Quantcast
Channel: Life Style | Kannada Dunia | Kannada News | Karnataka News | India News
Viewing all 14227 articles
Browse latest View live

ದಸರಾಕ್ಕೆ ಹೋಗುತ್ತಿದ್ದೀರಾ…? ಹಾಗಾದ್ರೆ ಈ ಬಿರಿಯಾನಿ ತಪ್ಪದೇ ಸವಿದು ಬನ್ನಿ

$
0
0

ಮೈಸೂರು ದಸರಾ ಸಂಭ್ರಮಕ್ಕೆ ಈಗಾಗಲೇ ಸಜ್ಜಾಗಿದೆ. ದಸರಾ ಸಂಭ್ರಮದ ಜತೆಗೆ ಖಾದ್ಯ ಪ್ರಿಯರ ಬಾಯಿ ರುಚಿ ತಣಿಸಲು ಇಲ್ಲಿ ಆಹಾರ ಮೇಳವೂ ನಡೆಯುತ್ತದೆ. ಇದರಲ್ಲಿ ವಿಶೇಷವಾದದ್ದು ಬಂಬೂ ಬಿರಿಯಾನಿ. ಅರೆ….ಇದೇನು ಎಂದು ಹುಬ್ಬೇರಿಸಬೇಡಿ. ದಸರಾದಲ್ಲಿನ ಆಹಾರ ಮೇಳದಲ್ಲಿ ಸೋಲಿಗರು ತಯಾರಿಸುವ ರುಚಿಯಾದ ಬಿರಿಯಾನಿಯೇ ಈ ಬಂಬೂ ಬಿರಿಯಾನಿ.

ಮೈಸೂರಿನ ನಾಗರಹೊಳೆ ಕಾಡಿನಲ್ಲಿರುವ ಸೋಲಿಗರು ಮಾಡುವ ಈ ಬಿರಿಯಾನಿ ಹೆಸರುವಾಸಿಯಾದದ್ದು. ಐದು ವರ್ಷದಿಂದ ಇವರು ಮೈಸೂರು ದಸರಾದ ಆಹಾರ ಮೇಳದಲ್ಲಿ ಬಂಬೂ ಬಿರಿಯಾನಿ ತಯಾರು ಮಾಡುತ್ತಿದ್ದಾರೆ.

ಅಂದ ಹಾಗೇ, ಈ ಬಿರಿಯಾನಿಯ ವಿಶೇಷ ಏನು? ಹೇಗೆ ಮಾಡುವುದು ಎಂದು ಯೋಚಿಸುತ್ತಿದ್ದೀರಾ? ಚಿಂತೆ ಬೇಡ ಮಾಡುವ ವಿಧಾನ ಇಲ್ಲಿದೆ ನೋಡಿ.

ರುಚಿಯಾದ ಈ ಬಂಬೂ ಬಿರಿಯಾನಿಯನ್ನು ಸೋಲಿಗರ ತಂಡ ತಯಾರಿಸುವ ರೀತಿಯೇ ಭಿನ್ನವಾಗಿದೆ. ಮೊದಲಿಗೆ ಟೊಮೆಟೋ, ಈರುಳ್ಳಿ, ಚಕ್ಕೆ, ಲವಂಗ, ಮೆಣಸು, ತೆಂಗಿನಕಾಯಿ, ಹಾಗೂ ಇತರೆ ಮಸಾಲ ಪದಾರ್ಥಗಳನ್ನು ಸೇರಿಸಿ ಘುಂ ಎನ್ನುವ ಮಸಾಲೆಯನ್ನು ಸಿದ್ಧ ಮಾಡಿಟ್ಟುಕೊಳ್ಳುತ್ತಾರೆ.

ಹೆಸರು ಹೇಳುವಂತೆ ಇದಕ್ಕೆ ಬಂಬೂ ಬೇಕೆ ಬೇಕು. ಹಾಗಾಗಿ ಒಂದು ಬಂಬೂ ತೆಗೆದುಕೊಂಡು ಅದಕ್ಕೆ ರುಬ್ಬಿಕೊಂಡ ಮಸಾಲೆ, ಕತ್ತರಿಸಿಟ್ಟುಕೊಂಡ ಕೊತ್ತಂಬರಿ ಸೊಪ್ಪು, ಪಲಾವ್ ಎಲೆ, ನೆನೆಸಿದ ಅಕ್ಕಿಯನ್ನು ಈ ಬಂಬೂವಿನೊಳಗೆ ತುಂಬಿಸುತ್ತಾರೆ. ನಂತರ ಚಿಕನ್ ಅನ್ನು ಶುದ್ಧವಾಗಿ ತೊಳೆದುಕೊಂಡು ಇನ್ನೊಂದು ಬಂಬೂವಿನೊಳಗೆ ಚಿಕನ್ ಹಾಗೂ ಮಸಾಲೆಯನ್ನು ತುಂಬುತ್ತಾರೆ.

ಕೊನೆಗೆ ಈ ಎರಡೂ ಬಂಬೂವನ್ನು ಒಂದು ಗಂಟೆ ಹೊತ್ತು ಬೆಂಕಿಯಲ್ಲಿ ಸುಡುತ್ತಾರೆ. ಚೆನ್ನಾಗಿ ಬೆಂದ ನಂತರ ಇವೆರಡನ್ನು ತೆಗೆದು ಬೆಂದ ಚಿಕನ್ ಹಾಗೂ ಪಲಾವ್ ಎರಡನ್ನು ಚೆನ್ನಾಗಿ ಮಿಶ್ರಣ ಮಾಡಿ ಕೊಡುತ್ತಾರೆ. ಒಮ್ಮೆ ಇದರ ರುಚಿ ನೋಡಿದವರು ಮರುಳಾಗುವುದು ಗ್ಯಾರಂಟಿ. ಇದಕ್ಕೆ ಡಿಮ್ಯಾಂಡ್ ಕೂಡ ಅಷ್ಟೇ ಇದೆ. ಇದರ ಬೆಲೆ 160 ರೂಪಾಯಿ.


ಆಯಿಲ್ ಸ್ಕಿನ್ ನಿವಾರಣೆಗೆ ಮನೆಯಲ್ಲೆ ತಯಾರಿಸಿ ಈ ಫೇಸ್ ಪ್ಯಾಕ್

$
0
0

ಹೆಚ್ಚಿನವರ ಮುಖದ ಸ್ಕಿನ್ ಆಯಿಲಿಯಾಗಿರುತ್ತದೆ. ಇದರಿಂದ ಮುಖ ಡಲ್ ಆಗಿ ಕಾಣುತ್ತದೆ. ಅಷ್ಟೇ ಅಲ್ಲದೇ ಮುಖದಲ್ಲಿ ಎಣ್ಣೆ ಅಂಶ ಹೆಚ್ಚಾದರೆ ಮೊಡವೆಗಳು ಸಹ ಉಂಟಾಗುತ್ತದೆ. ಈ ಆಯಿಲ್ ಸ್ಕಿನ್ ನಿವಾರಣೆಯಾಗಲು ಮನೆಯಲ್ಲೇ ಸಿಗೋ ಕೆಲ ವಸ್ತುಗಳಿಂದ ತಯಾರಿಸಬಹುದಾದ ಸಿಂಪಲ್ ಫೇಸ್ ಪ್ಯಾಕ್ ಗಳನ್ನು ಬಳಸಿ.

ಕಡಲೆಹಿಟ್ಟು-ಮೊಸರು-ಕಿತ್ತಳೆ ಸಿಪ್ಪೆ:

ಕಿತ್ತಳೆ ಹಣ್ಣಿನ ಸಿಪ್ಪೆಯನ್ನು ಒಣಗಿಸಿ ಪುಡಿ ಮಾಡಿಟ್ಟುಕೊಳ್ಳಿ. ಒಂದು ಕಪ್ ಗೆ 1 ಚಮಚ ಕಡಲೆಹಿಟ್ಟು, 1 ಚಮಚ ಕಿತ್ತಲೆ ಸಿಪ್ಪೆಯ ಪುಡಿ ಹಾಕಿ ಮಿಕ್ಸ್ ಮಾಡಿಕೊಳ್ಳಿ. (ಒಣಗಿದ ಪುಡಿ ಇಲ್ಲವಾದ್ರೆ ಕಿತ್ತಲೆಹಣ್ಣಿನ ರಸ ಅಥವಾ ಹಸಿ ಕಿತ್ತಲೆ ಸಿಪ್ಪೆಯ ಪೇಸ್ಟ್ ಬಳಸಬಹುದು).

ಒಮ್ಮೆ ಮುಖವನ್ನ ತೊಳೆದು, ಶುಭ್ರವಾದ ಬಟ್ಟೆಯಿಂದ ನೀರಿನಂಶ ಇಲ್ಲದಂತೆ ಒರೆಸಿ. ನಂತರ ಮುಖ ಹಾಗೂ ಕುತ್ತಿಗೆಯ ಭಾಗಕ್ಕೆ ಫೇಸ್ ಪ್ಯಾಕ್ ಹಚ್ಚಿ 20 ನಿಮಿಷ ರಿಲ್ಯಾಕ್ಸ್ ಮಾಡಿ. ಫೇಸ್ ಪ್ಯಾಕ್ ಒಣಗಿದ ನಂತರ ತಣ್ಣೀರಿನಿಂದ ಮುಖ ತೊಳೆದು ರೋಸ್ ವಾಟರ್ ಹಚ್ಚಿಕೊಳ್ಳಿ. ಈ ರೀತಿ ವಾರಕ್ಕೆ ಎರಡು ಬಾರಿ ಮಾಡುತ್ತಾ ಬಂದಲ್ಲಿ ವ್ಯತ್ಯಾಸ ಕಾಣುತ್ತದೆ.

ನಿಂಬೆ ರಸ ಹಾಗೂ ಜೇನುತುಪ್ಪ :

ಒಂದು ಚಮಚ ಜೇನುತುಪ್ಪಕ್ಕೆ ಒಂದು ಚಮಚ ನಿಂಬೆರಸ ಬೆರೆಸಿ ಫೇಸ್ ಪ್ಯಾಕ್ ಮಾಡಿ ಹಚ್ಚಿಕೊಳ್ಳಿ. ಅರ್ಧ ಗಂಟೆಯ ಬಳಿಕ ಮುಖ ತೊಳೆದು ರೋಸ್ ವಾಟರ್ ಹಚ್ಚಿಕೊಳ್ಳಿ.

ಪುದೀನಾ :

ಪುದೀನಾವನ್ನ ಪೇಸ್ಟ್ ಮಾಡಿಕೊಂಡು ಅದಕ್ಕೆ ಸ್ವಲ್ಪ ನಿಂಬೆ ರಸ ಬೆರೆಸಿ ಮುಖಕ್ಕೆ ಹಚ್ಚಿಕೊಂಡು 15 ನಿಮಿಷದ ಬಳಿಕ ತೊಳೆಯಿರಿ. ಇದನ್ನ ನಿಯಮಿತವಾಗಿ ಬಳಸಿದ್ರೆ ಮೊಡವೆ ಕಲೆ ಕೂಡ ಕಡಿಮೆಯಾಗುತ್ತದೆ.

