಿನಲ್ಲಿ ತೊಳೆಯಿರಿ. ರಾತ್ರಿ ಮಲಗುವ ಮೊದಲು ಪೇಸ್ಟ್ ಹಚ್ಚಿಕೊಳ್ಳುವುದು ಒಳ್ಳೆಯದು. ವಾರಗಳವರೆಗೆ ಇದನ್ನು ಮುಂದುವರೆಸಿದ್ರೆ ಸ್ಟ್ರೆಚ್ ಮಾರ್ಕ್ಸ್ ಕಡಿಮೆಯಾಗ್ತಾ ಬರುತ್ತದೆ.


ಮನೆಯಲ್ಲಿ ಮಾಡಿ ಪನ್ನೀರ್ ಪಸಂದ್

$
0
0

ದೊಡ್ಡವರಿಂದ ಹಿಡಿದು ಮಕ್ಕಳವರೆಗೆ ಎಲ್ಲರೂ ಪನ್ನೀರ್ ಇಷ್ಟಪಡ್ತಾರೆ. ಪಾಲಕ್ ಪನ್ನೀರ್, ಮಟರ್ ಪನ್ನೀರ್ ತಿನ್ನೋದು ಸಾಮಾನ್ಯ. ಆದ್ರೆ ಇದನ್ನು ತಿಂದು ಬೋರ್ ಆಗಿದ್ರೆ ಇಂದು ಪನ್ನೀರ್ ಪಸಂದ್ ಮಾಡಿ ರುಚಿ ನೋಡಿ.

ಪನ್ನೀರ್ ಪಸಂದ್ ಮಾಡಲು ಬೇಕಾಗುವ ಪದಾರ್ಥ :

ಪನ್ನೀರ್ – 250 ಗ್ರಾಂ

ಬೆಳ್ಳುಳ್ಳಿ -5-6 ಮೊಗ್ಗು

ಶುಂಠಿ – 1-2  ಸಣ್ಣ ಚೂರು

ಈರುಳ್ಳಿ – 2 (ಉದ್ದವಾಗಿ ಕತ್ತರಿಸಿದ್ದು)

ಟೋಮ್ಯಾಟೋ – 3 (ಕತ್ತರಿಸಿದ್ದು)

ಹಸಿರು ಮೆಣಸಿನಕಾಯಿ – 1

ಕರಿಬೇವಿನ ಸೊಪ್ಪು -5-6 ಎಲೆ

ದೊಡ್ಡ ಏಲಕ್ಕಿ – 2

ಗೋಡಂಬಿ – 6-7

ಕೆಂಪು ಮೆಣಸಿನ ಪುಡಿ – 1/2 ಟೀಸ್ಪೂನ್

ಅರಿಶಿನ ಪುಡಿ – 1/4 ಟೀಸ್ಪೂನ್

ಮಸಾಲಾ ಪುಡಿ – 1/4 ಟೀಸ್ಪೂನ್

ಕಸೂರಿ ಮೇಥಿ – 1/2 ಟೀಸ್ಪೂನ್

ಕೊತ್ತಂಬರಿ, ಜೀರಿಗೆ ಪುಡಿ -1 ಚಮಚ

ತಾಜಾ ಕೆನೆ – 1/2 ಕಪ್

ನೀರು – 1/2 ಟೀಸ್ಪೂನ್

ಉಪ್ಪು –ರುಚಿಗೆ ತಕ್ಕಷ್ಟು

ಎಣ್ಣೆ – 3 ಚಮಚ

 ಪನ್ನೀರ್ ಪಸಂದ್ ಮಾಡುವ ವಿಧಾನ :

ಗೋಡಂಬಿ ಬೀಜವನ್ನು ಮಿಕ್ಸಿಗೆ ಹಾಕಿ ಪುಡಿ ಮಾಡಿಕೊಳ್ಳಿ. ಅದಕ್ಕೆ ನೀರನ್ನು ಹಾಕಿ ಪೇಸ್ಟ್ ಮಾಡಿಕೊಳ್ಳಿ. ನಂತ್ರ ಹಸಿರು ಮೆಣಸಿನಕಾಯಿ, ಬೆಳ್ಳುಳ್ಳಿ, ಶುಂಠಿಯನ್ನು ಮಿಕ್ಸಿಗೆ ಹಾಕಿ ಪೇಸ್ಟ್ ಮಾಡಿಕೊಳ್ಳಿ.

ನಂತ್ರ ಈರುಳ್ಳಿ ಹಾಗೂ ಟೋಮೋಟೋವನ್ನು ಕೂಡ ಬೇರೆ ಬೇರೆಯಾಗಿ ಮಿಕ್ಸಿಗೆ ಹಾಕಿ ಪೇಸ್ಟ್ ಮಾಡಿಕೊಳ್ಳಿ.

ಪನ್ನೀರನ್ನು ಚೌಕಾಕಾರದಲ್ಲಿ ಕತ್ತರಿಸಿ. ನಂತ್ರ ಅದನ್ನು ಮತ್ತೆ ತ್ರಿಕೋಣದಲ್ಲಿ ಎರಡು ಪೀಸ್ ಮಾಡಿ. 2, 1/2 ಚಮಚ ಎಣ್ಣೆಯನ್ನು ಪಾತ್ರೆಗೆ ಹಾಕಿ ಬಿಸಿ ಮಾಡಿ. ಎಣ್ಣೆಗೆ ಕತ್ತರಿಸಿ ಪನ್ನೀರ್ ಹಾಕಿ ಸ್ವಲ್ಪ ಕೆಂಪಾಗುವವರೆಗೆ ಬಿಡಿ. ಎಣ್ಣೆಯಿಂದ ತೆಗೆದು ನ್ಯಾಪ್ಕಿನ್ ಮೇಲಿಡಿ.

ಮತ್ತೊಂದು ಚಮಚ ಎಣ್ಣೆಯನ್ನು ಪಾತ್ರೆಗೆ ಹಾಕಿ. ಅದಕ್ಕೆ ಈರುಳ್ಳಿ, ಟೋಮೋಟೋ, ಬೆಳ್ಳುಳ್ಳಿ ಹಾಗೂ ಗೋಡಂಬಿ ಪೇಸ್ಟ್ ಹಾಕಬೇಕು. ಒಂದೊಂದು ಪೇಸ್ಟ್ ಹಾಕಿದ ಮೇಲೆ 2 ನಿಮಿಷ ಚೆನ್ನಾಗಿ ಹುರಿಯಿರಿ. ನಂತ್ರ ಕೆಂಪು ಮೆಣಸಿನ ಪುಡಿ, ಅರಿಶಿನ ಪುಡಿ, ಗರಂ ಮಸಾಲಾ ಪೌಡರ್, ದನಿಯಾ ಪುಡಿ ಹಾಗೂ ನೀರನ್ನು ಹಾಕಿ ಒಂದು ನಿಮಿಷ ಬೇಯಲು ಬಿಡಿ. ನಂತ್ರ ಕಸೂರಿ ಮೇಥಿ, ಪನ್ನೀರ್ ಹಾಕಿ 5-6 ನಿಮಿಷ ಬೇಯಿಸಿ.

ನಂತ್ರ ಗ್ಯಾಸ್ ಬಂದ್ ಮಾಡಿ, ಅದ್ರ ಮೇಲೆ ಕತ್ತರಿಸಿದ ಕೊತ್ತಂಬರಿ ಸೊಪ್ಪನ್ನು ಹಾಕಿ ಸರ್ವ್ ಮಾಡಿ.

ಕ್ಯಾನ್ಸರ್ ಮಾತ್ರವಲ್ಲ ಮಾನಸಿಕ ಅಸ್ವಸ್ಥತೆಗೂ ಇದು ಮದ್ದು…!

$
0
0

mental-disorderಹಸ್ತಮೈಥುನದ ಬಗ್ಗೆ ಸಾಕಷ್ಟು ಊಹಾಪೋಹಗಳಿವೆ. ಸ್ವಪ್ರೀತಿ ವ್ಯಕ್ತಿಯ ಆರೋಗ್ಯಕ್ಕೆ, ಕ್ಷೇಮಕ್ಕೆ ಒಳ್ಳೆಯದು ಅನ್ನೋದು ಮತ್ತೊಮ್ಮೆ ಸಾಬೀತಾಗಿದೆ. ನಿಮ್ಮ ಲೈಂಗಿಕ ಬದುಕಿನಲ್ಲಿ ಹಸ್ತಮೈಥುನ ಪ್ರಮುಖ ಪಾತ್ರ ವಹಿಸುತ್ತದೆ. ನೀವು ನಿಮ್ಮನ್ನು ಪ್ರೀತಿಸಿದಷ್ಟು ಬೇರ್ಯಾರೂ ನಿಮ್ಮನ್ನು ಪ್ರೀತಿಸಲಾರರು ಅನ್ನೋ ಮಾತೇ ಇದೆ.

ಹಸ್ತಮೈಥುನದಿಂದ ಮಾರಕ ಕ್ಯಾನ್ಸರ್ ಖಾಯಿಲೆಯನ್ನು ಕೂಡ ತಡೆಯಬಹುದು ಅನ್ನೋದು ಈಗಾಗ್ಲೇ ಸಾಬೀತಾಗಿದೆ. ಕ್ಯಾನ್ಸರ್ ಮಾತ್ರವಲ್ಲ ಮಾನಸಿಕ ಅಸ್ವಸ್ಥತೆಗೂ ಇದು ಮದ್ದು ಅನ್ನೋದನ್ನು ವಿಜ್ಞಾನಿಗಳು ಪತ್ತೆ ಮಾಡಿದ್ದಾರೆ. ಮಾನಸಿಕ ಖಿನ್ನತೆಯಿಂದ ದೂರವಿರಲು ಹಸ್ತಮೈಥುನ ನೆರವಾಗುತ್ತದಂತೆ. ಸಿಡ್ನಿ ಯೂನಿವರ್ಸಿಟಿಯ ಸಂಶೋಧನೆ ಪ್ರಕಾರ ಹಸ್ತಮೈಥುನ 2 ಬಗೆಯ ಡಯಾಬಿಟೀಸ್ ನಿಂದ್ಲೂ ನಿಮ್ಮನ್ನು ದೂರವಿಡಬಲ್ಲದು. ಒತ್ತಡ ಬಿಡುಗಡೆಯಾಗುವುದರಿಂದ ನಿದ್ರಾಹೀನತೆ ಕೂಡ ಇಲ್ಲವಾಗುತ್ತದೆ.

ತೃಪ್ತಿ ಮತ್ತು ಯೋಗಕ್ಷೇಮ ಭಾವನೆಗಳನ್ನು ಇದು ಉತ್ತೇಜಿಸುವುದರಿಂದ ನಿದ್ರಾಹೀನತೆಯ ಸಮಸ್ಯೆ ಕಡಿಮೆಯಾಗುತ್ತದೆ. ಒತ್ತಡ ಮತ್ತು ಲೋ ಬಿಪಿಯಂತಹ ಸಮಸ್ಯೆಗೂ ಇದು ಪರಿಹಾರವಂತೆ. ಅಷ್ಟೇ ಅಲ್ಲ ಹಸ್ತಮೈಥುನ ವ್ಯಕ್ತಿಯ ಸ್ವಾಭಿಮಾನವನ್ನೂ ಹೆಚ್ಚಿಸುತ್ತದೆ ಅಂತಾ ಸಂಶೋಧನೆಯಲ್ಲಿ ಹೇಳಲಾಗಿದೆ.