ಸೌತೇಕಾಯಿ :

2 ಚಮಚ ಸೌತೇಕಾಯಿ ರಸಕ್ಕೆ 1 ಚಮಚ ನಿಂಬೆರಸ ಬೆರೆಸಿ ಇದನ್ನ ಹತ್ತಿಯಲ್ಲಿ ತೆಗೆದುಕೊಂದು ಮುಖಕ್ಕೆ ಹಚ್ಚಿಕೊಳ್ಳಿ. 20 ನಿಮಿಷಗಳ ಬಳಿಕ ಮುಖ ತೊಳೆಯಿರಿ.

ಯೋನಿಯ ಆರೋಗ್ಯಕ್ಕೆ ಸಂಬಂಧಪಟ್ಟ ಈ ವಿಚಾರಗಳು ಹುಡುಗಿಯರಿಗೆ ತಿಳಿದಿರಲೇಬೇಕು

$
0
0

ಹುಡುಗಿಯರು ತಮ್ಮ ಯೋನಿ ಆರೋಗ್ಯದ ಬಗ್ಗೆ ಹೆಚ್ಚು ಕಾಳಜಿ ವಹಿಸಬೇಕು. ಆದರೆ ಕೆಲ ಹುಡುಗಿಯರಿಗೆ ಈ ಬಗ್ಗೆ ತಿಳಿದಿರುವುದಿಲ್ಲ. ಆದರೆ ಪ್ರತಿಯೊಬ್ಬ ಹುಡುಗಿಯು ತಮ್ಮ ಯೋನಿಯ ಆರೋಗ್ಯಕ್ಕೆ ಸಂಬಂಧಪಟ್ಟ ಈ ವಿಚಾರಗಳನ್ನು ತಿಳಿದಿರಲೇಬೇಕು.

ಮುಟ್ಟಿನ ವೇಳೆ ಧರಿಸುವ ಪ್ಯಾಡನ್ನು ಅಥವಾ ಬಟ್ಟೆಯನ್ನು ಆಗಾಗ ಬದಲಾಯಿಸುತ್ತಿರಬೇಕು. ಇಲ್ಲವಾದರೆ ಅದರಿಂದ ಉಂಟಾಗುವ ಕೆಟ್ಟ ವಾಸನೆಯಿಂದ ಬ್ಯಾಕ್ಟೀರಿಯಾಗಳು ಉತ್ಪತ್ತಿಯಾಗುತ್ತದೆ.

ಹತ್ತಿಯಿಂದ ತಯಾರಿಸಿದ ಒಳ ಉಡುಪುಗಳನ್ನೇ ಬಳಸಬೇಕು. ಇದರಿಂದ ಯೋನಿಯಲ್ಲಿ ಸೋಂಕು ಉಂಟಾಗುವುದಿಲ್ಲ.

ಒಳ ಉಡುಪುಗಳನ್ನು ಪ್ರತಿದಿನ ಮೃದುವಾದ ಸೋಪಿನಿಂದ ಚೆನ್ನಾಗಿ ಒಗೆಯಬೇಕು. ಇಲ್ಲವಾದರೆ ಆ ಭಾಗದಲ್ಲಿ ಅಲರ್ಜಿ ಉಂಟಾಗುತ್ತದೆ. ಹಾಗೇ ಒಳ ಉಡುಪುಗಳನ್ನು ಬಿಸಿಲಿನಲ್ಲಿ ಒಣಗಿಸಬೇಕು.

ಯೋನಿಯ ಬಳಿ ಬೆಳೆಯುವ ಕೂದಲನ್ನು ಆಗಾಗ ತೆಗೆಯುತ್ತಿರಬೇಕು. ಆದರೆ ಅದಕ್ಕಾಗಿ ರೇಜರ್, ಬ್ಲೇಡ್ ಅಥವಾ ಕತ್ತರಿ ಬಳಸಬಾರದು.

ಸಂಭೋಗದ ನಂತರ ಹೆಚ್ಚಿನ ಸೋಂಕು ತಗಲುವ ಸಾಧ್ಯತೆ ಇರುವುದರಿಂದ ಯೋನಿಯನ್ನು ಚೆನ್ನಾಗಿ ತೊಳೆದುಕೊಳ್ಳಬೇಕು.

ಇಲ್ಲಿದೆ ಜಾಹೀರಾತು ವಾಚ್ 10-10 ಟೈಮ್ ತೋರಿಸುವ ರಹಸ್ಯ

$
0
0
watch

ವಾಚ್ ಕುರಿತ ವಿಶೇಷ ಮಾಹಿತಿಯೊಂದು ಇಲ್ಲಿದೆ ನೋಡಿ. ನೀವೇನಾದರೂ ವಾಚ್ ಖರೀದಿಗೆ ಹೋದ ಸಂದರ್ಭದಲ್ಲಿ ಅಂಗಡಿಯಲ್ಲಿರುವ ವಾಚ್, ಗಡಿಯಾರಗಳನ್ನು ಗಮನಿಸಿದ್ದಿರಾ? ಜಾಹೀರಾತು ವಾಚ್, ಗಡಿಯಾರಗಳಲ್ಲಿ ಸಮಯ ಯಾವಾಗಲೂ 10 ಗಂಟೆ 10 ನಿಮಿಷ ತೋರಿಸುತ್ತದೆ ಎಂಬುದನ್ನು ನೋಡಿದ್ದೀರಾ? ಇದರ ಹಿಂದಿದೆ ಒಂದು ಸ್ವಾರಸ್ಯದ ವಿಷಯ.

ವಾಚ್ ಖರೀದಿಸಲು ಹೋದಾಗ, ಸಾಮಾನ್ಯವಾಗಿ ಬೆಲೆ, ಬ್ರಾಂಡ್ ಕಡೆಗೆ ಹೆಚ್ಚು ಗಮನ ಕೊಡುತ್ತೇವೆ. ಅದರಲ್ಲಿಯೂ ಒಂದು ಇಂಟ್ರೆಸ್ಟಿಂಗ್ ಸಂಗತಿ ಇದೆ. ಜಾಹೀರಾತುಗಳಲ್ಲಿನ ಎಲ್ಲಾ ವಾಚ್ ಸಾಮಾನ್ಯವಾಗಿ 10 ಗಂಟೆ, 10 ನಿಮಿಷ ಸಮಯವನ್ನು ತೋರಿಸುತ್ತವೆ.

ವಾಚ್ ಗಳ ಬ್ರಾಂಡ್ ಮತ್ತು ಲೋಗೋ ಮೇಲ್ಭಾಗದಲ್ಲಿರುವ ಕಾರಣ, ಗಂಟೆ, ಸಮಯದ ಮುಳ್ಳನ್ನು 12 ರ ಬಳಿಗೆ ಇಟ್ಟರೆ ಕಾಣುವುದಿಲ್ಲ ಎಂಬ ಕಾರಣದಿಂದ ಗಂಟೆ ಮುಳ್ಳನ್ನು 10 ರ ಬಳಿ, ನಿಮಿಷದ ಮುಳ್ಳನ್ನು 2 ರ ಬಳಿ ಇರುವಂತೆ ಮಾಡಲಾಗುತ್ತದೆ.

ಮೊದಲಿಗೆ 8.20 ಸಮಯ ಇರುವಂತೆ ಟೈಮ್ ಹೊಂದಿಸಲಾಗುತ್ತಿತ್ತು. ಇದು ಅಳುತ್ತಿರುವಂತೆ ಕಾಣುತ್ತದೆ. ಹಾಗಾಗಿ ಸ್ಮೈಲಿಂಗ್ ಫೇಸ್ ಇರಲಿ, ಜೊತೆಗೆ ಲೋಗೋ ಮತ್ತು ಬ್ರಾಂಡ್ ಕೂಡ ರಾರಾಜಿಸಲಿ ಎಂಬ ಕಾರಣದಿಂದ ಹೀಗೆ ಜಾಹೀರಾತು ವಾಚ್ ಗಳಲ್ಲಿ ಹೆಚ್ಚಾಗಿ ಸಮಯ 10-10 ಇರುವಂತೆ ಜೋಡಿಸಲಾಗುತ್ತದೆ ಎಂದು ಹೇಳಲಾಗಿದೆ.

ವೆರೈಟಿ ಬಿಕಿನಿಗಾಗಿ ಲಕ್ಷಾಂತರ ರೂ. ಖರ್ಚು ಮಾಡ್ತಿದ್ದಾಳೆ ಈಕೆ

$
0
0

ವಿಶ್ವದ ಅನೇಕ ಜನರಿಗೆ ವಿಚಿತ್ರ ಹವ್ಯಾಸಗಳಿರುತ್ತವೆ. ಅದಕ್ಕಾಗಿ ಅವ್ರು ಏನೂ ಮಾಡಲೂ ಸಿದ್ಧರಿರುತ್ತಾರೆ. ಎಷ್ಟು ನಿಯಂತ್ರಿಸಿಕೊಂಡ್ರೂ ಅವ್ರ ಈ ಹವ್ಯಾಸವನ್ನು ತಹಬದಿಗೆ ತರುವುದು ಕಷ್ಟ. ಇದಕ್ಕೆ 27 ವರ್ಷದ ಈ ಮಹಿಳೆ ಉತ್ತಮ ಉದಾಹರಣೆ.

ಬಿಕಿನಿ ಮೇಲೆ ಅಪಾರ ಮೋಹ ಹೊಂದಿರುವ ಯುವತಿ ಚೆಂದದ ಬಿಕಿನಿಗಾಗಿ ಲಕ್ಷಾಂತರ ರೂಪಾಯಿ ಖರ್ಚು ಮಾಡ್ತಾಳೆ. ಎಲಿ ಹ್ಯಾಟ್ಫುಲ್ ಹೆಸರಿನ ಯುವತಿ ಇದನ್ನು ಒಪ್ಪಿಕೊಂಡಿದ್ದಾಳೆ. ತಾನು ಒಳ ಉಡುಪಿನ ವ್ಯಸನಿ ಎಂದಿದ್ದಾಳೆ. ಸಿಡ್ನಿಯಲ್ಲಿ ವಾಸವಾಗಿರುವ ಎಲಿ ಬಳಿ ಸುಮಾರು 150 ಕ್ಕೂ ಹೆಚ್ಚು ಬಿಕಿನಿಗಳಿವೆ.

ಎಲಿ ಒಬ್ಬ ಬ್ಲಾಗರ್. ಆಕೆಯ ಬ್ಲಾಗ್ ಗೆ 41 ಸಾವಿರ ಫಾಲೋವರ್ಸ್ ಇದ್ದಾರೆ. ಎಲಿ ಚಿಕ್ಕವಳಿರುವಾಗಲೇ ಐಷಾರಾಮಿ ಒಳ ಉಡುಪು ಖರೀದಿ ಮಾಡುತ್ತಿದ್ದಳಂತೆ. ಮೂರು ವರ್ಷಗಳಿಂದ ಹವ್ಯಾಸ ಚಟವಾಗಿದೆ. ಮೂರು ಲಕ್ಷ 70 ಸಾವಿರ ರೂಪಾಯಿಯನ್ನು ಬಿಕಿನಿಗಾಗಿ ಖರ್ಚು ಮಾಡಿದ್ದಾಳೆ. ಬಿಕಿನಿಗಾಗಿ ಎಷ್ಟು ಹಣವನ್ನಾದ್ರೂ ಖರ್ಚು ಮಾಡ್ತಾಳಂತೆ ಎಲಿ.

ಧರಿಸಲೊಂದೇ ಅಲ್ಲ ಮಕ್ಕಳನ್ನು ಪಡೆಯಲೂ ಬೇಕು ಗೋಲ್ಡ್…!