ಸೆಕ್ಸ್ ವಿಚಾರದಲ್ಲಿ ಮುಂದಿದ್ದಾರೆ ಇವ್ರು

$
0
0

ಅಡಲ್ಟ್ ಡೆಸ್ಟಿನೇಷನ್ ವಿಚಾರಕ್ಕೆ ಅನೇಕ ದೇಶಗಳು ಪ್ರಸಿದ್ಧಿ ಪಡೆದಿವೆ. ಆದ್ರೆ 2018 ರಲ್ಲಿ ಯಾವ ದೇಶದ ಜನರು ಲೈಂಗಿಕ ಕ್ರಿಯೆಯಲ್ಲಿ ಹೆಚ್ಚು ಸಕ್ರಿಯವಾಗಿದ್ರು ಗೊತ್ತಾ?

ಕಾಂಡೋಮ್ ಕಂಪನಿಯೊಂದು ಲೈಂಗಿಕ ಕ್ರಿಯೆಯಲ್ಲಿ ಹೆಚ್ಚು ಸಕ್ರಿಯವಾಗಿರುವ ದೇಶಗಳ ಸಮೀಕ್ಷೆ ನಡೆಸಿದೆ. ಅದ್ರಲ್ಲಿ ಯಾವ ದೇಶದ ಜನರು ಲೈಂಗಿಕ ಕ್ರಿಯೆಯಲ್ಲಿ 2018 ರಲ್ಲಿ ಹೆಚ್ಚು ಸಕ್ರಿಯವಾಗಿದ್ದರು ಎಂಬ ಸಂಗತಿ ಗೊತ್ತಾಗಿದೆ. ಸಮೀಕ್ಷೆಯಲ್ಲಿ ಸ್ಪೇನ್ ಮೊದಲ ಸ್ಥಾನದಲ್ಲಿದೆ. ಈ ದೇಶದ ಜನರು ಲೈಂಗಿಕ ಕ್ರಿಯೆಯಲ್ಲಿ ಮೊದಲ ಸ್ಥಾನದಲ್ಲಿದ್ದಾರೆ.

ಸ್ವಿಟ್ಜರ್ಲೆಂಡ್ ಎರಡನೇ ಸ್ಥಾನದಲ್ಲಿದೆ. ಇಲ್ಲಿನ ಜನರು ಲೈಂಗಿಕ ಕ್ರಿಯೆಯಲ್ಲಿ ಹೆಚ್ಚು ಸಕ್ರಿಯವಾಗಿರುವ ಜೊತೆಗೆ ಸಂತೃಪ್ತರು ಎಂದು ಸಮೀಕ್ಷೆ ಹೇಳಿದೆ. ಇಲ್ಲಿ ವೇಶ್ಯಾವಾಟಿಕೆ ಕೂಡ ಕಾನೂನುಬದ್ಧವಾಗಿದೆ. ಗ್ರೀಸ್ ಮೂರನೇ ಸ್ಥಾನದಲ್ಲಿದೆ. ಇಲ್ಲಿನ ಜನರು ಸಂಗಾತಿಗಳ ಅಗತ್ಯತೆಗೂ ಹೆಚ್ಚು ಮಹತ್ವ ನೀಡ್ತಾರೆ.

ಇನ್ನು ಬ್ರೇಜಿಲ್ ಜನರು ನಾಲ್ಕನೇ ಸ್ಥಾನದಲ್ಲಿದ್ದಾರೆ. ಇಲ್ಲಿನ ಪುರುಷರೊಂದೇ ಅಲ್ಲ ಮಹಿಳೆಯರು ಕೂಡ ಲೈಂಗಿಕ ಕ್ರಿಯೆಯಲ್ಲಿ ಹೆಚ್ಚು ಸಕ್ರಿಯವಾಗಿದ್ದಾರೆ. ನೈಜಿರಿಯಾ ಕೂಡ ಈ ಪಟ್ಟಿಯಲ್ಲಿ ಸ್ಥಾನ ಪಡೆದಿದೆ. ಈ ಪಟ್ಟಿಯಲ್ಲಿ ಭಾರತ ಕೊನೆ ಸ್ಥಾನದಲ್ಲಿದೆ. ಭಾರತದ ಜನಸಂಖ್ಯೆ ಇದಕ್ಕೆ ಸಾಕ್ಷಿ. ಭಾರತದ ಜನರಿಗೆ ಲೈಂಗಿಕತೆ ಬಗ್ಗೆ ಸರಿಯಾದ ಜ್ಞಾನವಿಲ್ಲ. ಇದ್ರಿಂದ ಇಲ್ಲಿ ಅಸುರಕ್ಷಿತ ಸೆಕ್ಸ್ ಹೆಚ್ಚಾಗ್ತಿದೆ.

ಮಧುಮೇಹಕ್ಕೆ ಮಾವಿನ ಎಲೆ ಮದ್ದು

$
0
0

ವಿಶ್ವದಾದ್ಯಂತ ಮಧುಮೇಹ ವೇಗವಾಗಿ ಹೆಚ್ಚುತ್ತಿದೆ. ರಕ್ತದಲ್ಲಿನ ಸಕ್ಕರೆ ಪ್ರಮಾಣ ಹೆಚ್ಚಾದಾಗ ಮಧುಮೇಹ ಕಾಣಿಸಿಕೊಳ್ಳುತ್ತದೆ. ಇದು ದೇಹದ ಇನ್ಸುಲಿನ್ ಉತ್ಪಾದನಾ ಸಾಮರ್ಥ್ಯದ ಮೇಲೆ ಪರಿಣಾಮ ಬೀರುತ್ತದೆ.

ಮಧುಮೇಹ ಬಂದ ಮೇಲೆ ಪಶ್ಚಾತಾಪ ಪಡುವ ಬದಲು ಬರುವ ಮೊದಲೇ ಎಚ್ಚೆತ್ತುಕೊಳ್ಳುವುದು ಒಳ್ಳೆಯದು. ಕೆಲ ಮನೆಮದ್ದುಗಳ  ಮೂಲಕ ಮಧುಮೇಹವನ್ನು ದೂರವಿಡಬಹುದು. ಚೀನಾದಲ್ಲಿ ಪ್ರಾಚೀನ ಕಾಲದಿಂದಲೂ ಮಧುಮೇಹ ನಿಯಂತ್ರಣಕ್ಕಾಗಿ ಈ ವಿಧಾನವನ್ನು ಬಳಸಲಾಗುತ್ತಿದೆ.

ಚೀನೀಗಳ ಪ್ರಕಾರ, ಮಧುಮೇಹವನ್ನು ಗುಣಪಡಿಸಲು ಮಾವಿನ ಎಲೆಗಳು ಅತ್ಯುತ್ತಮ ಔಷಧ. ಮಾವಿನ ಎಲೆಗಳು ಪೆಕ್ಟಿನ್, ಫೈಬರ್ ಮತ್ತು ವಿಟಮಿನ್ ಸಿ ನಂತಹ ಪೌಷ್ಟಿಕಾಂಶವನ್ನು ಹೊಂದಿವೆ. ಇದರಿಂದಾಗಿ ಕೆಟ್ಟ  ಕೊಲೆಸ್ಟರಾಲ್ ಮಟ್ಟವನ್ನು ಕಡಿಮೆ ಮಾಡಿಕೊಳ್ಳಬಹುದಾಗಿದೆ. ಅಸ್ತಮಾ ಮತ್ತು ಡಯಾಬಿಟೀಸ್ ಖಾಯಿಲೆಗೆ ಈ ಎಲೆಗಳು ಉತ್ತಮ ಔಷಧ.

ಸಂಶೋಧನೆಯ ಪ್ರಕಾರ ಮಾವಿನ ಎಲೆಗಳಲ್ಲಿ ರಕ್ತದಲ್ಲಿನ ಸಕ್ಕರೆ ಪ್ರಮಾಣವನ್ನು ಹೀರಿಕೊಳ್ಳುವ ಸಾಮರ್ಥ್ಯವನ್ನು ಹೊಂದಿದೆ ಎಂದು ಬಹಿರಂಗಪಡಿಸಲಾಗಿದೆ. ಮಾವಿನ ಎಲೆಗಳು ದೇಹದಲ್ಲಿ ಇನ್ಸುಲಿನ್ ಉತ್ಪಾದನೆಯನ್ನು ಸರಿಪಡಿಸುತ್ತವೆ. ಇದು ಕ್ರಮೇಣ ದೇಹದಲ್ಲಿನ ಸಕ್ಕರೆ ಮಟ್ಟವನ್ನು ನಿಯಂತ್ರಣಕ್ಕೆ ತರುತ್ತದೆ.

 

 

ಸುಟ್ಟ ಗಾಯಕ್ಕೆ ಸರಳ ಮನೆ ಮದ್ದು

$
0
0

home-remedies-for-minor-burnsಮಹಿಳೆಯರು ಅಡುಗೆ ಮಾಡುವಾಗ ಚಿಕ್ಕ ಪುಟ್ಟ ಸುಟ್ಟ ಗಾಯಗಳಾಗುವುದು ಸಾಮಾನ್ಯದ ಸಂಗತಿ. ಇಂತಹ ಚಿಕ್ಕ ಸುಟ್ಟ ಗಾಯಗಳನ್ನು ಕಡಿಮೆಗೊಳಿಸುವಂತ ಔಷಧಗಳು ನಮ್ಮ ಮನೆಯಲ್ಲೇ ಇರುತ್ತವೆ. ಅಂತಹ ಕೆಲವು ಮನೆಮದ್ದು ಇಲ್ಲಿವೆ..

ಸುಟ್ಟ ಗಾಯಕ್ಕೆ ತಕ್ಷಣವೇ ಟೂತ್ ಪೇಸ್ಟ್ ಹಚ್ಚಿಕೊಂಡಲ್ಲಿ ಸುಟ್ಟ ಗಾಯದಿಂದಾಗುವ ಉರಿ ಶಮನವಾಗುತ್ತದೆ.

ಶರೀರದ ಭಾಗ ಸುಟ್ಟ ತಕ್ಷಣವೇ ಹಸಿ ಮಣ್ಣನ್ನು ಆ ಭಾಗಕ್ಕೆ ಹಚ್ಚುವುದರಿಂದ ಉರಿ ಕಡಿಮೆಯಾಗುತ್ತದೆ ಮತ್ತು ಗುಳ್ಳೆಗಳು ಏಳುವುದಿಲ್ಲ.

ಸುಟ್ಟ ಭಾಗಕ್ಕೆ ಸತತವಾಗಿ ನೀರು ಬಿಡುತ್ತಿದ್ದಲ್ಲಿ ಗಾಯದ ಉರಿ ಕಡಿಮೆಯಾಗುತ್ತದೆ.

ಚರ್ಮ ಸುಟ್ಟಿದ್ದ ಭಾಗಕ್ಕೆ ಅರಿಸಿನವನ್ನು ಹಚ್ಚುವುದರಿಂದ ನೋವು ಕಡಿಮೆಯಾಗುತ್ತದೆ.

ಜೇನುತುಪ್ಪಕ್ಕೆ ತ್ರಿಪಲಾಚೂರ್ಣವನ್ನು ಬೆರೆಸಿ ಸುಟ್ಟ ಗಾಯಕ್ಕೆ ಹಚ್ಚುವುದರಿಂದ ಗಾಯ ವಾಸಿಯಾಗುತ್ತದೆ.

ಬಿಳಿ ಎಳ್ಳನ್ನು ಚೆನ್ನಾಗಿ ತೇಯ್ದು ಸುಟ್ಟ ಗಾಯಕ್ಕೆ ಹಚ್ಚಿದಲ್ಲಿ ಉರಿ ಕಡಿಮೆಯಾಗುತ್ತದೆ. ಸುಟ್ಟ ಕಲೆಗಳು ಕೂಡ ಉಳಿಯುವುದಿಲ್ಲ.

ತೆಂಗಿನೆಣ್ಣೆ ಕೂಡ ಸುಟ್ಟ ಗಾಯಕ್ಕೆ ಒಳ್ಳೆಯ ಔಷಧ. ಇದರಿಂದ ನೋವು ಶಮನವಾಗುತ್ತದೆ.

ತುಳಸಿ ಎಲೆಯ ರಸವನ್ನು ಸುಟ್ಟ ಗಾಯಕ್ಕೆ ಹಚ್ಚುವುದರಿಂದ ಸುಟ್ಟ ಗಾಯದ ಉರಿ ಕಡಿಮೆಯಾಗುತ್ತದೆ.

ಎಳೆ ಬಿದಿರನ್ನು ತೇಯ್ದು ಸುಟ್ಟ ಭಾಗಕ್ಕೆ ಹಚ್ಚಿದರೆ ಗಾಯದ ಉರಿಯನ್ನು ನಿಯಂತ್ರಿಸಬಹುದು.

ಸಂಗಾತಿಯೊಂದಿಗೆ ಹೀಗಿರಲಿ ನಿಮ್ಮ ವರ್ತನೆ

$
0
0
family-c

ಕಾಲ ಬದಲಾದಂತೆ ಜೀವನ ಶೈಲಿಯೂ ಬದಲಾಗಿದೆ. ಅವಿಭಕ್ತ ಕುಟುಂಬಗಳಿಗೂ, ವಿಭಕ್ತ ಕುಟುಂಬಗಳಿಗೂ ಸಾಕಷ್ಟು ವ್ಯತ್ಯಾಸಗಳನ್ನು ಕಾಣಬಹುದಾಗಿದೆ.

ಹಿಂದೆಲ್ಲಾ ಮನೆಯಲ್ಲಿದ್ದ ಸದಸ್ಯರು ಕೆಲಸ, ಹಂಚಿಕೊಂಡು ಮಾಡುತ್ತಿದ್ದರು. ಈಗ ಇರುವ ಸದಸ್ಯರಲ್ಲಿಯೇ ಕೆಲಸದ ಹಂಚಿಕೆಯಾಗುತ್ತದೆ. ಹೊರಗೆ ಕೆಲಸ ಮಾಡಿ ದಣಿದು ಬಂದ ದೇಹಕ್ಕೆ ವಿಶ್ರಾಂತಿ ಬೇಕೆನಿಸಿದರೂ, ಮನೆಯಲ್ಲಿ ಗಂಡ, ಹೆಂಡತಿ, ಮಕ್ಕಳು ಮಾತ್ರ ಇರುವ ಕಾರಣ ಅವರವರ ಕೆಲಸಗಳನ್ನು ಅವರೇ ಮಾಡಿಕೊಳ್ಳುವ ಅನಿವಾರ್ಯತೆ ಸಹಜವಾಗಿರುತ್ತದೆ.

ಈಗಿನ ದುಬಾರಿ ಕಾಲದಲ್ಲಿ ಗಂಡ ಒಬ್ಬನೇ ದುಡಿದರೆ ಸಾಕಾಗಲ್ಲ. ಹೆಣ್ಣುಮಕ್ಕಳು ಕೂಡ ಕೆಲಸಕ್ಕೆ ಹೋಗಿ ಸಂಸಾರದ ಜವಾಬ್ದಾರಿ ಹೊರುತ್ತಾರೆ. ಹೊರಗೆ ದುಡಿದು ಬಂದ ಹೆಚ್ಚಿನ ಹೆಣ್ಣುಮಕ್ಕಳು ಮನೆ ಕೆಲಸವನ್ನೂ ಮಾಡಬೇಕು. ಆದರೆ, ಬಹುತೇಕ ಗಂಡಸರು ಮನೆ ಕೆಲಸಗಳಿಂದ ದೂರವೇ ಉಳಿಯುತ್ತಾರೆ. ಇದರ ಬದಲಿಗೆ ನಿಮ್ಮ ಶೈಲಿಯನ್ನು ಬದಲಿಸಿಕೊಳ್ಳಿ.

ಮನೆ ಕೆಲಸದಲ್ಲಿ ನಿಮ್ಮ ಸಂಗಾತಿಗೂ ನೆರವಾಗಿ. ಸಣ್ಣ ಸಣ್ಣ ಕೆಲಸಗಳನ್ನು ಮಾಡಿಕೊಡುವ ಮೂಲಕ ನಿನ್ನೊಂದಿಗೆ ನಾನಿದ್ದೇನೆ ಎಂಬ ಭಾವನೆ ಮೂಡಿಸಿ. ಪತ್ನಿ ಏನಾದರೂ ಹೇಳುವಾಗ ತಾತ್ಸಾರ ಮಾಡದೇ ಹೇಳುವುದನ್ನು ಕೇಳಿಸಿಕೊಳ್ಳಿ. ಸಾಧ್ಯವಾದರೆ, ಏನಾದರೂ ಸಲಹೆ ಸೂಚನೆಗಳಿದ್ದರೆ ಕೊಡಿ. ಅಲ್ಲದೇ ಪತ್ನಿ ಕೆಲಸ ಮಾಡುವಾಗ ಏನಾದರೂ ಸಹಾಯ ಮಾಡಲೇ ಎಂದು ಕೇಳಿ. ನೀವು ಕೆಲಸ ಮಾಡದಿದ್ದರೂ ಪರವಾಗಿಲ್ಲ, ಈ ಮಾತಿನಿಂದ ಅವರಿಗೆ ನೀವು ಕೆಲಸ ಮಾಡಿಕೊಟ್ಟು ಸಹಾಯ ಮಾಡಿದಷ್ಟೇ ಖುಷಿ ಸಿಗುತ್ತದೆ.

ಪ್ರತಿ ವಿಷಯಕ್ಕೆ ಸಿಟ್ಟು ಮಾಡಿಕೊಳ್ಳದೇ ಅವರ ಅಭಿಪ್ರಾಯ ಕೇಳಿ, ನಿಮ್ಮ ಅನಿಸಿಕೆಯನ್ನು ತಿಳಿಸಿ. ಮುಚ್ಚಿಡುವುದಕ್ಕಿಂತ ಸಂಗಾತಿಯೊಂದಿಗೆ ಅಭಿಪ್ರಾಯ ಹಂಚಿಕೊಳ್ಳುವುದು ಒಳ್ಳೆಯದು. ಕೆಲಸದ ಸ್ಥಳದಲ್ಲಿನ ಸಿಟ್ಟನ್ನು ಮನೆಯವರೆಗೂ ತರಬೇಡಿ. ಮನೆಯೊಳಗೆ ನೀವು ನೀವಾಗಿದ್ದರೆ ಕುಟುಂಬದವರಿಗೂ ಹಿತವೆನಿಸುತ್ತದೆ. ಸಿಟ್ಟು ಮಾಡಿಕೊಂಡರೆ ಮೌನವೇ ಆವರಿಸುತ್ತದೆ. ಮನೆಯವರೊಂದಿಗೆ ಸಾಧ್ಯವಾದಷ್ಟು ಹೆಚ್ಚಿನ ಸಮಯ ಕಳೆಯಿರಿ.

ಹುರಿದ ಬೆಳ್ಳುಳ್ಳಿ ಅಮೃತಕ್ಕೆ ಸಮ

$
0
0
garlic-1481118078

ಆಹಾರದ ರುಚಿ ಹೆಚ್ಚಿಸಲು ನಾವು ಬೆಳ್ಳುಳ್ಳಿಯನ್ನು ಉಪಯೋಗಿಸ್ತೇವೆ. ಇದ್ರ ಬಳಕೆಯಿಂದ ಆಹಾರದ ರುಚಿ ಬದಲಾಗುತ್ತದೆ. ಆದ್ರೆ ಈ ಬೆಳ್ಳುಳ್ಳಿಯ ಒಂದು ಮೊಗ್ಗು, ರುಚಿ ಹೆಚ್ಚಿಸುವ ಜೊತೆಗೆ ನಮ್ಮ ದೇಹದಲ್ಲಿರುವ ಅನೇಕ ರೋಗಗಳನ್ನು ಹೊಡೆದೋಡಿಸಲು ನೆರವಾಗುತ್ತದೆ.

ಖಾಲಿ ಹೊಟ್ಟೆಯಲ್ಲಿ ಬೆಳ್ಳುಳ್ಳಿ ಸೇವನೆ ಮಾಡುವುದು ಅಮೃತಕ್ಕೆ ಸಮಾನ. ಮೂಲವ್ಯಾಧಿ, ಮಲಬದ್ಧತೆ, ಕಿವಿನೋವು, ರಕ್ತದೊತ್ತಡ ಇತ್ಯಾದಿ ಅನೇಕ ಕಾಯಿಲೆಗಳಿಗೆ ಇದು ರಾಮಬಾಣ. ಹಸಿವನ್ನು ಹೆಚ್ಚಿಸುವ ಕೆಲಸವನ್ನೂ ಇದು ಮಾಡುತ್ತದೆ. ಇತ್ತೀಚೆಗೆ ನಡೆದ ಸಂಶೋಧನೆಯೊಂದು ಬೆಳ್ಳುಳ್ಳಿ ಆರೋಗ್ಯಕ್ಕೆ ಎಷ್ಟು ಒಳ್ಳೆಯದು ಎಂಬ ವಿಷಯವನ್ನು ಬಿಚ್ಚಿಟ್ಟಿದೆ. ಅದ್ರ ಪ್ರಕಾರ ಪ್ರತಿದಿನ 5-6 ಬೆಳ್ಳುಳ್ಳಿ ಮೊಗ್ಗನ್ನು ತಿನ್ನುವ ವ್ಯಕ್ತಿಗೆ ಕೆಲವೇ ಗಂಟೆಗಳಲ್ಲಿ ಅದರ ಪರಿಣಾಮ ಕಾಣುತ್ತದೆ.