$
0
0
gold_s_650_100616062135

ಗೋಲ್ಡ್ ಮಹಿಳೆಯರಿಗೆ ಸೀಮಿತ. ಮಹಿಳೆಯರೇ ಹೆಚ್ಚಾಗಿ ಬಂಗಾರದ ಆಭರಣಗಳನ್ನು ಧರಿಸ್ತಾರೆ. ಆದ್ರೆ ಸಂಶೋಧನೆಯೊಂದು ಗೋಲ್ಡ್ ವಿಚಾರದಲ್ಲಿ ಮಹತ್ವದ ವಿಷಯ ಹೊರಹಾಕಿದೆ. ಪುರುಷ ಇಷ್ಟಪಡಲಿ ಪಡದೇ ಇರಲಿ ಆತನ ಜೀವನದಲ್ಲಿ ಗೋಲ್ಡ್ ಮಹತ್ವದ ಸ್ಥಾನ ಪಡೆದಿದೆಯಂತೆ. ಗೋಲ್ಡ್ ಇಲ್ಲದೆ ಆತನ ಪುರುಷತ್ವ ಯಾವುದಕ್ಕೂ ಪ್ರಯೋಜನವಿಲ್ಲ ಎಂದು ಸಂಶೋಧನೆ ಹೇಳಿದೆ.

ಸುಮಾರು 20 ವರ್ಷಗಳಿಂದ ಈ ಬಗ್ಗೆ ಸಂಶೋಧನೆ ನಡೆಯುತ್ತಿತ್ತು. ಈಗ ವಿಜ್ಞಾನಿಗಳು ಇದಕ್ಕೊಂದು ಅರ್ಧ ಹುಡುಕಿದ್ದಾರೆ. ವಿಜ್ಞಾನಿಗಳ ಪ್ರಕಾರ ವೀರ್ಯಾಣುವಿನಲ್ಲಿ ಗೋಲ್ಡ್ ಅಂಶ ಕಡಿಮೆಯಾದ್ರೆ ಪುರುಷರು ತಂದೆಯಾಗಲು ಸಾಧ್ಯವಿಲ್ಲ. ಗೋಲ್ಡ್ ಅಂಶ ಕಡಿಮೆ ಇರುವುದು ಅಥವಾ ಇಲ್ಲದೆ ಇದ್ದರೆ ಪುರುಷ ನಪುಂಸಕನಾಗ್ತಾನೆಂದು ಸಂಶೋಧನೆಯಲ್ಲಿ ಹೇಳಲಾಗಿದೆ.

ಸಾಮಾನ್ಯವಾಗಿ ವೀರ್ಯದಲ್ಲಿ 17.66 ಮೈಕ್ರೋ ಗ್ರಾಂನಷ್ಟು ಗೋಲ್ಡ್ ಅಂಶವಿರುತ್ತದೆ. ಇದು ಕಡಿಮೆಯಾದ್ರೆ ಪುರುಷ ಬಹಳ ಸಮಯ ಶಾರೀರಿಕ ಸಂಬಂಧ ಬೆಳೆಸಲು ಸಾಧ್ಯವಿಲ್ಲ ಎಂದು ಸಂಶೋಧನಾ ತಂಡ ಹೇಳಿದೆ.

ನಿಮಗೆ ಉಗುರು ಕಚ್ಚುವ ಅಭ್ಯಾಸವಿದೆಯಾ…? ಹಾಗಾದ್ರೆ ನೀವಿದನ್ನು ಓದಲೇಬೇಕು

$
0
0

ಕೆಲವರಿಗೆ ಉಗುರು ಕಚ್ಚುವ ಅಭ್ಯಾಸವಿರುತ್ತದೆ. ಇದಕ್ಕೆ ಸಾಮಾನ್ಯವಾಗಿ ಮಾನಸಿಕ ಒತ್ತಡವೆ ಕಾರಣ ಎಂದು ಎಲ್ಲರು ಹೇಳುತ್ತಾರೆ. ಆದರೆ ಈ ಅಭ್ಯಾಸದ ಬಗ್ಗೆ ಆಘಾತಕಾರಿ ವಿಷಯವೊಂದು ಸಂಶೋಧನೆಯಿಂದ ಹೊರ ಬಂದಿವೆ.

ಸಂಶೋಧನೆಯ ಪ್ರಕಾರ ಮೂವರಲ್ಲಿ ಒಬ್ಬರು ಉಗುರು ಕಚ್ಚುವರು ಇದ್ದಾರಂತೆ. ಉಗುರು ಕಚ್ಚುವವರಿಗೆ ತಾವು ಎಲ್ಲದರಲ್ಲಿ ಪರ್ಫೆಕ್ಟ್ ಇರಬೇಕು ಎಂಬ ಹುಚ್ಚು ಇರುತ್ತೆ ಅಂತೆ. ಆ ಕಾರಣಕ್ಕೆ ಉಗುರು ಕಡಿಯೋದನ್ನು ರೂಢಿ ಮಾಡಿಕೊಳ್ಳುತ್ತಾರಂತೆ. ಪ್ರತಿದಿನವೂ ಉಗುರು ಕಚ್ಚುವವರಿಗೆ ಈ ಅಭ್ಯಾಸ ಮಾತ್ರವಲ್ಲದೆ ಮೈಪರಚಿಕೊಳ್ಳುವುದು, ಕೂದಲು ಎಳೆದುಕೊಳ್ಳುವುದು ಹೀಗೆ ಕೆಲಸಕ್ಕೆ ಬಾರದ ವರ್ತನೆಯನ್ನು ಮಾಡುತ್ತಾರಂತೆ. ಸಂಶೋಧನೆ ಪ್ರಕಾರ ಉಗುರು ಕಚ್ಚುವುದು ಆರೋಗ್ಯಕ್ಕೆ ಕೂಡ ಮಾರಕವಾಗಿದೆಯಂತೆ.

ಈ ಚಾಳಿ ಹೆಚ್ಚಾದರೆ ಒಬಿಸಿವ್ ಕಂಪಲ್ಸಿವ್ ಡಿಸೈರ್ ಎಂಬ ಮಾನಸಿಕ ಖಾಯಿಲೆ ಬರುವ ಸಾಧ್ಯತೆಯಿದೆಯಂತೆ.

ಸತತ ಉಗುರು ಕಡಿಯೋದ್ರಿಂದ ಉಗುರು ಮತ್ತು ಬೆರಳಿನ ಸುತ್ತ ಕಪ್ಪಾಗಿ ಹುಣ್ಣಾಗುತ್ತೆ. ಈ ಹುಣ್ಣಿನಿಂದ ಇನ್ಫೆಕ್ಷನ್ ಆಗಿ ಕೈಯಲ್ಲಿರುವ ವೈರಸ್ ಬಾಯಿಯ ಮೂಲಕ ಹೊಟ್ಟೆಯಲ್ಲಿ ಹೋಗಿ ಬೇರೆಯದೇ ರೋಗಗಳು ಬರಬಹುದು.

ಉಗುರು ಕಚ್ಚುವುದರಿಂದ ಹಲ್ಲಿನ ಎನಾಮೆಲ್ ಕೂಡ ಹಾಳಾಗುತ್ತೆ, ಇದರಿಂದ ಉಗುರಿನ ಆಕೃತಿ ಕೂಡ ಹಾಳಾಗುತ್ತೆ.

ಅಷ್ಟೇ ಅಲ್ಲದೆ ಉಗುರು ಕಚ್ಚುವರನ್ನು ಕಂಡರೆ ಯಾರಿಗೂ ಒಳ್ಳೆಯ ಅಭಿಪ್ರಾಯ ಬರಲು ಸಾಧ್ಯವಿರುವುದಿಲ್ಲ.

ಮದುವೆ ದಿನ ಸುಂದರವಾಗಿ ಕಾಣಬೇಕಾ? ಹಾಗಾದ್ರೆ ಈ ತಪ್ಪುಗಳನ್ನು ಎಂದೂ ಮಾಡಬೇಡಿ

$
0
0

ಮದುವೆ ಎಂಬುದು ಜೀವನದಲ್ಲಿ ಒಮ್ಮೆ ಮಾತ್ರ ಆಗುವಂತದು. ಮದುವೆ ದಿನದಂದು ಸುಂದರವಾಗಿ ಕಾಣಬೇಕೆಂಬ ಆಸೆ ಎಲ್ಲಾ ಹುಡುಗಿಯರಿಗೂ ಇದ್ದೇ ಇರುತ್ತದೆ. ಅಂತವರು ಮುಖದ ಅಂದ ಕೆಡಿಸುವಂತಹ ಈ ತಪ್ಪುಗಳನ್ನು ಮಾಡಬೇಡಿ.

ಮದುವೆ ದಿನ ಹತ್ತಿರ ಬರುತ್ತಿರುವಾಗ ವಧು ತಿನ್ನುವ ಆಹಾರದ ಬಗ್ಗೆ ಹೆಚ್ಚು ಕಾಳಜಿ ವಹಿಸಬೇಕು. ಇಲ್ಲವಾದರೆ ಇದು ಮುಖದ ಚರ್ಮದ ಮೇಲೆ ಪ್ರಭಾವ ಬೀರುತ್ತದೆ. ದೇಹದ ಪಿಎಚ್ ಪ್ರಮಾಣ ಕಡಿಮೆ ಮಾಡುವಂತಹ ಆಹಾರಗಳನ್ನು ಸೇವಿಸಬಾರದು.

ಉದಾಹರಣೆಗೆ ಕಾರ್ಬೊನೇಟೆಡ್ ಪಾನೀಯಗಳು, ಆಲ್ಕೋಹಾಲ್, ಸಕ್ಕರೆ, ಮತ್ತು ಮೊಟ್ಟೆಯ ಹಳದಿ ಭಾಗಗಳನ್ನು ಸೇವಿಸಬಾರದು. ಇದರಿಂದ ಮೊಡವೆಗಳು, ಚರ್ಮದ ಉರಿ, ಮುಂತಾದ ಸಮಸ್ಯೆಗಳು ಉಂಟಾಗುತ್ತದೆ. ಅದರ ಬದಲು ಪಿಎಚ್ ಪ್ರಮಾಣ ಸಮತೋಲನದಲ್ಲಿಡುವಂತಹ ಹಸಿರು ತರಕಾರಿಗಳು, ಅರಿಶಿನ, ಚಿಯಾ ಬೀಜಗಳು ಮತ್ತು ನಿಂಬೆಹಣ್ಣುಗಳನ್ನು ಸೇವಿಸಬೇಕು.

ಹಾಗೇ ಮುಖ ತೊಳೆಯುವ ಸೋಪ್ ಬಗ್ಗೆಯೂ ಕಾಳಜಿ ಇರಬೇಕು. ತುಂಬಾ ಹಾರ್ಡ್ ಆಗಿರುವ ಸೋಪ್ ಗಳನ್ನು ಬಳಸಬಾರದು. ಇದು ಮುಖದ ತೇವಾಂಶವನ್ನು ಕಡಿಮೆ ಮಾಡುತ್ತದೆ. ಮೃದುವಾದ ಸೋಪ್ ಅಥವಾ ಫೇಸ್ ವಾಶ್ ಗಳನ್ನು ಬಳಸಿ.

ಬ್ಯೂಟಿ ಪಾರ್ಲರ್ ಗೆ ಹೋಗಿ ಕೆಮಿಕಲ್ ಯುಕ್ತ ಫೇಶಿಯಲ್ ಗಳನ್ನು ಮಾಡಿಸಬೇಡಿ. ಇದು ಕೆಲವೊಮ್ಮೆ ಮುಖದ ಮೇಲೆ ಕೆಟ್ಟ ಪರಿಣಾಮ ಬೀರಬಹುದು. ಆದ್ದರಿಂದ ಮನೆಯಲ್ಲೇ ತಯಾರಿಸುವಂತಹ ಫೇಸ್ ಪ್ಯಾಕ್ ಗಳನ್ನು ಬಳಸಿ. ಇದು ಮುಖಕ್ಕೆ ತುಂಬಾ ಒಳ್ಳೆಯದು.

ಬಿಸಿಲಿನಲ್ಲಿ ಹೆಚ್ಚು ಸಮಯ ಕಳೆಯಬೇಡಿ. ಇದರಿಂದ ಮುಖದ ಚರ್ಮ ಕಳೆಗುಂದುತ್ತದೆ. ಹೊರಗಡೆ ಹೋಗುವಾಗ ಸನ್ ಸ್ಕ್ರೀನ್ ಧರಿಸುವುದು ಉತ್ತಮ.

ಸ್ನಾನ ಮಾಡಿದ ನಂತರ ಸೋಪ್ ನಿಂದಾಗಿ ಸ್ಕಿನ್ ತೇವಾಂಶವನ್ನು ಕಳೆದುಕೊಳ್ಳುತ್ತದೆ. ಆದ್ದರಿಂದ ಸ್ನಾನ ಮಾಡಿದ ತಕ್ಷಣ ಮಾಯಶ್ಚರೈಸಿಂಗ್ ಕ್ರೀಂಗಳನ್ನು ಬಳಸಿ ಇದು ನಿಮ್ಮ ಚರ್ಮದ ತೇವಾಂಶವನ್ನು ಕಾಪಾಡಿಕೊಳ್ಳಲು ಸಹಾಯ ಮಾಡುತ್ತದೆ.


ಹಾಲಿನ ಜೊತೆ ಈ ಆಹಾರದ ಸೇವನೆ ಬೇಡ

$
0
0
milk_1475474429

ಹಾಲಿನಲ್ಲಿ ಸಾಕಷ್ಟು ಪೌಷ್ಠಿಕಾಂಶವಿದೆ ಎಂಬುದು ಎಲ್ಲರಿಗೂ ತಿಳಿದಿರುವ ವಿಚಾರ. ಉತ್ತಮ ಆರೋಗ್ಯಕ್ಕೆ ಹಾಲು ಬಹಳ ಒಳ್ಳೆಯದು. ಹಾಲಿನ ಜೊತೆ ಹಣ್ಣು ಹಾಗೂ ಬೇರೆ ಆಹಾರ ಸೇವನೆ ಮಾಡುವ ಹವ್ಯಾಸ ಅನೇಕರಿಗಿರುತ್ತದೆ. ಕೆಲವೊಂದು ಪದಾರ್ಥಗಳನ್ನು ಹಾಲಿನ ಜೊತೆ ಎಂದೂ ಸೇವನೆ ಮಾಡಬಾರದು. ಹೀಗೆ ಮಾಡಿದಲ್ಲಿ ಆರೋಗ್ಯ ವೃದ್ಧಿಯಾಗುವ ಬದಲು ಆರೋಗ್ಯ ಹಾಳಾಗುತ್ತದೆ.

ಹಾಲಿನ ಜೊತೆ ಮೊಸರು ಸೇವನೆ ಮಾಡುವ ಅಭ್ಯಾಸ ಅನೇಕರಿಗಿರುತ್ತದೆ. ಅನ್ನಕ್ಕೆ ಹಾಲು, ಮೊಸರು ಸೇರಿಸಿ ಊಟ ಮಾಡ್ತಾರೆ. ಆದ್ರೆ ಇದು ಒಳ್ಳೆಯದಲ್ಲ. ಇವೆರಡನ್ನೂ ಒಟ್ಟಿಗೆ ಸೇವನೆ ಮಾಡುವುದರಿಂದ ಗ್ಯಾಸ್, ಎಸಿಡಿಟಿ ಹಾಗೂ ವಾಂತಿ ಕಾಣಿಸಿಕೊಳ್ಳುತ್ತದೆ. ಮೊಸರು ತಿಂದ ಒಂದೂವರೆ ಎರಡು ಗಂಟೆ ನಂತ್ರ ಹಾಲು ಕುಡಿಯಬೇಕು.

ಉದ್ದಿನ ಬೇಳೆಯ ಜೊತೆ ಎಂದೂ ಹಾಲನ್ನು ಸೇವನೆ ಮಾಡಬಾರದು.

ಹಾಲು ಕುಡಿಯುವ ಮೊದಲು ನಂತ್ರ ಅಥವಾ ಹಾಲಿನ ಜೊತೆ ಎಂದೂ ಹಣ್ಣನ್ನು ತಿನ್ನಬಾರದು. ಹಾಲಿನ ಜೊತೆ ಅನಾನಸ್, ಕಿತ್ತಳೆ ಹಣ್ಣಿನಂತಹ ಸಿಟ್ರಸ್ ಅಂಶವಿರುವ ಹಣ್ಣು ತಿಂದರೆ ಅಪಾಯ ನಿಶ್ಚಿತ. ಹೀಗೆ ಮಾಡಿದಲ್ಲಿ ಆಹಾರ ಸರಿಯಾಗಿ ಜೀರ್ಣವಾಗುವುದಿಲ್ಲ.

ಹಾಲು ಹಾಗೂ ಬಾಳೆಹಣ್ಣನ್ನು ಒಟ್ಟಿಗೆ ಸೇವನೆ ಮಾಡಬಾರದು. ಎರಡೂ ಕಫವನ್ನು ಉತ್ಪತ್ತಿ ಮಾಡುತ್ತವೆ. ಇದರಿಂದ ಕಫ ಜಾಸ್ತಿಯಾಗುವ ಜೊತೆಗೆ ಜೀರ್ಣಕ್ರಿಯೆ ಸರಿಯಾಗಿ ಆಗುವುದಿಲ್ಲ.

ಕೆಲವರು ಬೆಳಿಗ್ಗೆ ಹಾಲಿನ ಜೊತೆ ಬ್ರೆಡ್ ಹಾಗೂ ಬೆಣ್ಣೆ ತಿನ್ನುತ್ತಾರೆ. ಆದ್ರೆ ಇದ್ರ ಅವಶ್ಯಕತೆ ಇಲ್ಲ. ಹಾಲು ಸಂಪೂರ್ಣ ಆಹಾರ. ಹಾಲಿನ ಜೊತೆ ಬ್ರೆಡ್, ಬೆಣ್ಣೆ ಸೇವನೆ ಮಾಡುವುದರಿಂದ ಹೊಟ್ಟೆ ತುಂಬಿದಂತಾಗಿ ತೊಂದರೆಯಾಗುತ್ತದೆ.

ಹಾಲಿನ ಜೊತೆ ಮೀನನ್ನು ಸೇವನೆ ಮಾಡಬೇಡಿ. ಇದರಿಂದ ಗ್ಯಾಸ್, ಅಲರ್ಜಿ ಹಾಗೂ ಚರ್ಮ ಸಂಬಂಧಿ ಖಾಯಿಲೆಗಳು ಕಾಣಿಸಿಕೊಳ್ಳುತ್ತವೆ.

ಹಾಲಿನ ಜೊತೆ ಉಪ್ಪಿನಕಾಯಿ, ಕರಿದ ಪದಾರ್ಥಗಳನ್ನೂ ತಿನ್ನಬೇಡಿ. ಹಾಲು ಹಾಗೂ ಎಳ್ಳನ್ನು ಒಟ್ಟಿಗೆ ತಿನ್ನುವುದು ಒಳ್ಳೆಯದಲ್ಲ.

ನವರಾತ್ರಿ ಸ್ಪೆಷಲ್: ಸೌತೆಕಾಯಿ ಪಾಯಸ

$
0
0
cucumber-kheer-pakwangali_520_061016030743

ಸೌತೆಕಾಯಿಯಿಂದ ಸಾಂಬಾರ್, ದೋಸಾ, ಸಲಾಡ್ ಮಾಡಿ ತಿಂದಿರ್ತೀರಾ. ಸೌತೆಕಾಯಿಯಿಂದ ಪಾಯಸ ಕೂಡ ಮಾಡಬಹುದು.

ಸೌತೆಕಾಯಿ ಪಾಯಸ ಮಾಡಲು ಬೇಕಾಗುವ ಪದಾರ್ಥ:

2 ಬಲಿತ ಸೌತೆಕಾಯಿ

½ ಕಪ್ ಬೆಲ್ಲ

¼ ಲೋಟ ಸಕ್ಕರೆ

½ ಬಟ್ಟಲು ತೆಂಗಿನ ತುರಿ

1 ಕಪ್ ಹಾಲು

1 ಚಮಚ ನೆನೆಸಿಟ್ಟ ಅಕ್ಕಿ

1 ಚಮಚ ಗಸಗಸೆ

4-5 ಏಲಕ್ಕಿ, ಲವಂಗ

ಸ್ವಲ್ಪ ದ್ರಾಕ್ಷಿ, ಗೋಡಂಬಿ

ಸೌತೆಕಾಯಿ ಪಾಯಸ ಮಾಡುವ ವಿಧಾನ :

ಸೌತೆಕಾಯಿಯ ತಿರುಳು, ಬೀಜ ತೆಗೆದು ಸಣ್ಣ ಹೋಳುಗಳನ್ನಾಗಿ ಮಾಡಿ ನೀರಿನಲ್ಲಿ ಬೇಯಿಸಿಕೊಳ್ಳಿ. ತೆಂಗಿನ ತುರಿ, ಅಕ್ಕಿ, ಗಸಗಸೆ, ಏಲಕ್ಕಿ, ಲವಂಗ ಎಲ್ಲವನ್ನೂ ನುಣ್ಣಗೆ ಮಿಕ್ಸ್ ಮಾಡಿಕೊಂಡು ಅದನ್ನು ಬೆಂದ ಸೌತೆಕಾಯಿಗೆ ಸೇರಿಸಿ. ಬೆಲ್ಲ ಹಾಕಿ ಚೆನ್ನಾಗಿ ಕುದ್ದ ಮೇಲೆ ಕೆಳಗಿಳಿಸಿ ಹಾಲು, ತುಪ್ಪದಲ್ಲಿ ಕರಿದ ದ್ರಾಕ್ಷಿ, ಗೋಡಂಬಿಯನ್ನು ಸೇರಿಸಿ.

ಕ್ಯಾರೆಟ್ ಡ್ರೈ ಫ್ರೂಟ್ಸ್ ಲಾಡು

$
0
0
download

ನವರಾತ್ರಿ ಶುರುವಾಗಿದೆ. 9 ದಿನಗಳ ಕಾಲ ದೇವಿಯ ಆರಾಧನೆ ನಡೆಯಲಿದೆ. ಒಂದೊಂದು ದಿನ ಒಂದೊಂದು ಸಿಹಿ ಮಾಡಿ ದೇವಿಗೆ ನೈವೇದ್ಯ ಮಾಡುವ ಸಂಪ್ರದಾಯ ನಮ್ಮಲ್ಲಿದೆ. ನವರಾತ್ರಿಯಂದು ಕ್ಯಾರೆಟ್ ಡ್ರೈಫ್ರೂಟ್ಸ್ ಲಾಡು ಮಾಡಬಹುದು. ಮಾಡೋದು ಬಹಳ ಸುಲಭ.