ದೇಹಕ್ಕೆ ಹೋದ ಬೆಳ್ಳುಳ್ಳಿ ಒಂದು ಗಂಟೆಯಲ್ಲಿ ಜೀರ್ಣವಾಗಿ ಅದು ಆರೋಗ್ಯ ವೃದ್ಧಿ ಕೆಲಸ ಶುರುಮಾಡುತ್ತದೆ. ಕೊಲೆಸ್ಟ್ರಾಲ್ ಕಡಿಮೆ ಮಾಡುವ ಕೆಲಸ ಮಾಡುತ್ತದೆ. ಶರೀರದಲ್ಲಿರುವ ವಿಷ ಪದಾರ್ಥವನ್ನು ಮಲ ಹಾಗೂ ಮೂತ್ರದ ಮೂಲಕ ಹೊರ ಹಾಕುತ್ತದೆ. ಶರೀರಕ್ಕೊಂದು ವಿಶೇಷ ಶಕ್ತಿ ಬರುತ್ತದೆ. ಇದರಿಂದ ನಿಮ್ಮ ದೇಹದ ಆಲಸ್ಯ ಕಡಿಮೆಯಾಗುತ್ತದೆ. ಹುರಿದ ಬೆಳ್ಳುಳ್ಳಿ ಸೇವನೆ ಮಾಡುವುದರಿಂದ ಕ್ಯಾನ್ಸರ್ ಕೋಶಗಳು ಶಕ್ತಿ ಕಳೆದುಕೊಳ್ಳುತ್ತವೆ.

ಪ್ರತಿದಿನ ಹುರಿದ ಬೆಳ್ಳುಳ್ಳಿ ಸೇವನೆ ಮಾಡುವುದರಿಂದ ಚಯಾಪಚಯ ಸುಲಭವಾಗಿ ಬೊಜ್ಜು ಕರಗುತ್ತದೆ. ರಕ್ತದೊತ್ತಡವನ್ನು ನಿಯಂತ್ರಿಸುತ್ತದೆ. ಶ್ವಾಸನಾಳಕ್ಕೆ ಬಹಳ ಪ್ರಯೋಜನಕಾರಿ. ಅಸ್ತಮಾ, ಕೆಮ್ಮು, ಕಫ ಕಡಿಮೆ ಮಾಡುವ ಗುಣ ಬೆಳ್ಳುಳ್ಳಿಗಿದೆ.


ರಾತ್ರೋರಾತ್ರಿ ಬೆಳ್ಳಗಾಗಲಿದೆ ನಿಮ್ಮ ಕಂಕುಳ

$
0
0
2017_4image_13_57_379714000h-ll

ಸ್ಲೀವ್ ಲೆಸ್ ಡ್ರೆಸ್ ಈಗ ಫ್ಯಾಷನ್. ಬೇಸಿಗೆಯಲ್ಲಂತೂ ಹುಡುಗಿಯರು ತೋಳಿರದ ಡ್ರೆಸ್ ಧರಿಸಲು ಇಷ್ಟಪಡ್ತಾರೆ. ಆದ್ರೆ  ಕಂಕುಳ ಕಪ್ಪಗಿದೆ ಎನ್ನುವ ಕಾರಣಕ್ಕೆ ಕೆಲ ಹುಡುಗಿಯರು ಸ್ಲೀವ್ ಲೆಸ್ ಡ್ರೆಸ್ ಧರಿಸುವುದಿಲ್ಲ. ಈ ಸಮಸ್ಯೆ ನಿಮಗೂ ಇದ್ದರೆ ಮನೆಯಲ್ಲಿರುವ ವಸ್ತುಗಳನ್ನು ಬಳಸಿ ಸುಲಭವಾಗಿ ಕಂಕುಳನ್ನು ಬೆಳ್ಳಗೆ ಮಾಡಿಕೊಳ್ಳುವ ಟಿಪ್ಸ್ ಇಲ್ಲಿದೆ.

ಇದಕ್ಕೆ ಬೇಕಾಗುವ ಪದಾರ್ಥ:

2 ಚಮಚ ಕಡಲೆಹಿಟ್ಟು, 1 ಚಮಚ ಮೊಸರು, 1 ಚಿಟಕಿ ಅರಿಶಿನ, ನಿಂಬೆ ರಸ 5 ಹನಿ. ಸ್ವಲ್ಪ ತೆಂಗಿನ ಎಣ್ಣೆ.

ಒಂದು ಪ್ಲೇಟ್ ಗೆ ಮೊಸರು, ಕಡಲೆ ಹಿಟ್ಟು, ನಿಂಬೆ ರಸ, ಅರಿಶಿನವನ್ನು ಹಾಕಿ ಚೆನ್ನಾಗಿ ಮಿಕ್ಸ್ ಮಾಡಿ. ಅದನ್ನು ಕಂಕುಳಿಗೆ ಹಚ್ಚಿಕೊಳ್ಳಿ. 30 ನಿಮಿಷ ಬಿಟ್ಟು ಕಂಕುಳನ್ನು ತೊಳೆಯಿರಿ. ಕಂಕುಳನ್ನು ಮೃದು ಬಟ್ಟೆಯಿಂದ ಕ್ಲೀನ್ ಮಾಡಿ. ನಂತ್ರ ತೆಂಗಿನ ಎಣ್ಣೆಯಿಂದ ಮಸಾಜ್ ಮಾಡಿ. ರಾತ್ರಿ ಮಲಗುವ ಮುನ್ನ ಹೀಗೆ ಮಾಡಬೇಕು.

ಗಡ್ಡ ಬೆಳೆಸಲು ಸಿಂಪಲ್ ಟಿಪ್ಸ್

$
0
0

ಉದ್ದದ ಗಡ್ಡ, ದೊಡ್ಡ ಮೀಸೆ ಈಗ ಫ್ಯಾಷನ್. ಮುಖದ ಮೇಲಿನ ಕೂದಲು ಹಾರ್ಮೋನ್ ಬದಲಾವಣೆ, ಅನುವಂಶಿಕ ಮತ್ತು ಅವರ ವಯಸ್ಸಿನ ಮೇಲೆ ಅವಲಂಬಿತವಾಗಿರುತ್ತದೆ. ಮೀಸೆ ಚಿಗುರಿದ ಹುಡುಗನನ್ನು ಹುಡುಗಿಯರು ಕಣ್ಣು ಮಿಟುಕಿಸದೆ ನೋಡ್ತಾರೆ. ಎಲ್ಲರನ್ನು ಆಕರ್ಷಿಸಲು ಚೆಂದದ, ಆಕರ್ಷಕ ಮೀಸೆ, ಗಡ್ಡ ಬಿಡಲು ಹುಡುಗ್ರು ಇನ್ನಿಲ್ಲದ ಕಸರತ್ತು ಮಾಡ್ತಾರೆ. ನೀವೂ  ದಟ್ಟವಾದ ಗಡ್ಡವನ್ನು ಬಯಸಿದರೆ, ಈ ವಿಧಾನಗಳನ್ನು ಅನುಸರಿಸಿ.

ನೆಲ್ಲಿಕಾಯಿ ಎಣ್ಣೆಯಿಂದ ದೈನಂದಿನ 15 ನಿಮಿಷಗಳ ಕಾಲ ಗಡ್ಡಕ್ಕೆ ಮಸಾಜ್ ಮಾಡಿ. ತಣ್ಣನೆಯ ನೀರಿನಿಂದ ತೊಳೆಯಿರಿ.

ದಾಲ್ಚಿನ್ನಿ ಪುಡಿಗೆ ಸ್ವಲ್ಪ ನಿಂಬೆ ರಸ ಹಾಕಿ ಮತ್ತು ಗಡ್ಡದ ಮೇಲೆ ಅಪ್ಲಾಯ್ ಮಾಡಿ ಉಜ್ಜಿ. 15 ನಿಮಿಷಗಳ ನಂತರ ಮುಖವನ್ನು ತೊಳೆಯಿರಿ. ಕೂದಲು ಬೆಳೆಯಲು ಪ್ರಾರಂಭವಾಗುತ್ತದೆ ಮತ್ತು ಚರ್ಮವು ಮೃದುವಾಗುತ್ತದೆ.

ಸಾಸಿವೆ ಎಲೆಗಳನ್ನು ರುಬ್ಬಿ ಅದಕ್ಕೆ ನಿಂಬೆ ರಸವನ್ನು ಸೇರಿಸಿ  ಅದನ್ನು 15 ನಿಮಿಷಗಳ ಕಾಲ ಮುಖಕ್ಕೆ ಹಚ್ಚಿ. ವಾರಕ್ಕೆ 2-3 ಬಾರಿ ಹೀಗೆ ಮಾಡಿ ಗಡ್ಡಕ್ಕೆ ಹೊಸ ಲುಕ್ ಬರುತ್ತದೆ.

ಬೆಚ್ಚಗಿನ ಹರಳೆಣ್ಣೆ ಅಥವಾ ಕೊಬ್ಬರಿ ಎಣ್ಣೆಯನ್ನು ಗಡ್ಡದ ಭಾಗಕ್ಕೆ ಹತ್ತು ನಿಮಿಷ ಚೆನ್ನಾಗಿ ಮಸಾಜ್ ಮಾಡಿ.

ಒಂದರಿಂದ ಒಂದೂವರೆ ಇಂಚು ಕೂದಲು ಬೆಳೆದ ನಂತರ ಗಡ್ಡಕ್ಕೆ ಶೇಪ್ ಕೊಟ್ಟರೆ ಚೆನ್ನಾಗಿ ಗಡ್ಡ ಬೆಳೆಯುತ್ತೆ.

ಸೆಕ್ಸ್ ಜೀವನವನ್ನು ಇನ್ನಷ್ಟು ಸುಂದರ ಹಾಗೂ ಉತ್ಸುಕಗೊಳಿಸುತ್ತೆ ಈ ಆಪ್

$
0
0

ಆನ್ಲೈನ್ ಡೇಟಿಂಗ್ ಇರಲಿ ಇಲ್ಲ ಬೆಡ್ ರೂಂನಲ್ಲಿ ರೋಮಾಂಚಕ ಸೆಕ್ಸ್ ಇರಲಿ, ಎಲ್ಲದಕ್ಕೂ ಡಿಜಿಟಲ್ ದುನಿಯಾದಲ್ಲಿ ನಿಮಗೆ ಸಹಾಯ ಸಿಗ್ತಿದೆ. ನಿಮ್ಮ ಸೆಕ್ಸ್ ಜೀವನವನ್ನು ಇನ್ನಷ್ಟು ಖುಷಿಗೊಳಿಸಲು ಮೊಬೈಲ್ ಆಪ್ ನಿಮಗೆ ನೆರವಾಗಲಿದೆ.