ಕ್ಯಾರೆಟ್ ಡ್ರೈಫ್ರೂಟ್ಸ್ ಮಾಡಲು ಬೇಕಾಗುವ ಪದಾರ್ಥ:

2 ಕಪ್ ತುರಿದ ಕ್ಯಾರೆಟ್

¼ ಲೀಟರ್ ಹಾಲು

2 ಕಪ್ ಸಕ್ಕರೆ ಪುಡಿ

1 ಕಪ್ ಮಿಲ್ಕ್ ಮೇಡ್

1 ಕಪ್ ಕಾಯಿತುರಿ

1 ಚಮಚ ತುಪ್ಪದಲ್ಲಿ ಹುರಿದ ಮೈದಾಹಿಟ್ಟು

¼ ಕಪ್ ತುಪ್ಪ

1 ಚಮಚ ಏಲಕ್ಕಿ

½ ಕಪ್ ಹುಡಿ ಮಾಡಿದ ಗೋಡಂಬಿ, ಬಾದಾಮಿ, ಒಣದ್ರಾಕ್ಷಿ

½ ಕಪ್ ಒಣಕೊಬ್ಬರಿ

ಕ್ಯಾರೆಟ್ ಡ್ರೈಫ್ರೂಟ್ಸ್ ಮಾಡುವ ವಿಧಾನ:

ಬಾಣೆಲೆಗೆ ತುಪ್ಪ ಹಾಕಿ, ಬಾದಾಮಿ, ಗೋಡಂಬಿ, ಒಣದ್ರಾಕ್ಷಿ ಹಾಕಿ ಹುರಿದುಕೊಳ್ಳಿ.

ನಂತ್ರ ಡ್ರೈಫ್ರೂಟ್ಸ್ ತೆಗೆದು, ಅದೇ ತುಪ್ಪದಲ್ಲಿ ಕ್ಯಾರೆಟ್ ಹುರಿಯಿರಿ. ನಂತ್ರ ಸಕ್ಕರೆ, ಹಾಲು, ಕಾಯಿತುರಿ ಸೇರಿಸಿ.

ಹಾಲು ಇಂಗುತ್ತಿದ್ದ ಹಾಗೆ ಮೈದಾಹಿಟ್ಟು ಹಾಕಿ ತಿರುವಿ. ನಂತ್ರ ಮಿಲ್ಕ್ ಮೇಡ್ ಸೇರಿಸಿ. ತಳ ಹಿಡಿಯದಂತೆ ಕೈ ಆಡಿಸುತ್ತಿರಿ.

ಏಲಕ್ಕಿ ಪುಡಿ, ಡ್ರೈಫ್ರೂಟ್ಸ್, ಉಳಿದ ತುಪ್ಪ ಹಾಕಿ ಗಟ್ಟಿಯಾಗುವವರೆಗೂ ಕೈ ಆಡಿಸಿ.

ಲಾಡಿನ ಹದಕ್ಕೆ ಬಂದ ನಂತ್ರ ಕೆಳಗಿಳಿಸಿ. ತಣ್ಣಗಾದ ನಂತ್ರ ಉಂಡೆ ಕಟ್ಟಿ, ನೈವೇದ್ಯ ಮಾಡಿ.

ಶರೀರದ ಕೆಲ ಭಾಗಗಳನ್ನು ಬರಿಗೈನಲ್ಲಿ ಮುಟ್ಟಬೇಡಿ

$
0
0
hand

ನಮ್ಮ ಆರೋಗ್ಯ ನಮ್ಮ ಕೈಯಲ್ಲಿದೆ. ನಮ್ಮ ದೇಹವನ್ನು ನಾವು ದೇವಸ್ಥಾನದಂತೆ ಕಾಪಾಡಿಕೊಳ್ಳಬೇಕು. ಎಷ್ಟೇ ಸ್ವಚ್ಛವಾಗಿ ನೀವು ಕೈತೊಳೆದರೂ ನಿಮ್ಮ ಕೈ ಶುದ್ಧವಾಗಿರುವುದಿಲ್ಲ. ಬಹು ಬೇಗ ಸೋಂಕು ನಿಮ್ಮ ಕೈಗಳಿಗೆ ಅಂಟಿಕೊಳ್ಳುತ್ತವೆ.

ಸೋಂಕುಗಳು ಕೈನಲ್ಲಿರುವುದರಿಂದ ನಿಮ್ಮ ದೇಹವನ್ನು ಬರಿಗೈನಲ್ಲಿ ಮುಟ್ಟಿದರೆ ರೋಗ ಬರುವುದು ನಿಶ್ಚಿತ. ಅಮೆರಿಕಾದಲ್ಲಿ ನಡೆದ ಅಧ್ಯಯನವೊಂದರ ಪ್ರಕಾರ ಕೆಲವು ಅಂಗಗಳನ್ನು ನಾವು ಬರಿಗೈನಲ್ಲಿ ಮುಟ್ಟಬಾರದು.

ಕಿವಿ: ಕಿವಿಯೊಳಗೆ ಕೈಬೆರಳು ಇಲ್ಲ ಕಡ್ಡಿಯನ್ನು ಹಾಕುವುದು ಕೆಲವರಿಗೆ ಅಭ್ಯಾಸ. ಇದರಿಂದ ಹಿತವೆನಿಸುತ್ತದೆ ಕೂಡ. ಆದರೆ ಕಿವಿಯೊಳಗಿನ ಸೂಕ್ಷ್ಮ ಪದರ ಹರಿದು ಹೋಗುವ ಸಾಧ್ಯತೆ ಜಾಸ್ತಿ ಇರುತ್ತದೆ. ಕೈಗೆ ಅಂಟಿರುವ ಸೋಂಕು ಕಿವಿಯೊಳಗೆ ಸೇರಿ ಇನ್ನೊಂದು ಸಮಸ್ಯೆ ಕಾಣಿಸಿಕೊಳ್ಳಬಹುದು. ಹಾಗಾಗಿ ಕಿವಿಯೊಳಗೆ ತುರಿಕೆಯಾಗ್ತಾ ಇದ್ದರೆ ವೈದ್ಯರನ್ನು ಭೇಟಿ ಮಾಡುವುದು ಉತ್ತಮ.

ಮುಖ: ಮುಖಕ್ಕೆ ಕೈ ತಾಗಿಸುವುದು ಒಳ್ಳೆಯದಲ್ಲ. ಮುಖವನ್ನು ನೀರಿನಿಂದ ತೊಳೆಯಿರಿ. ಆದ್ರೆ ಕೈಗಳಿಂದ ಆಗಾಗ ಮುಟ್ಟುತ್ತಿರಬೇಡಿ. ಕೈಗೆ ಅಂಟಿಕೊಂಡಿರುವ ಸೂಕ್ಷ್ಮಾಣು ಜೀವಿಗಳು ನಿಮ್ಮ ಮುಖಕ್ಕೆ ಕಪ್ಪು ಚುಕ್ಕೆಯಾಗುತ್ತವೆ. ಮುಖದಲ್ಲಿ ಮೊಡವೆ ಸೇರಿದಂತೆ ನಿಮ್ಮ ಮುಖದ ಅಂದ ಕೆಡಲು ಇದೇ ಕಾರಣವಾಗುತ್ತದೆ.

ಕಣ್ಣು: ಕಣ್ಣು ಅತಿ ಸೂಕ್ಷ್ಮ ಅಂಗಗಳಲ್ಲಿ ಒಂದು. ಯಾವುದೇ ಕಾರಣಕ್ಕೂ ಕೈಗಳಿಂದ ಕಣ್ಣುಗಳನ್ನು ಮುಟ್ಟುವುದು, ತಿಕ್ಕಿಕೊಳ್ಳುವುದು ಮಾಡಬಾರದು. ಹಾಗೆ ಮಾಡುತ್ತಿದ್ದರೆ ಕಣ್ಣಿಗೆ ಗ್ಲಾಸ್ ಬರುವುದು ಗ್ಯಾರಂಟಿ.

ಬಾಯಿ: ಇಂಗ್ಲೆಂಡ್ ನಲ್ಲಿ ನಡೆದ ಸಂಶೋಧನೆಯೊಂದರ ಪ್ರಕಾರ ಕೆಲಸದ ಒತ್ತಡದಲ್ಲಿರುವ ಜನರು ದಿನದಲ್ಲಿ ಸರಾಸರಿ 23.6 ಬಾರಿ ಬಾಯಿಗೆ ಬೆರಳು ಹಾಕ್ತಾರಂತೆ. ಹೀಗೆ ಹಾಕುವುದರಿಂದ ನಾವೇ ರೋಗವನ್ನು ಆಹ್ವಾನಿಸಿದಂತೆ ಎನ್ನುತ್ತದೆ ಅಧ್ಯಯನ.

ಮೂಗು: ಮೂಗಿಗೆ ಬೆರಳು ಹಾಕುವ ಕೆಟ್ಟ ಅಭ್ಯಾಸವಿರುವ ಶೇಕಡಾ 51 ರಷ್ಟು ಮಂದಿಗೆ ಸ್ಟ್ಯಾಫಿಲೋಕೊಕಸ್ ಬ್ಯಾಕ್ಟೀರಿಯಾ ಸೋಂಕು ತಗುಲುವ ಅಪಾಯವಿದೆ.

ನವರಾತ್ರಿ ಉಪವಾಸದಲ್ಲಿ ನಿಮ್ಮ ಆಹಾರ ಹೀಗಿರಲಿ

$
0
0

ದೇಶದೆಲ್ಲೆಡೆ ನವರಾತ್ರಿ ವೈಭವ ಮನೆ ಮಾಡಿದೆ. ನವರಾತ್ರಿ ಹಿನ್ನೆಲೆಯಲ್ಲಿ ತಾಯಿ ದುರ್ಗೆಯ ಭಕ್ತರು ಸತತ 9 ದಿನಗಳ ಕಾಲ ಉಪವಾಸ ಮಾಡ್ತಾರೆ. ಕೆಲವರು ತೂಕವನ್ನು ಇಳಿಸಿಕೊಳ್ಳುವ ಉದ್ದೇಶದಿಂದಲೂ ಉಪವಾಸ ವೃತ ಮಾಡ್ತಾರೆ. ಕೆಲವರಿಗೆ ಉಪವಾಸ ಇರೋದ್ರಿಂದ ವಾಂತಿ, ತಲೆಸುತ್ತು ಕಾಣಿಸಿಕೊಳ್ಳುತ್ತದೆ. ಈ ವೇಳೆ ನಾವು ತಿನ್ನುವ ಆಹಾರ ಕೂಡ ನಮ್ಮ ಆರೋಗ್ಯದ ಮೇಲೆ ಪ್ರಭಾವ ಬೀರುತ್ತದೆ. ನವರಾತ್ರಿ ಸಂದರ್ಭದಲ್ಲಿ ಕೆಲವೊಂದು ಆಹಾರಗಳನ್ನು ಅಪ್ಪಿ-ತಪ್ಪಿಯೂ ಸೇವಿಸಬಾರದು.

ಸಕ್ಕರೆ : ಈ ಒಂಭತ್ತು ದಿನಗಳ ಕಾಲ ಸಕ್ಕರೆಯನ್ನು ಅಪ್ಪಿತಪ್ಪಿಯೂ ಸೇವನೆ ಮಾಡಬೇಡಿ. ಇದ್ರಿಂದ ನಿಮ್ಮ ತೂಕ ಕಡಿಮೆಯಾಗುತ್ತೆ. ಜೊತೆಗೆ ಆರೋಗ್ಯವನ್ನು ಕಾಪಾಡಿಕೊಳ್ಳಬಹುದು.