ಯಸ್, ಅನೇಕ ಮೊಬೈಲ್ ಆಪ್ ಗಳು ಬೆಡ್ ರೂಮಿನಲ್ಲಿ ನೀವು ಹೇಗಿರಬೇಕು? ಸಂಗಾತಿಯನ್ನು ಹೇಗೆ ಖುಷಿಗೊಳಿಸಬಹುದು ಎಂಬಲ್ಲದ ಬಗ್ಗೆ ಸಲಹೆ ನೀಡುತ್ತವೆ.

ಪಿಲ್ಲೋ (Pillow) : ಇದು ದಂಪತಿ ಲೈಂಗಿಕ ಜೀವನವನ್ನು ಮತ್ತಷ್ಟು ಸುಂದರಗೊಳಿಸುತ್ತದೆ. ಮೋಟಿವ್ ಆಡಿಯೊ ಗೈಡ್ ರೀತಿ ಕೆಲಸ ಮಾಡುತ್ತದೆ. ಸಂಗಾತಿಯ ಉತ್ಸಾಹ ಹೇಗೆ ಹೆಚ್ಚಿಸಬೇಕು? ಬೆಡ್ ರೂಂನಲ್ಲಿ ಹೇಗಿರಬೇಕು? ಪರಾಕಾಷ್ಠೆ ತಲುಪುವುದು ಹೇಗೆ ಹಾಗೂ ಗರ್ಭಾವಸ್ಥೆ ನಂತ್ರ ಮತ್ತೆ ಸೆಕ್ಸ್ ಲೈಫ್ ಹೇಗಿರಬೇಕು ಎಂಬೆಲ್ಲದರ ಬಗ್ಗೆ ಮಾಹಿತಿ ನೀಡುತ್ತದೆ.

ಐಕಾಮಸೂತ್ರ (iKamasutra) : ಈ ಆಪ್ ನಲ್ಲಿ ಒಟ್ಟು 9 ಸೆಗ್ಮೆಟ್ಸ್ ಇದೆ. ಸೆಕ್ಸ್ ನ 100 ಬೇರೆ ಬೇರೆ ಭಂಗಿಗಳ ಫೋಟೋಗಳಿವೆ. ಕಾಮಸೂತ್ರ ಗ್ರ್ಯಾಂಡ್ ಮಾಸ್ಟರ್ ಮೂಲಕ ಭಂಗಿಗಳ ಬಗ್ಗೆ ವಿವರ ತಿಳಿಯಬಹುದಾಗಿದೆ.

ತ್ರಿಂಡರ್ (3nder) : ಇದೊಂದು ಉಚಿತ ಆಪ್ ಆಗಿದೆ. ಇದ್ರಲ್ಲಿ ನಿಮ್ಮ ಇಚ್ಛೆಯನ್ನು ಹೇಳಬಹುದು. ಇದೊಂದು ವಿವಾದಾತ್ಮಕ ಆಪ್ ಆಗಿದ್ದು, ಡೇಟಿಂಗ್ ಸೈಟ್ ರೀತಿಯಲ್ಲಿ ಕೆಲಸ ಮಾಡುತ್ತದೆ.

ಪ್ಯೂರ್ (Pure) : ಸೆಕ್ಸ್ ಸಮಸ್ಯೆ ಬಗ್ಗೆ ಮಾತನಾಡಬೇಡಿ. ಅದಕ್ಕೆ ತಜ್ಞರಿದ್ದಾರೆ. ಕೇವಲ ಮಸ್ತಿಗೆ ಈ ಆಪ್ ಎಂದು ಟ್ಯಾಗ್ ಲೈನ್ ನೀಡಲಾಗಿದೆ. ಆಸಕ್ತರನ್ನು ಇದು ಒಂದು ಮಾಡುವ ಕೆಲಸ ಮಾಡುತ್ತದೆ.

ಬೆವರನ್ನು ಕಡೆಗಣಿಸಬೇಡಿ

$
0
0

Solutions for Sweating Too Much and Excessive Sweatingಶರೀರಕ್ಕೆ ಆಯಾಸವಾಗುವಂತಹ ಕೆಲಸ ಮಾಡಿದಾಗ ಬೆವರುವುದು ಸಾಮಾನ್ಯ ಸಂಗತಿ. ಇದರಿಂದ ದೇಹಕ್ಕೆ ಯಾವುದೇ ರೀತಿಯ ಅಪಾಯವಿಲ್ಲ. ಆದರೆ ಆಯಾಸವಿಲ್ಲದೇ ಬರುವ ಬೆವರನ್ನು ಮಾತ್ರ ಕಡೆಗಣಿಸಬೇಡಿ. ಹೀಗೆ ಸುಮ್ಮನೆ ಬರುವ ಬೆವರು ಅಪಾಯದ ಮುನ್ಸೂಚನೆ ಆಗಿರಬಹುದು.

ತುಂಬ ಸಮಯದಿಂದ ಕುಡಿತದ ಅಭ್ಯಾಸ ಇರುವವರಿಗೆ ಹಾಗೂ ಹೆಚ್ಚು ಹೆಚ್ಚು ಕುಡಿಯುವವರು ತುಂಬ ಬೆವರುತ್ತಾರೆ. ಕೆಲವು ಮಹಿಳೆಯರಿಗೆ ಗರ್ಭಾವಸ್ಥೆಯಲ್ಲಿ ಹಾರ್ಮೋನ್ ವ್ಯತ್ಯಾಸದಿಂದ ಬೆವರು ಬರುವುದು ಸಾಮಾನ್ಯ.

ವಯಸ್ಸಾದ ಕೆಲವು ಮಹಿಳೆಯರು ತುಂಬ ಬೆವರುತ್ತಾರೆ. ಋತು ಚಕ್ರ ನಿಂತಾಗ ಹೀಗೆ ಬೆವರುವುದು ಸಹಜ. ಹೆಚ್ಚಿನ ಬೆವರು ಕೆಲವೊಮ್ಮೆ ಥೈರಾಯ್ಡ್ ಸಮಸ್ಯೆಯ ಮುನ್ಸೂಚನೆಯಾಗಿರುತ್ತದೆ. ಹಾಗಿದ್ದಲ್ಲಿ ವೈದ್ಯರನ್ನು ಕಾಣುವುದು ಉತ್ತಮ. ಆದರೆ ಕೆಲವೊಮ್ಮೆ ಅತಿಯಾಗಿ ಬೆವರುವುದು ಕ್ಯಾನ್ಸರ್ ನ ಲಕ್ಷಣವಾಗಿರುತ್ತದೆ. ಹೀಗಾದಾಗ ರಾತ್ರಿಯ ಸಮಯದಲ್ಲಿ ತುಂಬ ಬೆವರುತ್ತಾರೆ. ವಾತಾವರಣ ತಂಪಾಗಿದ್ದರೂ ಕೂಡ ಬೆವರು ಬರುತ್ತದೆ. ಈ ಸಮಸ್ಯೆ ಬಹು ಗಂಭೀರವಾಗಿದ್ದು, ಸೂಕ್ತ ಚಿಕಿತ್ಸೆಯ ಅವಶ್ಯಕತೆ ಇರುತ್ತದೆ.

ರಕ್ತದೊತ್ತಡ ನಿಯಂತ್ರಿಸುತ್ತೆ ಸ್ತನ್ಯಪಾನ

$
0
0
breastfeerding_sm_650_100816020831

ಫಿಗರ್ ಹಾಳಾಗುತ್ತೆ ಎನ್ನುವ ಕಾರಣಕ್ಕೆ ಅನೇಕ ಮಹಿಳೆಯರು ಸ್ತನ್ಯಪಾನ ಮಾಡಿಸಲು ಹಿಂದೇಟು ಹಾಕ್ತಾರೆ. ಆದ್ರೆ ಈ ಸುದ್ದಿ ಓದಿದ ನಂತ್ರ ಯಾವುದೇ ಮುಜುಗರವಿಲ್ಲದೇ ಸ್ತನ್ಯಪಾನ ಮಾಡಿಸ್ತಾರೆ.

ಸ್ತನ್ಯಪಾನದ ಬಗ್ಗೆ ಅಧ್ಯಯನ ನಡೆಸಿದ ಪಶ್ಚಿಮ ಸಿಡ್ನಿ ಸ್ಕೂಲ್ ಆಫ್ ಮೆಡಿಸಿನ್ ಅಧ್ಯಯನ ಸಂಸ್ಥೆ ಮಹತ್ವದ ವಿಷಯವನ್ನು ಹೊರಹಾಕಿದೆ. ಸ್ತನ್ಯಪಾನ ಮಕ್ಕಳ ಆರೋಗ್ಯಕ್ಕೊಂದೇ ಅಲ್ಲ ತಾಯಿಯ ಆರೋಗ್ಯ ವೃದ್ಧಿಗೂ ಒಳ್ಳೆಯದು ಎನ್ನುವ ಮಾಹಿತಿಯನ್ನು ನೀಡಿದೆ. ಸ್ತನ್ಯಪಾನದಿಂದ ಸ್ತನ ಕ್ಯಾನ್ಸರ್, ಅಂಡಾಶಯದ ಕ್ಯಾನ್ಸರ್ ಬರುವುದಿಲ್ಲ. ಹಾಗೆ ಮಧುಮೇಹ, ಅಧಿಕ ರಕ್ತದೊತ್ತಡ, ಹೃದಯಕ್ಕೆ ಸಂಬಂಧಿಸಿದ ಖಾಯಿಲೆಗಳು ನಿಯಂತ್ರಣಕ್ಕೆ ಬರುತ್ತದೆಯಂತೆ.

ಈ ಅಧ್ಯಯನದಲ್ಲಿ ಮಹಿಳೆಯರನ್ನು ಎರಡು ಗುಂಪುಗಳನ್ನಾಗಿ ವಿಂಗಡಿಸಲಾಗಿತ್ತು. ಒಂದು ಗುಂಪಿನ ಮಹಿಳೆಯರು ಪ್ರತಿದಿನ ಅನೇಕ ಬಾರಿ ಸ್ತನ್ಯಪಾನ ಮಾಡಿಸ್ತಾ ಇದ್ರು. ಇನ್ನೊಂದು ಗುಂಪಿನ ಮಹಿಳೆಯರು ಕೇವಲ ಒಂದು ಬಾರಿ ಮಾತ್ರ ಮಾಡಿಸ್ತಾ ಇದ್ದರು. ಅನೇಕ ಬಾರಿ ಹಾಲುಣಿಸುವ ಮಹಿಳೆಯರ ಹೃದಯ ಇನ್ನೊಂದು ಗುಂಪಿನ ಮಹಿಳೆಯರಿಗಿಂತ ಹೆಚ್ಚು ಆರೋಗ್ಯವಾಗಿತ್ತು.