ಆಲೂಗಡ್ಡೆ : ನವರಾತ್ರಿ ಸಂದರ್ಭದಲ್ಲಿ ಆಲೂಗಡ್ಡೆಗೆ ಗುಡ್ ಬೈ ಹೇಳಿ. ಟೀ ಜೊತೆ ಆಲೂ ಪಕೋಡಾ ತಿನ್ನುತ್ತಿದ್ದರೆ ನಿಮ್ಮ ತೂಕ ಕಡಿಮೆಯಾಗುವ ಬದಲು ಹೆಚ್ಚಾಗುತ್ತದೆ. ಆಲೂಗಡ್ಡೆ ಬದಲು ನೀವು ಬಾಳೆಹಣ್ಣು ತಿನ್ನಿ.

ರಾಜ್ಗಿರಿ : ನವರಾತ್ರಿಯಲ್ಲಿ ಮೈದಾ, ಗೋಧಿ ಹಿಟ್ಟಿನ ಬದಲು ರಾಜ್ಗಿರಾ ಹಿಟ್ಟನ್ನು ಉಪಯೋಗಿಸಿ. ಇದ್ರಲ್ಲಿ ಕಡಿಮೆ ಕ್ಯಾಲೋರಿ ಇರುವ ಜೊತೆಗೆ ಹೆಚ್ಚು ನ್ಯೂಟ್ರಿಶಿಯನ್ ಅಂಶ ಹೊಂದಿರುತ್ತದೆ.

ಕರಿದ ತಿಂಡಿ : ನವರಾತ್ರಿ ಉಪವಾಸದಲ್ಲಿ ಕರಿದ ತಿಂಡಿಗಳಿಂದ ದೂರವಿರಿ. ಬಜ್ಜಿ, ವಡಾ ಸೇರಿದಂತೆ ಕರಿದ ತಿಂಡಿಗಳ ಸಹವಾಸ ಬೇಡ.

ನೀರು : ನೀರು ಆರೋಗ್ಯಕ್ಕೆ ಬಹಳ ಒಳ್ಳೆಯದು. ಉಪವಾಸವಿರುವ ಕಾರಣ ಈ ದಿನಗಳಲ್ಲಿ ನೀವು ದಿನನಿತ್ಯಕ್ಕಿಂತ ಹೆಚ್ಚು ನೀರನ್ನು ಕುಡಿಯಬೇಕು.

ಸುಲಭವಾಗಿ ಮಾಡಿ ತೆಂಗಿನಕಾಯಿ ಪಾಯಸ

$
0
0
download

ತೆಂಗಿನಕಾಯಿ ತುರಿ ಪಾಯಸ ಮಾಡೋದು ತುಂಬಾ ಸುಲಭ. ಹಾಗೆ ತುಂಬಾ ಸರಳ ಕೂಡ. ದಿಢೀರ್ ಅಂತಾ ಅತಿಥಿಗಳು ಬಂದ್ರೆ ರುಚಿರುಚಿ ತೆಂಗಿನಕಾಯಿ ಪಾಯಸ ಮಾಡಿ ಬಡಿಸಿ.

ತೆಂಗಿನಕಾಯಿ ಪಾಯಸ ಮಾಡಲು ಬೇಕಾಗುವ ಪದಾರ್ಥ:

1 ಲೀಟರ್ ಹಾಲು

1 ಕಪ್ ತೆಂಗಿನ ತುರಿ

½ ಕಪ್ ಸಕ್ಕರೆ

ಸ್ವಲ್ಪ ಏಲಕ್ಕಿ ಪುಡಿ

ಸ್ವಲ್ಪ ಡ್ರೈಫ್ರುಟ್ಸ್

ತೆಂಗಿನಕಾಯಿ ಪಾಯಸ ಮಾಡುವ ವಿಧಾನ :

ಮೊದಲು ಪಾತ್ರೆಗೆ ಹಾಲು ಹಾಕಿ ಕುದಿಸಿಕೊಳ್ಳಿ. ಅದಕ್ಕೆ ತೆಂಗಿನಕಾಯಿ ತುರಿ ಹಾಕಿ ಸರಿಯಾಗಿ ಬೇಯಿಸಿಕೊಳ್ಳಿ. ನಂತ್ರ ಡ್ರೈಫ್ರುಟ್ಸ್, ಏಲಕ್ಕಿ ಪುಡಿ, ಸಕ್ಕರೆ ಹಾಕಿ ಸರಿಯಾಗಿ ಮಿಶ್ರ ಮಾಡಿ. ಸಕ್ಕರೆ ಕರಗಿದ ನಂತ್ರ ಕೆಳಗಿಳಿಸಿ ಸರ್ವ್ ಮಾಡಿ.

ನವರಾತ್ರಿಯಂದು ಈ ಗುಪ್ತ ಕೆಲಸ ಮಾಡಿದ್ರೆ ತೃಪ್ತಳಾಗ್ತಾಳೆ ತಾಯಿ

$
0
0
04_10_2016-hanumandurga

ಹಿಂದೂ ಧರ್ಮದಲ್ಲಿ ನವರಾತ್ರಿಗೆ ಮಹತ್ವದ ಸ್ಥಾನವಿದೆ. ತಾಯಿ ದುರ್ಗೆಯನ್ನು ಆರಾಧಿಸಿ, ಸುಖ ಶಾಂತಿ ನೀಡೆಂದು ಭಕ್ತರು ಪ್ರಾರ್ಥಿಸ್ತಾರೆ. ಶಾಸ್ತ್ರದ ಪ್ರಕಾರ ಪೂಜೆ ಹಾಗೂ ಭೋಜನವನ್ನು ಗುಪ್ತವಾಗಿ ಮಾಡಬೇಕು. ಪೂಜೆ ಹಾಗೂ ಭೋಜನದ ಮೇಲೆ ಬೇರೆಯವರ ಕಣ್ಣು ಬೀಳಬಾರದು. ನವರಾತ್ರಿಯಂದು ಗುಪ್ತವಾಗಿ ಮಾಡುವ ಕೆಲವೊಂದು ಕೆಲಸಗಳು ತಾಯಿ ದುರ್ಗೆಯನ್ನು ಸುಲಭವಾಗಿ ಒಲಿಸಿಕೊಳ್ಳಲು ಸಹಾಯ ಮಾಡುತ್ತದೆ.

ಒಂಭತ್ತು ದಿನಗಳ ಕಾಲವೂ ಒಂಭತ್ತು ದೇವಿಯ ರೂಪಕ್ಕೆ ಪೂಜೆ ಮಾಡಲಾಗುತ್ತದೆ. ಒಂಭತ್ತು ದಿನವೂ ಬೇರೆ ಬೇರೆ ಮಂತ್ರಗಳನ್ನು ಜಪಿಸಬೇಕಾಗುತ್ತದೆ. ಮಂತ್ರವನ್ನು 108 ಬಾರಿ ಜಪಿಸಬೇಕು. ಹೀಗೆ ಮಾಡುವುದರಿಂದ ಭಕ್ತನಿಗೆ ವಿಶೇಷ ಲಾಭ ಲಭಿಸುತ್ತದೆ. ಸಂಜೆ ತಾಯಿಯ ಪೂಜೆಯನ್ನು ವಿಶೇಷವಾಗಿ ಮಾಡಬೇಕು. ಪೂಜೆಗಿಂತ ಮೊದಲು ದುರ್ಗೆಯ ಫೋಟೋದ ಬಳಿ 9 ದೀಪಗಳನ್ನು ಹಚ್ಚಬೇಕು. ಒಂದು ಪ್ಲೇಟ್ ನಲ್ಲಿ ಸ್ವಸ್ತಿಕ್ ಬಿಡಿಸಿ, ಅದನ್ನು ದೇವಿ ಮುಂದಿಡಿ. ಪೂಜೆಗೆ ಹೂ ಹಾಗೂ ಕುಂಕುಮವನ್ನು ಅವಶ್ಯಕವಾಗಿ ಬಳಸಿ.

ನವರಾತ್ರಿಯ ಪ್ರತಿದಿನ ತುಪ್ಪದ ದೀಪವನ್ನು ತುಳಸಿ ಮುಂದೆ ಹಚ್ಚಬೇಕು. ಹಾಗೆ ನಿರ್ಗತಿಕರಿಗೆ ಗುಪ್ತವಾಗಿ ದಾನ ಮಾಡಿ. ಗುಪ್ತವಾಗಿ ಮಾಡುವ ಸಹಾಯಕ್ಕೆ ದೇವಿ ಸಂತಸಗೊಳ್ತಾಳೆ. ತಾಯಿಯ ಜೊತೆ ಎಂದೂ ಹನುಮಂತನಿರ್ತಾನೆ. ಹಾಗಾಗಿ ತಾಯಿಯ ಪೂಜೆ ಜೊತೆಗೆ ಹನುಮಂತನ ಪೂಜೆ ಮಾಡುವುದನ್ನು ಮರೆಯಬೇಡಿ.


ನಿಮಗೆ ಮೆರುಗು ನೀಡುತ್ತೆ ನಿಮ್ಮ ಡ್ರೆಸ್, ಹೇಗೆ ಅಂತಿರಾ…?

$
0
0

ಊಟ ತನ್ನಿಚ್ಛೆ ನೋಟ ಪರರಿಚ್ಛೆ ಎನ್ನುವ ಗಾದೆ ಮಾತಿನಂತೆ ಆಹಾರವನ್ನು ಸೇವಿಸುವುದು ಅವರವರ ಇಷ್ಟಕ್ಕೆ ಅನುಸಾರವಾಗಿರುತ್ತದೆ. ಆದರೆ, ಬಟ್ಟೆಗಳನ್ನು ಧರಿಸುವುದು ಇತರರನ್ನು ಮೆಚ್ಚಿಸಲು. ಇದೆಲ್ಲಾ ಹಳೆ ಮಾತಾಯ್ತು, ತಮಗೆ ಇಷ್ಟವಾದ ಉಡುಗೆ ತೊಡುವುದು ಈಗಿನ ಟ್ರೆಂಡ್.

ಧರಿಸುವ ಬಟ್ಟೆಗಳು ಸುಂದರವಾಗಿ ಚೊಕ್ಕಟವಾಗಿರಬೇಕು. ಹಿತಮಿತವಾದ ಬಟ್ಟೆಗಳನ್ನು ಧರಿಸುವುದು ಸೌಂದರ್ಯದ ಲಕ್ಷಣಗಳಲ್ಲೊಂದು ಎನ್ನಲಾಗುತ್ತದೆ.

ಸೌಂದರ್ಯದ ಲಕ್ಷಣಗಳೆಂದು ಹಿತವಾದ ಉಡುಪು, ಮಿತವಾದ ಆಭರಣ, ಮಿತವಾದ ಮಾತು ಹಾಗೂ ವಿಶ್ವಾಸಪೂರ್ವಕವಾದ ನಡವಳಿಕೆ ಮೊದಲಾದವುಗಳನ್ನು ಪರಿಗಣಿಸಲಾಗುತ್ತದೆ.