64 ವರ್ಷದೊಳಗೆ ಕಂಡು ಬರುವ ರಕ್ತದೊತ್ತಡ ನಿಯಂತ್ರಣಕ್ಕೆ ಬರುತ್ತದೆಯಂತೆ. 45 ವರ್ಷ ಮೇಲ್ಪಟ್ಟ 785 ಮಹಿಳೆಯರನ್ನು ಈ ಅಧ್ಯಯನಕ್ಕೆ ಬಳಸಿಕೊಳ್ಳಲಾಗಿತ್ತು. ಸ್ತನ್ಯಪಾನದ ವೇಳೆ ಹೊರಬರುವ ಹಾರ್ಮೋನ್ ಮಹಿಳೆಯರನ್ನು ಆರೋಗ್ಯವಂತರನ್ನಾಗಿಸುತ್ತದೆ ಎಂದು ಅಧ್ಯಯನ ಹೇಳಿದೆ.

ಸವಿಯಲು ಬಲು ರುಚಿ ನೂಡಲ್ಸ್ ಸಮೋಸ

$
0
0

Chinese-Noodles-Samosa-H2-WP-WT-Sಬೇಕಾಗುವ ಸಾಮಾಗ್ರಿಗಳು: ಮೈದಾ ಹಿಟ್ಟು 170 ಗ್ರಾಂ, ಎಣ್ಣೆ 1 ಸ್ಪೂನ್, ರುಚಿಗೆ ತಕ್ಕಷ್ಟು ಉಪ್ಪು.

ಹೂರಣಕ್ಕೆ ಬೇಕಾಗುವ ಸಾಮಾಗ್ರಿಗಳು: ಸಣ್ಣಗೆ ಹೆಚ್ಚಿದ ಈರುಳ್ಳಿ ಅರ್ಧ ಕಪ್, ಚಿಕ್ಕದಾಗಿ ಹೆಚ್ಚಿ ಬೇಯಿಸಿದ ಆಲೂಗಡ್ಡೆ ಅರ್ಧ ಕಪ್, ಬೇಯಿಸಿದ ಬಟಾಣಿ, ಬೇಯಿಸಿದ ನೂಡಲ್ಸ್ 1 ಬಟ್ಟಲು, ಕೊತ್ತಂಬರಿ ಸೊಪ್ಪು ಸ್ವಲ್ಪ, ಗರಂ ಮಸಾಲ ಅರ್ಧ ಚಮಚ, ಸೋಯಾ ಸಾಸ್ ಒಂದೂವರೆ ಚಮಚ, ತುಪ್ಪ 2 ಚಮಚ, ಕರಿಯಲು ಬೇಕಾಗುವಷ್ಟು ಎಣ್ಣೆ.

ಮಾಡುವ ವಿಧಾನ : ಬಾಣಲೆಗೆ ಎಣ್ಣೆ ಹಾಕಿ ಕಾಯಿಸಿ. ಹೆಚ್ಚಿದ ಈರುಳ್ಳಿ, ಆಲೂಗಡ್ಡೆ, ಬಟಾಣಿ ಬೇಯಿಸಿದ ನೂಡಲ್ಸ್, ಗರಂ ಮಸಾಲ, ಸೋಯಾ ಸಾಸ್ ಮತ್ತು ಉಪ್ಪು ಹಾಕಿ ಕೈಯಾಡಿಸಿ ಕೊನೆಯಲ್ಲಿ ಕೊತ್ತಂಬರಿ ಸೊಪ್ಪು ಹಾಕಿ ಹೂರಣ ರೆಡಿ ಮಾಡಿ ತಣ್ಣಗಾಗಲು ಬಿಡಿ. ಮೈದಾಹಿಟ್ಟಿಗೆ ಉಪ್ಪು ಮತ್ತು ತುಪ್ಪ ಹಾಕಿ ಬೆಚ್ಚಗಿನ ನೀರಿನಿಂದ ಚೆನ್ನಾಗಿ ಕಲೆಸಿ ಉಂಡೆಗಳನ್ನಾಗಿ ಮಾಡಿ ತೆಳ್ಳಗೆ ಲಟ್ಟಿಸಿ. ಹೂರಣವನ್ನು ತುಂಬಿ ಸಮೋಸದ ಆಕಾರಕ್ಕೆ ಕತ್ತರಿಸಿ ಕಾದ ಎಣ್ಣೆಯಲ್ಲಿ ಹಾಕಿ ನಿಧಾನವಾಗಿ ಗರಿ ಗರಿಯಾಗಿ ಕರಿಯಬೇಕು. ಸ್ವಲ್ಪ ಹೊತ್ತಲ್ಲೇ ನೂಡಲ್ಸ್ ಸಮೋಸ ಸವಿಯಲು ಸಿಧ್ಧ.

ಖಾಲಿ ಹೊಟ್ಟೆಯಲ್ಲಿ ಹಾಲು-ತುಳಸಿ ಸೇವನೆ ಮಾಡಿದ್ರೆ ದೂರವಾಗುತ್ತೆ ರೋಗ

$
0
0
basil-1469531576

ಸಣ್ಣ ಸೀನು ಬಂದ್ರೂ ಮಾತ್ರೆ ತೆಗೆದುಕೊಳ್ಳುವ ಕಾಲ ಇದು. ಮಾತ್ರೆ ತಕ್ಷಣ ಆರಾಮ ನೀಡುತ್ತದೆ ನಿಜ. ಆದ್ರೆ ಅದ್ರಿಂದ ಸಾಕಷ್ಟು ಅಡ್ಡ ಪರಿಣಾಮಗಳಿವೆ. ನಮ್ಮ ಪೂರ್ವಜರು ಆಯುರ್ವೇದ ಹಾಗೂ ಮನೆ ಮದ್ದುಗಳಿಂದ ರೋಗಗಳನ್ನು ಗುಣಪಡಿಸಿಕೊಳ್ತಾ ಇದ್ದರು. ಇದರಿಂದ ಯಾವುದೇ ಅಡ್ಡ ಪರಿಣಾಮಗಳಾಗ್ತಾ ಇರಲಿಲ್ಲ.

ತುಳಸಿ ಗಿಡದ ಮಹತ್ವ ಎಲ್ಲರಿಗೂ ಗೊತ್ತು. ನೆಗಡಿ, ಜ್ವರ, ಕೆಮ್ಮಿಗೆ ತುಳಸಿಯನ್ನು ಬಳಸ್ತಾರೆ. ಸಾಕಷ್ಟು ಔಷಧಿ ಗುಣವಿರುವ ಈ ತುಳಸಿಯನ್ನು ಹಾಲಿನ ಜೊತೆ ಖಾಲಿ ಹೊಟ್ಟೆಯಲ್ಲಿ ಕುಡಿಯುವುದು ಬಹಳ ಒಳ್ಳೆಯದು. ಅನೇಕ ರೋಗಗಳಿಗೆ ಇದು ಮದ್ದಿನ ರೂಪದಲ್ಲಿ ಕೆಲಸ ಮಾಡುತ್ತದೆ.

ಕ್ಯಾನ್ಸರ್ ನಿಂದ ನಮ್ಮನ್ನು ರಕ್ಷಿಸುವ ಶಕ್ತಿ ಇದಕ್ಕಿದೆ. ಎಂಟಿಬಯೋಟಿಕ್ ಹಾಗೂ ಎಂಟಿಆಕ್ಸಿಡೆಂಟ್ ಗುಣ ತುಳಸಿಯಲ್ಲಿದೆ. ಹಾಲಿನಲ್ಲಿ ಪೋಷಕಾಂಶವಿದೆ. ಇದರಿಂದ ಪ್ರತಿರಕ್ಷಣಾ ಶಕ್ತಿ ಹೆಚ್ಚಾಗುತ್ತದೆ. ನಮ್ಮ ದೇಹ ಕ್ಯಾನ್ಸರ್ ನಂತ ರೋಗಗಳ ವಿರುದ್ಧ ಹೋರಾಡುವ ಶಕ್ತಿ ಪಡೆಯುತ್ತದೆ.

ಈಗಿನ ಕಾಲದಲ್ಲಿ ಒಂದಲ್ಲ ಒಂದು ಕಾರಣಕ್ಕೆ ಎಲ್ಲರೂ ಕೀಳರಿಮೆಗೆ ಗುರಿಯಾಗ್ತಿದ್ದಾರೆ. ಕೆಲವರು ಆತ್ಮಹತ್ಯೆ ಮಾಡಿಕೊಳ್ಳುವ ಹಂತಕ್ಕೆ ಹೋಗ್ತಾರೆ. ನಿಮ್ಮಲ್ಲಿ ಅಥವಾ ನಿಮ್ಮ ಅಕ್ಕಪಕ್ಕದವರಲ್ಲಿ ಈ ಕೀಳರಿಮೆ ಕಾಣಿಸಿಕೊಂಡ್ರೆ ಹಾಲಿನ ಜೊತೆ ತುಳಸಿ ಹಾಕಿ ಕುಡಿಯಿರಿ. ಇದು ನರಮಂಡಲವನ್ನು ಸಮತೋಲನದಲ್ಲಿಡುತ್ತದೆ. ಒತ್ತಡವನ್ನುಂಟು ಮಾಡುವ ಹಾರ್ಮೋನ್ ಗಳನ್ನು ನಿಯಂತ್ರಿಸುತ್ತದೆ. ಜೊತೆಗೆ ಆಗಾಗ ಕಾಣಿಸಿಕೊಳ್ಳುವ ತಲೆನೋವನ್ನು ದೂರ ಮಾಡುತ್ತದೆ.

ಪ್ರತಿದಿನ ಖಾಲಿ ಹೊಟ್ಟೆಯಲ್ಲಿ ತುಳಸಿ ಹಾಲು ಸೇವನೆ ಮಾಡುವುದರಿಂದ ಅಸ್ತಮಾದಂತ ಖಾಯಿಲೆಗಳು ದೂರವಾಗುತ್ತವೆ.

ಕಿಡ್ನಿಯಲ್ಲಿ ಕಲ್ಲು ಬೆಳೆಯುತ್ತಿದ್ದರೆ ಖಾಲಿ ಹೊಟ್ಟೆಯಲ್ಲಿ ತುಳಸಿ ಹಾಲನ್ನು ಕುಡಿಯಿರಿ. ಕೆಲವೇ ದಿನಗಳಲ್ಲಿ ಕಲ್ಲು ಕರಗುತ್ತದೆ.

ಹೃದಯ ಸಂಬಂಧಿ ಖಾಯಿಲೆಯಿಂದ ಬಳಲುತ್ತಿರುವವರು ಖಾಲಿ ಹೊಟ್ಟೆಯಲ್ಲಿ ಇದನ್ನು ಕುಡಿಯುತ್ತ ಬಂದರೆ ಕೆಲವೇ ದಿನಗಳಲ್ಲಿ ಪರಿಣಾಮ ಕಾಣಬಹುದಾಗಿದೆ.


ಪ್ರತಿ ನಿತ್ಯ 22 ನಿಮಿಷದ ವಾಕಿಂಗ್ ನಿಂದ ಏನೆಲ್ಲಾ ಲಾಭವಿದೆ ಗೊತ್ತಾ…?