ಕೆಲವು ಗಣ್ಯರು ಒಂದೇ ರೀತಿಯ ಡ್ರೆಸ್ ಮೂಲಕ ಗಮನ ಸೆಳೆಯುವುದನ್ನು ನೀವು ಗಮನಿಸಿರಬಹುದು. ಆ ವ್ಯಕ್ತಿಯನ್ನು ನೆನಪಿಸಿಕೊಂಡ ಕೂಡಲೇ ಅವರ ಡ್ರೆಸ್ ಕೂಡ ನೆನಪಿಗೆ ಬರುತ್ತದೆ. ಅದು ಅವರ ವ್ಯಕ್ತಿತ್ವವನ್ನೂ ಬಿಂಬಿಸುತ್ತದೆ.

ತಮ್ಮ ದೇಹದ ಆಕಾರ ಮತ್ತು ಬಣ್ಣಕ್ಕೆ ತಕ್ಕಂತೆ ಬಟ್ಟೆಗಳನ್ನು ಧರಿಸಿದಾಗ, ವ್ಯಕ್ತಿತ್ವಕ್ಕೆ ಮೆರುಗು ನೀಡುತ್ತದೆ. ಉತ್ತಮವಾದ ಉಡುಗೆಗಳು ಕೂಡ ನಿಮ್ಮನ್ನು ಮೆಚ್ಚುವಂತೆ ಮಾಡುತ್ತವೆ. ಬಣ್ಣದ ಉಡುಪುಗಳು, ತಿಳಿ ಬಣ್ಣದ ಬಟ್ಟೆಗಳು ಕೆಲವರಿಗೆ ಹೆಚ್ಚು ಆಕರ್ಷಕವಾಗಿ ಕಾಣುತ್ತವೆ.

ಯಾವುದೇ ಉಡುಪುಗಳಿರಲಿ, ಸ್ವಚ್ಛವಾಗಿರಬೇಕು. ಬಣ್ಣಗಳು ಮನಸ್ಸಿಗೆ ಹಿತವೆನಿಸುವಂತಿರಬೇಕು. ದೇಹದ ಆಕಾರಕ್ಕೆ ಅನುಗುಣವಾಗಿ ಬಟ್ಟೆ ಧರಿಸುವುದರಿಂದ ಅದು ನಿಮಗೆ ಮತ್ತು ನೋಡುಗರಿಗೆ ಹಿತವಾಗುತ್ತದೆ. ನಿಮ್ಮ ವ್ಯಕ್ತಿತ್ವಕ್ಕೆ ಮೆರುಗು ನೀಡುತ್ತೆ ನೀವು ಧರಿಸುವ ಉಡುಪು ಎಂಬುದು ನಿಮಗೆ ತಿಳಿದಿರಲಿ.

ಅರಿಶಿನ ಇದ್ದಲ್ಲಿ ಆರೋಗ್ಯ….

$
0
0
raw-ground-turmeric-jpg-653x0_q80_crop-smart

ಪ್ರತಿದಿನ ಅರಿಶಿನ ಬೆರೆಸಿದ ಒಂದು ಲೋಟ ಹಾಲು ಕುಡಿದ್ರೆ ನೀವು ಆರೋಗ್ಯವಾಗಿರಬಹುದು. ಹಾಲು ಮತ್ತು ಅರಿಶಿನ ಎರಡೂ ನೈಸರ್ಗಿಕ ಆ್ಯಂಟಿಬಯೋಟಿಕ್ ಇದ್ದಂತೆ. ಹಲವು ಅಂಟುರೋಗಗಳು ಬರದಂತೆ ಇದು ತಡೆಯುತ್ತದೆ. ಅರಿಶಿನ ಬೆರೆಸಿದ ಹಾಲನ್ನು ಸಾಂಪ್ರದಾಯಿಕ ಮನೆ ಮದ್ದಾಗಿ ಬಳಸಲಾಗುತ್ತದೆ.

ಶೀತ ಮತ್ತು ಕೆಮ್ಮು : ಅರಿಶಿನದಲ್ಲಿರುವ ನಂಜು ನಿರೋಧಕ ಮತ್ತು ಸಂಕೋಚಕ ಗುಣಗಳು ಹಾಲಿನ ಹಿತವಾದ ಪರಿಣಾಮದೊಂದಿಗೆ ಬೆರೆತು ಶೀತ ಮತ್ತು ಕೆಮ್ಮನ್ನು ಗುಣಪಡಿಸುತ್ತವೆ. ಆ್ಯಂಟಿವೈರಲ್ ಮತ್ತು ಆ್ಯಂಟಿಬ್ಯಾಕ್ಟೀರಿಯಲ್ ಅಂಶಗಳಿರೋದ್ರಿಂದ ಇದು ಶೀತ ಮತ್ತು ಕೆಮ್ಮಿಗೆ ಅತ್ಯಂತ ಪರಿಣಾಮಕಾರಿ ಔಷಧ.

ಸಂಧಿವಾತ : ಅರಿಶಿನ ಬೆರೆಸಿದ ಹಾಲು ಸಂಧಿವಾತವನ್ನು ಗುಣಪಡಿಸುತ್ತದೆ, ಸ್ನಾಯುಗಳಲ್ಲಿ ಊತವಿದ್ದರೆ ಅದನ್ನು ಕಡಿಮೆ ಮಾಡುತ್ತದೆ. ಸ್ನಾಯು ಮತ್ತು ಕೀಲುಗಳ ನೋವನ್ನು ಕಡಿಮೆ ಮಾಡುವುದರಿಂದ ಅವು ಇನ್ನಷ್ಟು ಫ್ಲೆಕ್ಸಿಬಲ್ ಆಗುತ್ತವೆ.

ನೋವು : ಆ್ಯಂಟಿಒಕ್ಸಿಡೆಂಟ್ ಗುಣವಿರುವುದರಿಂದ ಅರಿಶಿನ ಬೆರೆಸಿದ ಹಾಲು ನೋವು ನಿವಾರಕವಾಗಿ ಕೆಲಸ ಮಾಡುತ್ತದೆ. ಬೆನ್ನು ಮೂಳೆ ಹಾಗೂ ದೇಹದ ಕೀಲುಗಳಿಗೆ ಬಲ ತುಂಬುತ್ತದೆ.

ಯಕೃತ್ತನ್ನು ಡಿಟೊಕ್ಸ್ ಮಾಡುತ್ತದೆ : ಅರಿಶಿನ ಬೆರೆಸಿದ ಹಾಲು ನೈಸರ್ಗಿಕ ಲಿವರ್ ಡಿಟೊಕ್ಸಿಫೈಯರ್, ಜೊತೆಗೆ ರಕ್ತವನ್ನು ಕೂಡ ಶುದ್ಧ ಮಾಡುತ್ತದೆ. ಹಾಗಾಗಿ ಯಕೃತ್ತು ಸರಿಯಾಗಿ ಕಾರ್ಯನಿರ್ವಹಿಸುವಂತೆ ನೋಡಿಕೊಳ್ಳುತ್ತದೆ. ಯಕೃತ್ತು ಮತ್ತು ದುಗ್ಧನಾಳ ವ್ಯವಸ್ಥೆಯನ್ನು ಶುದ್ಧವಾಗಿಡುತ್ತದೆ.

ಜೀರ್ಣಕ್ರಿಯೆಗೆ ಸಹಕಾರಿ : ಅರಿಶಿನ ಬೆರೆಸಿದ ಹಾಲು ಕುಡಿದ್ರೆ ನಿಮ್ಮ ಜೀರ್ಣಕ್ರಿಯೆ ಸುಲಲಿತವಾಗುತ್ತದೆ. ಅಲ್ಸರ್, ಅತಿಸಾರ ಮತ್ತು ಅಜೀರ್ಣದಂತಹ ಸಮಸ್ಯೆಯಿಂದ ದೂರವಿರಬಹುದು. ಅರಿಶಿನ ಪ್ರಬಲ ನಂಜು ನಿರೋಧಕವಾಗಿರುವುದರಿಂದ ಕರುಳಿನ ಆರೋಗ್ಯವನ್ನು ಕಾಪಾಡುತ್ತದೆ, ಹೊಟ್ಟೆ ಹುಣ್ಣಾಗದಂತೆ ನೋಡಿಕೊಳ್ಳುತ್ತದೆ.

ಮನೆಯಲ್ಲಿಯೇ ಮಾಡಿ ಬನಾನ- ಕೋಕನೆಟ್ ಬ್ರೆಡ್

$
0
0
banana bread 4556

ಇಂದು ಸಾಮಾನ್ಯವಾಗಿ ಎಲ್ಲರೂ ಬೇಕರಿ ತಿಂಡಿಗಳಿಗೆ ಹೆಚ್ಚಿನ ಆದ್ಯತೆ ನೀಡುತ್ತಾರೆ. ಆದರೆ ಕೆಲವೊಂದು ತಿಂಡಿಗಳನ್ನು ಮನೆಯಲ್ಲಿಯೇ, ರುಚಿ ಶುಚಿಯಾಗಿ ಮಾಡಿಕೊಳ್ಳಬಹುದಾಗಿದ್ದು, ಆರೋಗ್ಯಕ್ಕೂ ಒಳ್ಳೆಯದು.

ಬೇಕಾಗುವ ಸಾಮಗ್ರಿಗಳು:
ಮೈದಾ-ಒಂದು ಕಪ್, ಮೊಸರು-ಒಂದು ಕಪ್‍, ಅಡುಗೆ ಸೋಡಾ-3/4 ಚಮಚ, ನಿಂಬೆರಸ-1 ಚಮಚ, ಹಣ್ಣಾಗಿರುವ ಎರಡು ಪಚ್ಚಬಾಳೆ ಹಣ್ಣು, ಉಪ್ಪು-ಅರ್ಧ ಚಮಚ, ಸಕ್ಕರೆ- ಒಂದು ಕಪ್, ಎಣ್ಣೆ- ಅರ್ಧ ಕಪ್, ಮೊಟ್ಟೆ- ಮೂರು, ಹುರಿದ ತೆಂಗಿನ ತುರಿ-ಅರ್ಧ ಕಪ್, ವೆನಿಲ್ಲಾ ಎಸೆನ್ಸ್-ಅರ್ಧ ಚಮಚ

ತಯಾರಿಸುವ ವಿಧಾನ:
ಓವೆನ್ ಅನ್ನು 350 ಡಿಗ್ರಿ ಉಷ್ಣತೆಗೆ ಬಿಸಿ ಮಾಡಿ, ಎಣ್ಣೆ ಮತ್ತು ಬ್ರೆಡ್ ಪ್ಯಾನ್ ತೆಗೆದುಕೊಂಡು ಪಕ್ಕದಲ್ಲಿಡಿ. ದೊಡ್ಡ ಬಟ್ಟಲಿನಲ್ಲಿ ಮೈದಾ, ಅಡುಗೆ ಸೋಡಾ, ಉಪ್ಪು ಹಾಕಿ ಚೆನ್ನಾಗಿ ಮಿಶ್ರಣ ಮಾಡಿ, ಇನ್ನೊಂದು ಬಟ್ಟಲಿನಲ್ಲಿ ಸಕ್ಕರೆ, ಮೊಟ್ಟೆ, ವೆನಿಲ್ಲಾ, ಎಣ್ಣೆ, ಮೊಸರು, ನಿಂಬೆರಸ ಹಾಕಿ ಚೆನ್ನಾಗಿ ಕಲಸಿರಿ, ನಂತರ ಕಲಸಿದ ಮೈದಾವನ್ನು ನಿಧಾನವಾಗಿ ಹಾಕಿ ಮಿಕ್ಸ್ ಮಾಡಿ, ಬಳಿಕ ಎಣ್ಣೆ ಹಾಕಿಟ್ಟಿರುವ ತಟ್ಟೆಗೆ ಸುರಿಯಿರಿ, ಅದರ ಮೇಲೆ ತೆಂಗಿನ ತುರಿಯನ್ನು ಉದುರಿಸಿ, ಮೂವತ್ತು ನಿಮಿಷ ಇಟ್ಟು ಅಲ್ಯುಮಿನಿಯಂ ಕವರ್ ಅನ್ನು ಮುಚ್ಚಿ ಮತ್ತೆ ಅರ್ಧ ಗಂಟೆ ಬೇಯಿಸಿ, ಬಳಿಕ ನೈಫ್ ನಿಂದ ಬೆಂದಿದೆಯೇ ಎಂದು ಪರೀಕ್ಷಿಸಿ, ಬೆಂದ ನಂತರ ಮೈಕ್ರೋ ಓವೆನ್ ನಿಂದ ಹೊರತೆಗೆದು ಹತ್ತು ನಿಮಿಷ ಹಾಗೆಯೇ ಇಡಿ.