$
0
0

ಇಂದಿನ ಯಾಂತ್ರಿಕ ಜೀವನದಲ್ಲಿ ಆರೋಗ್ಯದಿಂದ ಇರಲು ಏನೆಲ್ಲ ಪ್ರಯತ್ನ ಪಡಬೇಕು ಎನ್ನುವ ಅನೇಕರ ಪ್ರಶ್ನೆಗೆ ಉತ್ತರ ದೊರೆತಿದ್ದು, ದಿನಕ್ಕೆ 22 ನಿಮಿಷ ವಾಕಿಂಗ್ ಮಾಡಿದರೆ ಸಾಕು ಹಲವು ಸಮಸ್ಯೆಗಳಿಂದ ದೂರವಿರಬಹುದಂತೆ.

ಹೌದು, ಅಮೆರಿಕಾ ಜರ್ನಲ್ ವೊಂದರ ಸಂಶೋಧನೆಯಲ್ಲಿ ಈ ಅಂಶ ಬಹಿರಂಗಗೊಂಡಿದೆ. ಪ್ರತಿನಿತ್ಯ 22 ನಿಮಿಷ, ವಾರಕ್ಕೆ 150 ನಿಮಿಷದಂತೆ ವಾಕಿಂಗ್ ಮಾಡುವುದರಿಂದ, ಡಯಾಬಿಟಿಸ್, ಬಿಪಿ ಸೇರಿದಂತೆ ಕೆಲವು ಹೃದ್ರೋಗಗಳಿಂದ ದೂರವಿರಬಹುದು ಎನ್ನುವ ಅಂಶ ಬಹಿರಂಗಗೊಂಡಿದೆ. ಇಷ್ಟು ಮಾತ್ರವಲ್ಲದೇ ಒತ್ತಡ ಹಾಗೂ ಖಿನ್ನತೆಯಿಂದ ಹೊರಬರಲು ಇದು ಸಹಾಯವಾಗುತ್ತದೆ ಎಂದು ತಜ್ಞರು ಹೇಳಿದ್ದಾರೆ.

ಸುಮಾರು 13 ವರ್ಷ ನಡೆಸಿರುವ ಸಂಶೋಧನೆಯಲ್ಲಿ ಯುಕೆ ದೇಶದ 50 ಸಾವಿರ ಜನರ ಆರೋಗ್ಯದ ಮಾದರಿಯನ್ನು ಪಡೆಯಲಾಗಿದೆ. ಪ್ರತಿನಿತ್ಯ ವಾಕ್ ಮಾಡುವ ಶೇ.20 ರಷ್ಟು ಮಂದಿ ಹೆಚ್ಚು ಕಾಲ ಬದುಕಿದ್ದು, ಇತರರೊಂದಿಗೆ ಹೋಲಿಸಿದರೆ ಹೃದ್ರೋಗದಿಂದ ಶೇ.24 ರಷ್ಟು ಮಂದಿ ದೂರವಿದ್ದಾರೆ ಎಂದು ತಿಳಿದುಬಂದಿದೆ.

ವಾಕಿಂಗ್ ಮಾಡುವುದರಿಂದ ದೇಹದ ಎಲ್ಲ ಅಂಗಗಳಿಗೂ ವ್ಯಾಯಾಮವಾಗುವುದರಿಂದ, ಸಂಶೋಧನೆಯ ಅಂತಿಮದಲ್ಲಿ ತಜ್ಞರೊಬ್ಬರು ನಡಿಗೆಯನ್ನು ಅತ್ಯುತ್ತಮ ವ್ಯಾಯಾಮವೆಂದು ಅಭಿಪ್ರಾಯಪಟ್ಟಿದ್ದಾರೆ.

ಸಂಬಂಧ ಬೆಳೆಸುವ ಮುನ್ನ ಈ ಕೆಲಸ ಮಾಡಬೇಡಿ

$
0
0
2016_11image_16_45_479764326raleshion-1-ll

ಶಾರೀರಿಕ ಸಂಬಂಧ, ಸುಖ ದಾಂಪತ್ಯದ ಒಂದು ಭಾಗ. ಸಂಬಂಧ ಹಾಳಾದ್ರೆ ದಾಂಪತ್ಯ ಕೆಟ್ಟಂತೆ. ಈ ಸಂಬಂಧ ಬೆಳೆಸುವ  ಮೊದಲು ಕೆಲವೊಂದು ವಿಷಯಗಳ ಬಗ್ಗೆ ಗಮನ ನೀಡಬೇಕಾಗುತ್ತದೆ. ಕೆಲವೊಂದು ಪದಾರ್ಥಗಳ ಸೇವನೆ ಒಳ್ಳೆಯದಲ್ಲ. ಈ ಬಗ್ಗೆ ಸಂಶೋಧನೆ ಸಾಕಷ್ಟು ವಿಷಯಗಳನ್ನು ಬಹಿರಂಗಪಡಿಸಿದೆ.

ಶಾರೀರಿಕ ಸಂಬಂಧ ಬೆಳೆಸುವ ಮುನ್ನ ಹೊಟ್ಟೆ ತುಂಬಾ ಭೋಜನ ಸೇವನೆ ಮಾಡಬಾರದಂತೆ. ಹೆಚ್ಚು ಆಹಾರ ಸೇವನೆ ಮಾಡಿದ್ರೆ ಮೆಲಟೋನಿನ್ ಮತ್ತು ಸೆರೋಟೋನಿನ್ ಹೆಚ್ಚಾಗಿ ನಿದ್ರೆ ಬರುವಂತಾಗುತ್ತದೆ.

ದ್ರವ ಪದಾರ್ಥವನ್ನು ಕೂಡ ಕಡಿಮೆ ಸೇವನೆ ಮಾಡಿ ಎನ್ನುತ್ತದೆ ಸಂಶೋಧನೆ. ಶಾರೀರಿಕ ಸಂಬಂಧ ಬೆಳೆಸುವ ಮುನ್ನ ಹೆಚ್ಚಿಗೆ ದ್ರವ ಪದಾರ್ಥ ಸೇವನೆ ಮಾಡಿದಲ್ಲಿ ಉತ್ಸಾಹ ಕಡಿಮೆಯಾಗುತ್ತದೆ ಎಂದು ಸಂಶೋಧನೆ ಹೇಳುತ್ತದೆ.

ಸೌಂದರ್ಯದ ಬಗ್ಗೆ ಹೆಚ್ಚು ತಲೆಕೆಡಿಸಿಕೊಳ್ಳಬೇಡಿ. ಶಾರೀರಿಕ ಸಂಬಂಧ ಬೆಳೆಸುವ ವೇಳೆ ಆತ್ಮವಿಶ್ವಾಸ ಬಹಳ ಮುಖ್ಯ ಎಂದಿದೆ ಸಂಶೋಧನೆ.

 

ಸೆಕ್ಸ್ ನಂತ್ರ ಪುರುಷರನ್ನೂ ಕಾಡುತ್ತೆ ಈ ಸಮಸ್ಯೆ

$
0
0

ಸಂಭೋಗದ ನಂತ್ರ ಪುರುಷರು ಖುಷಿ ಖುಷಿಯಾಗಿರ್ತಾರೆಂದು ಭಾವಿಸಲಾಗಿದೆ. ಆದ್ರೆ ಇದು ಸುಳ್ಳು. ಸೆಕ್ಸ್ ನಂತ್ರ ಆ ಸೆಷನ್ಸ್ ಬಗ್ಗೆ ಮಹಿಳೆಯರಿಗಿಂತ ಪುರುಷರು ಹೆಚ್ಚು ಆಲೋಚನೆ ಮಾಡ್ತಾರೆ. ಅನೇಕ ಚಿಂತೆಗಳು ಅವ್ರನ್ನು ಕಾಡುತ್ತವೆ. ಸಮೀಕ್ಷೆಯೊಂದರಲ್ಲಿ ಸೆಕ್ಸ್ ನಂತ್ರ ಏನು ಎಂಬ ಪ್ರಶ್ನೆಗಳಿಗೆ ಪುರುಷರು ಉತ್ತರ ನೀಡಿದ್ದಾರೆ.

ಸಂಭೋಗದ ನಂತ್ರ ಹೆಚ್ಚಿನ ಪುರುಷರು ತಮ್ಮ ಕಾರ್ಯಕ್ಷಮತೆ ಬಗ್ಗೆ ಚಿಂತಿಸುತ್ತಾರೆ. ಸಂಗಾತಿ ವರ್ತನೆ ಹಾಗೂ ಹಾವಭಾವಗಳಿಂದ ತನ್ನ ಕಾರ್ಯಕ್ಷಮತೆ ಬಗ್ಗೆ ತಿಳಿಯಲು ಪ್ರಯತ್ನಿಸುತ್ತಾರೆ. ಹಾಸಿಗೆಯಲ್ಲಿ ಸಂಗಾತಿಗೆ ಸರಿಯಾದ ಸುಖ ಸಿಗಲಿಲ್ಲ ಎಂಬುದು ಗೊತ್ತಾದ್ರೆ ಅದು ತನ್ನಿಂದಲೇ ಎಂದುಕೊಳ್ಳುವ ಪುರುಷರು, ಉತ್ತಮ ಸೆಕ್ಸ್ ಗೆ ಏನು ಮಾಡಬೇಕೆಂದು ದಿನವಿಡಿ ಚಿಂತಿಸುತ್ತಾರೆ.

ಮಹಿಳೆಯರೊಂದೇ ಅಲ್ಲ ಕೆಲ ಪುರುಷರು ಕೂಡ ಸೆಕ್ಸ್ ನಂತ್ರ ಖುಷಿಗೊಳ್ಳುವುದಿಲ್ಲ. ಸಂಭೋಗದ ನಂತ್ರ 40 ನಿಮಿಷಗಳವರೆಗೆ ಖಿನ್ನತೆಗೊಳಗಾಗುವವರಿದ್ದಾರೆ. ಸೆಕ್ಸ್ ನಲ್ಲಿ ಸುಖ ಸಿಗದೆ ಅವ್ರು ಹೀಗೆ ವರ್ತಿಸುವುದಿಲ್ಲ. ಖಿನ್ನತೆ ತಾತ್ಕಾಲಿಕವಾಗಿ ಅವ್ರನ್ನು ಕಾಡುತ್ತದೆ.

ನಿರೀಕ್ಷೆಗಳ ಜೊತೆ ಒತ್ತಡ ಪುರುಷರನ್ನು ಕಾಡುತ್ತದೆ. ಕೆಲವೊಮ್ಮೆ ಮಹಿಳಾ ಸಂಗಾತಿ ಸೆಕ್ಸ್ ನಂತ್ರ ಪುರುಷ ಸಂಗಾತಿ ನನ್ನನ್ನು ಪ್ರೀತಿ ಮಾಡಲಿ, ಪ್ರೀತಿಯ ಮಾತುಗಳನ್ನಾಡಲಿ ಎಂದು ಬಯಸ್ತಾಳೆ. ಆದ್ರೆ ಸುಸ್ತಿನಲ್ಲಿರುವ ಪುರುಷರನ್ನು ನಿದ್ರೆ ಸೆಳೆಯುತ್ತದೆ. ನಿದ್ರೆ ಮಾಡಿದ್ರೆ ಸಂಗಾತಿ ತನ್ನ ಬಗ್ಗೆ ತಪ್ಪು ತಿಳಿಯುತ್ತಾಳೆಂಬ ಭಯ, ಒತ್ತಡ ಅವ್ರನ್ನು ಕಾಡುತ್ತದೆ.

ಮಹಿಳೆಯರು ಎಲ್ಲ ಸಮಯದಲ್ಲಿ ಪರಾಕಾಷ್ಠೆ ತಲುಪುವುದಿಲ್ಲ. ಇದು ಗೊತ್ತಿರುವ ಪುರುಷರಿಗೆ ಸಂಗಾತಿ ಪರಾಕಾಷ್ಠೆ ಬಗ್ಗೆ ಸಂಶಯ ಮೂಡುತ್ತದೆ. ಸೆಕ್ಸ್ ವೇಳೆ ಮಹಿಳಾ ಸಂಗಾತಿ ನಿಜವಾಗಿ ಪರಾಕಾಷ್ಠೆ ತಲುಪಿದ್ದಳಾ ಅಥವಾ ನನ್ನನ್ನು ಖುಷಿಗೊಳಿಸಲು ಪರಾಕಾಷ್ಠೆ ನಾಟಕವಾಡಿದ್ದಾಳಾ ಎಂಬ ಸಂಶಯ ಶುರುವಾಗುತ್ತದೆ.

 

ಬ್ರೂಫೇನ್ ಸೇವಿಸುವವರು ಇದನ್ನೊಮ್ಮೆ ಓದಿ

$
0
0
tablet 3346

ಆಧುನಿಕತೆಯ ಪ್ರಭಾವದಿಂದ ಇಂದು ನಾವು ಹೆಚ್ಚು ಹೆಚ್ಚು ಇಂಗ್ಲಿಷ್ ಔಷಧಗಳ ಮೊರೆ ಹೋಗುತ್ತಿದ್ದೇವೆ. ಇದನ್ನು ತೆಗೆದುಕೊಂಡಾಕ್ಷಣ ನೋವು ನಿವಾರಣೆಯಾಗುತ್ತೆ ನಿಜ. ಆದರೆ ಅದರಿಂದ ನಮ್ಮ ಆರೋಗ್ಯಕ್ಕೆ ಎಷ್ಟು ಹಾನಿಯಾಗುತ್ತದೆ ಎಂಬುದನ್ನು ನಾವು ಅರಿತುಕೊಳ್ಳಬೇಕು.

ಬ್ರೂಪೇನ್ ಒಂದು ಉರಿಯೂತದ ವಿರೋಧಿ ಗುಳಿಗೆಯಾಗಿದ್ದು, ಇದನ್ನು ಸೇವಿಸಿದಾಕ್ಷಣ ನೋವೇ ಇಲ್ಲವೇನೋ ಎಂಬ ಭಾವನೆ ಉಂಟಾಗುತ್ತದೆ. ಏಕೆಂದರೆ ಇದು ನಮ್ಮ ಶರೀರದಲ್ಲಿ ನೋವು ಮತ್ತು ಉರಿಗಳಿಗೆ ಪ್ರತಿಕ್ರಿಯೆ ನೀಡುವ ಪದಾರ್ಥಗಳ ಉತ್ಪಾದನೆಯನ್ನೇ ತಡೆಯುತ್ತದೆ. ಹಾಗಾಗಿ ನಮಗೆ ನೋವುಗಳು ಇದ್ದರೂ ಅದರ ಅನುಭವ ಆಗುವುದಿಲ್ಲ. ಸತತವಾಗಿ ಬ್ರೂಫೇನ್ ಸೇವಿಸುವುದರಿಂದ ತಲೆ ಸುತ್ತು, ಹೊಟ್ಟೆ ಕೆಡುವುದು, ವಾಂತಿ, ಮಲಬದ್ಧತೆ, ಹೃದಯಾಘಾತದ ಸಂಭವವನ್ನು ಹೆಚ್ಚಿಸುತ್ತದೆ.

ಇಷ್ಟು ಅಡ್ಡ ಪರಿಣಾಮ ಬೀರುವ ಬ್ರೂಫೇನ್ ಸೇವಿಸುವ ಬದಲು ಕೆಲವು ಗಿಡಮೂಲಿಕೆಗಳ ಔಷಧಿಯನ್ನು ಸೇವಿಸಿ ಆರೋಗ್ಯ ಕಾಪಾಡಿಕೊಳ್ಳಿ. ಅಂತಹ ಕೆಲವು ಔಷಧಿಗಳು ಇಲ್ಲಿವೆ:

ನಿತ್ಯದ ಆಹಾರದಲ್ಲಿ ಆಲಿವ್ ಎಣ್ಣೆ ಉಪಯೋಗಿಸಿ. ಇದು ಉರಿ ನಿರೋಧಕ ಗುಣ ಹೊಂದಿದೆ.

ಗಾಯಗಳಿಗೆ ಐಸ್ ಪೀಸ್ ಅಥವಾ ಬಿಸಿ ನೀರಿನ ಶಾಖ ಕೊಡಿ. ಇದರಿಂದ ರಕ್ತ ಸಂಚಾರ ಹೆಚ್ಚುತ್ತದೆ.

ಮಾಂಸಖಂಡಗಳ ನೋವಿದ್ದರೆ ಫಿಜಿಕಲ್ ಥೆರಪಿಯನ್ನು ತೆಗೆದುಕೊಳ್ಳಿ.

ಬೆಳ್ಳುಳ್ಳಿಯ ಒಂದು ಎಸಳನ್ನು ನಿತ್ಯ ಸೇವಿಸಿ. ಇದು ಅನೇಕ ನೋವುಗಳನ್ನು ನಿವಾರಿಸುತ್ತದೆ ಮತ್ತು ಕ್ಯಾನ್ಸರ್ ನಂತಹ ಗಡ್ಡೆಗಳನ್ನು ಕ್ಷೀಣಗೊಳಿಸುವ ಶಕ್ತಿ ಇದಕ್ಕಿದೆ.

ನೋವುಗಳಿರುವ ಜಾಗಕ್ಕೆ ಅರಿಸಿನ ಹಚ್ಚಿ. ಇದರಲ್ಲಿರುವ ಕುರುಕುಮಿನ್ ಅಂಶ ನೋವು ನಿವಾರಕವಾಗಿ ಕೆಲಸ ನಿರ್ವಹಿಸುತ್ತದೆ.

ಮಕ್ಕಳಿಗೆ ಮಾಡಿ ಕೊಡಿ ಮಿಕ್ಸ್ ಫ್ರುಟ್ಸ್ ಐಸ್ ಕ್ರೀಮ್

$
0
0
ice_cream_mix_16_05_2016

ಹಣ್ಣು ಅಂದ್ರೆ ಮಾರು ದೂರ ಓಡ್ತಾರೆ ಮಕ್ಕಳು. ಹಾಗೆ ಐಸ್ ಕ್ರೀಂ ಅಂದ್ರೆ ಬಾಯಿ ಚಪ್ಪರಿಸಿಕೊಂಡು ಹತ್ತಿರ ಬರ್ತಾರೆ. ಒಂದು ಕಪ್ ಐಸ್ ಕ್ರೀಂ ಕೊಟ್ಟರೆ ಅವರಿಗೆ ಸಾಕಾಗೋದಿಲ್ಲ. ಇನ್ನೂ ಬೇಕು ಎನ್ನುವ ಹಠ ಮಾಮೂಲಿ. ಹೊರಗಿನ ಐಸ್ ಕ್ರೀಂ ಆರೋಗ್ಯ ಹಾಳುಮಾಡುತ್ತೆ ಎಂಬ ಭಯ ಇರುವ ಪಾಲಕರು ಮನೆಯಲ್ಲಿಯೇ ಸುಲಭವಾಗಿ ಐಸ್ ಕ್ರೀಂ ಸಿದ್ಧಪಡಿಸಿ ಮಕ್ಕಳಿಗೆ ನೀಡಿ.

ಮಿಕ್ಸ್ ಫ್ರುಟ್ಸ್ ಐಸ್ ಕ್ರೀಂ ಗೆ ಬೇಕಾಗುವ ಸಾಮಗ್ರಿ:

ಒಂದು ಕಪ್ ಕಿತ್ತಳೆ ರಸ

ಒಂದು ಕಪ್ ಅನಾನಸ್ ರಸ

½ ಕಪ್ ದಾಳಿಂಬೆ ರಸ

½ ಕಪ್ ಆಪಲ್ ಜ್ಯೂಸ್

½ ಕಪ್ ದ್ರಾಕ್ಷಿ ರಸ

ಎರಡು ಕಪ್  ಹಾಲು

ನಿಂಬೆ ರಸ ಒಂದು ಚಮಚ

ಮಿಕ್ಸ್ ಫ್ರುಟ್ಸ್ ಐಸ್ ಕ್ರೀಂ ಮಾಡುವ ವಿಧಾನ:

ಕಿತ್ತಳೆ ರಸ, ಅನಾನಸ್ ರಸ, ದಾಳಿಂಬೆ ರಸ, ಆಪಲ್ ರಸ ಹಾಗೂ ದ್ರಾಕ್ಷಿ ರಸ, ನಿಂಬೆ ರಸವನ್ನು ಬಾಣಲೆಯಲ್ಲಿ ಹಾಕಿ ಕುದಿಸಿ. ಒಂದು ಕಪ್ ರಸ ಅರ್ಧ ಕಪ್ ಆಗುವವರೆಗೆ ಕುದಿಸಿ. ಕುದಿಸಿದ ರಸ ಆರಿದ ನಂತ್ರ, ಮೊದಲೆ ಕುದಿಸಿ ಆರಿಸಿದ ಹಾಲನ್ನು ಅದಕ್ಕೆ ಮಿಕ್ಸ್ ಮಾಡಿ, ಮಿಕ್ಸಿ ಮಾಡಿ. ನಂತ್ರ ಫ್ರಿಜ್ ನಲ್ಲಿಡಿ. ಅದು ಸ್ವಲ್ಪ ಗಟ್ಟಿಯಾಗ್ತಾ ಇದ್ದಂತೆ, ಅದನ್ನು ತೆಗೆದು ಮತ್ತೆ ಮಿಕ್ಸಿ ಮಾಡಿ. ಮತ್ತೆ ಫ್ರಿಜ್ ನಲ್ಲಿಡಿ. ಇದು ಗಟ್ಟಿಯಾದ ನಂತ್ರ ಸ್ಟ್ರಾಬೆರಿ ಸಾಸ್ ಅಥವಾ ಚಾಕೊಲೇಟ್ ಸಾಸ್ ಹಾಕಿ ಸರ್ವ್ ಮಾಡಿ.

Viewing all 14227 articles
Browse latest View live




Latest Images