ಆನಂತರ ಅದನ್ನು ಕತ್ತರಿಸಿ. ಇಷ್ಟು ಮಾಡಿದರೆ ರುಚಿಕರವಾದ ಬ್ರೆಡ್ ರೆಡಿಯಾಗುತ್ತದೆ. ಇದನ್ನು ಒಂದು ದಿನ ಇಟ್ಟು ತಿಂದರೆ ಹೆಚ್ಚು ರುಚಿಕರವಾಗುತ್ತದೆ. ಪ್ಲಾಸ್ಟಿಕ್ ನಲ್ಲಿ ಹಾಕಿಟ್ಟರೆ ಈ ಬ್ರೆಡ್ ಅನ್ನು ಮೂರರಿಂದ ನಾಲ್ಕು ದಿನ ಕಾಲ ಇಡಬಹುದು.

ಖಿನ್ನತೆಯಿಂದ ಬಳಲುತ್ತಿರುವವರಿಗೆ ಮೊಸರೇ ಮದ್ದು!

$
0
0
yogurt

ಇತ್ತೀಚಿನ ದಿನಗಳಲ್ಲಿ ಪ್ರತಿಯೊಬ್ಬರ ಜೀವನವೂ ಬಹಳ ಒತ್ತಡದಿಂದ ಕೂಡಿದೆ. ಪ್ರತಿಕ್ಷಣವೂ ಪೈಪೋಟಿ, ಕೆಲಸದ ಒತ್ತಡ, ಕೌಟುಂಬಿಕ ಸಮಸ್ಯೆ ಹೀಗೆ ಒಂದಿಲ್ಲೊಂದು ಸಮಸ್ಯೆಯಿಂದ ಬಳಲುತ್ತಿದ್ದಾರೆ. ಇದರಿಂದ ಮಾನಸಿಕ ಆರೋಗ್ಯದ ಮೇಲೆ ದುಷ್ಪರಿಣಾಮ ಉಂಟಾಗುತ್ತಿದೆ.

ಖಿನ್ನತೆ ಆವರಿಸಿಕೊಳ್ಳುತ್ತದೆ. ಕೇವಲ ಮೊಸರು ತಿನ್ನುವ ಮೂಲಕ ನೀವು ಖಿನ್ನತೆಯಿಂದ ಪಾರಾಗಬಹುದು. ಸಂಶೋಧನೆಯೊಂದರಲ್ಲಿ ಮೊಸರು ಖಿನ್ನತೆಗೆ ಮದ್ದು ಅನ್ನೋದು ದೃಢಪಟ್ಟಿದೆ.ಮೊಸರಿನಲ್ಲಿರುವ ಪ್ರೋ ಬ್ಯಾಕ್ಟೀರಿಯಾ ಲ್ಯಾಕ್ಟೋಬ್ಯಾಸಿಲ್ಲಸ್, ಖಿನ್ನತೆ ಮತ್ತು ಆತಂಕವನ್ನು ದೂರ ಮಾಡುತ್ತದೆ.

ಮೊಸರು ಸೇವನೆಯಿಂದ ಮಾನಸಿಕ ಆರೋಗ್ಯ ಸಮಸ್ಯೆಗಳಿಗೂ ಪರಿಹಾರ ಸಿಗುತ್ತದೆ. ಖಿನ್ನತೆಗೆ ಸೂಕ್ತ ಸಮಯದಲ್ಲಿ ಸರಿಯಾದ ಚಿಕಿತ್ಸೆ ಪಡೆಯಬೇಕು. ಇಲ್ಲವಾದಲ್ಲಿ ಬಹಳಷ್ಟು ಸಮಸ್ಯೆಗಳು ಉದ್ಭವಿಸುತ್ತವೆ. ಖಿನ್ನತೆಗೆ ಮೊಸರೇ ಮದ್ದು ಅನ್ನೋದು ಇಲಿಗಳ ಮೇಲೆ ನಡೆಸಿದ ಪ್ರಯೋಗದಿಂದ ದೃಢಪಟ್ಟಿದೆ. ಇಲಿಗಳ ಆಹಾರದಲ್ಲಿ ಲ್ಯಾಕ್ಟೋಬ್ಯಾಸಿಲ್ಲಸ್ ಪ್ರಮಾಣ ಕಡಿಮೆ ಮಾಡಿದಾಗ ಅವು ಖಿನ್ನತೆಗೆ ಒಳಗಾಗಿದ್ದವು. ಆಹಾರದಲ್ಲಿ ಪ್ರೋ ಬ್ಯಾಕ್ಟೀರಿಯಾ ಅಂಶವನ್ನು ಸೇರ್ಪಡೆ ಮಾಡಿದಾಗ ಸಹಜ ಸ್ಥಿತಿಗೆ ಮರಳಿದ್ದವು.

ಹೊಟ್ಟೆಯಲ್ಲಿರುವ ಲ್ಯಾಕ್ಟೋಬ್ಯಾಸಿಲ್ಲಸ್ ಪ್ರಮಾಣ ಮೆಟಾಬೊಲಿಕ್ ವ್ಯವಸ್ಥೆ ಮೇಲೆ ಪರಿಣಾಮ ಬೀರುತ್ತದೆ, ಇದರಿಂದ ಖಿನ್ನತೆ ಆವರಿಸಿಕೊಳ್ಳುತ್ತದೆ ಅಂತಾ ವಿಜ್ಞಾನಿಗಳು ತಿಳಿಸಿದ್ದಾರೆ. ಇನ್ಮೇಲೆ ನಿಮ್ಮ ಡಯಟ್ ನಲ್ಲಿ ಮೊಸರನ್ನೂ ಸೇರಿಸಿ. ಆದ್ರೆ ಮೊಸರನ್ನು ಯಾವ ಪ್ರಮಾಣದಲ್ಲಿ ಸೇವಿಸಿದ್ರೆ ಉತ್ತಮ ಅನ್ನೋ ಬಗ್ಗೆ ವೈದ್ಯರ ಸಲಹೆ ಪಡೆಯಿರಿ.

ನಿಮ್ಮ ಲಿವರ್ ಗೆ ಅಪಾಯ ತಂದೊಡ್ಡುವ ಅಂಶಗಳು

$
0
0

not-only-alcohol-these-factors-too-increase-risk-of-liver-diseaseಅತಿಯಾದ ಮದ್ಯಸೇವನೆ ಆರೋಗ್ಯಕ್ಕೆ ಹಾನಿಕರ ಅನ್ನೋದು ಗೊತ್ತೇ ಇದೆ. ಇದರಿಂದ ಲಿವರ್ ಸಿರೋಸಿಸ್ ಕೂಡ ಉಂಟಾಗಬಹುದು. ಮದ್ಯ ಸೇವನೆಯನ್ನು ಹೊರತುಪಡಿಸಿ ಲಿವರ್ ಸಮಸ್ಯೆಗೆ ಕಾರಣವಾಗಬಹುದಾದ ಇತರ ಅಂಶಗಳು ಯಾವುವು ನೋಡೋಣ.

ಬೊಜ್ಜು : ಬೊಜ್ಜಿನ ಸಮಸ್ಯೆ ಇರುವವರಿಗೆ ಲಿವರ್ ತೊಂದರೆ ಕಾಣಿಸಿಕೊಳ್ಳುವ ಸಾಧ್ಯತೆ ಹೆಚ್ಚು. ಯಾಕಂದ್ರೆ ಒಬೆಸಿಟಿ ಸಿರೋಸಿಸ್ ಗೆ ಲಿಂಕ್ ಆಗಿದ್ದು, ಲಿವರ್ ವೈಫಲ್ಯವೂ ಉಂಟಾಗಬಹುದು. ದೇಹದಲ್ಲಿ ಅತಿಯಾದ ಬೊಜ್ಜಿನಂಶ ಇದ್ರೆ ಅದು ಲಿವರ್ ನಲ್ಲಿ ಸೇರಿಕೊಂಡು ಅಪಾಯ ಉಂಟುಮಾಡುತ್ತದೆ.

ಅತಿಯಾದ ಉಪ್ಪು ಸೇವನೆ : ಅತಿಯಾದ ಉಪ್ಪು ಸೇವನೆ ಆರೋಗ್ಯಕ್ಕೆ ಒಳ್ಳೆಯದಲ್ಲ. ಅದರಿಂದ ಯಕೃತ್ತಿನಲ್ಲಿ ದ್ರವ ಉತ್ಪಾದನೆಯಾಗಿ ಊತ ಕಾಣಿಸಿಕೊಳ್ಳುತ್ತದೆ.

ಧೂಮಪಾನ : ಧೂಮಪಾನದಿಂದ ಯಕೃತ್ತಿನ ಕಾರ್ಯನಿರ್ವಹಣೆ ಮೇಲೆ ನೇರವಾದ ಪರಿಣಾಮವಿಲ್ಲ. ಆದ್ರೆ ಸಿಗರೇಟಿನಲ್ಲಿರುವ ಅಪಾಯಕಾರಿ ರಾಸಾಯನಿಕಗಳು ಲಿವರ್ ಸೆಲ್ಸ್ ಗೆ ಹಾನಿ ಉಂಟುಮಾಡುತ್ತವೆ. ಇದರಿಂದ ಯಕೃತ್ತಿನ ಮೇಲೆ ಒತ್ತಡ ಹೆಚ್ಚಾಗುತ್ತದೆ.

ಡಯಾಬಿಟಿಸ್ : ಸಕ್ಕರೆ ಖಾಯಿಲೆ ಇರುವವರಿಗೆ ಲಿವರ್ ತೊಂದರೆ ಕಾಣಿಸಿಕೊಳ್ಳುವ ಸಾಧ್ಯತೆ ಹೆಚ್ಚು. ಯಾಕಂದ್ರೆ ಅವರ ರಕ್ತದಲ್ಲಿ ಇನ್ಸುಲಿನ್ ಪ್ರಮಾಣ ಹೆಚ್ಚಾಗಿರುತ್ತದೆ. ಇದರಿಂದ ಹೊಟ್ಟೆಯ ತೂಕ ಜಾಸ್ತಿಯಾಗಿ ಲಿವರ್ ಖಾಯಿಲೆ ಕಾಣಿಸಿಕೊಳ್ಳಬಹುದು.

 

 

Viewing all 14227 articles
Browse latest View live




Latest Images